ಮೋದಿಯವರ ಕಂಡರಿಯದ ಜೀವನ

“ಇತಿಹಾಸ ಕಂಡರಿಯದಂತಹ ಸಾಧನೆ ಮಾಡಿದ ನಮ್ಮ ನೆಚ್ಚಿನ ಪ್ರಧಾನ ಮಂತ್ರಿ, ನರೇಂದ್ರ ಮೋದಿಜಿ”

ನರೇಂದ್ರ ಮೋದಿಜಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಹಾರ್ದಿಕ ಶುಭಾಶಯಗಳು, ದೇವರು ನಿಮಗೆ ಒಳ್ಳೆಯ, ಆರೋಗ್ಯ ,ಆಯಸ್ಸು ,ಮತ್ತು ಸಮೃದ್ಧಿ ಕೊಡಲಿ ಎಂದು ಶುಭ ಹಾರೈಸುತ್ತೇನೆ.

ನರೇಂದ್ರ ಮೋದಿಜಿ ಅವರ ಹೆಸರು, ನಮ್ಮ ದೇಶದಲ್ಲಿ ಮಾತ್ರ ಅಲ್ಲ, ಇಡೀ ವಿಶ್ವದಲ್ಲಿ ಅವರು ಹೆಸರುವಾಸಿ ಆಗಿರುವಂತಹ ನಿಷ್ಠಾವಂತ ಪ್ರಧಾನಮಂತ್ರಿಯವರಲ್ಲಿ ಒಬ್ಬರು ಎಂದು ಹೇಳಬಹುದು.
ಮೋದಿಜಿ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು, ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಅವರನ್ನು ಕಂಡರೆ ತುಂಬಾ ಪ್ರೀತಿ, ನಮ್ಮ ಭಾರತ ದೇಶದ ಹೆಮ್ಮೆಯ ಪುತ್ರರು, ಇಡೀ ವಿಶ್ವದ ತುಂಬೆಲ್ಲ ನಮ್ಮ ಭಾರತದ ಸಂಸ್ಕೃತಿ, ನಮ್ಮ ದೇಶದ ಪವಿತ್ರತೆ, ಧಾರ್ಮಿಕತೆ, ರಾಜಕೀಯತೆ ,ಆರ್ಥಿಕತೆ ಎಲ್ಲವನ್ನೂ ಬಹಳ ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುವಂತಹ ನಮ್ಮ ಹೆಮ್ಮೆಯ ಪ್ರಧಾನಿ ನಮ್ಮ ಮೋದಿಜಿ.

##ಜೀವನ##
ಅವರ ಜೀವನ ಕುರಿತು ನೋಡುವುದಾದರೆ ಅವರು ತುಂಬಾ ಬಡತನ ಕುಟುಂಬದಲ್ಲಿ ಜನಿಸಿದವರು. ಅವರ ಜೀವನ ತುಂಬಾನೇ ಸರಳ ಹಾಗೂ ಶಿಸ್ತಿನ ಸಿಪಾಯಿಯೆಂದೆ ಹೆಸರುವಾಸಿ.
ಪೂರ್ಣ ಹೆಸರು// ನರೇಂದ್ರ ಮೋದಿಜಿ
ಜನನ //1950 ಸೆಪ್ಟೆಂಬರ್ 17
ತಂದೆ// ದಾಮೋದರ್ ದಾಸ್ ಮೋಲಚಂದ
ತಾಯಿ// ಹೀರಾಬೆನ್

ಅವರ ಉದರದಲ್ಲಿ ಮೂರನೆಯ ಮಗನಾಗಿ ಜನಿಸಿದರು. ಗುಜರಾತಿನ ವಾಡನಗರದಲ್ಲಿ ಜನಸಿ,ಆ ಊರಿನ ರೈಲ್ವೆ ನಿಲ್ದಾಣದಲ್ಲಿ ಅವರ ತಂದೆ-ತಾಯಿ ಒಂದು ಚಿಕ್ಕದಾದಂತಹ ಟೀ ಅಂಗಡಿಯನ್ನು ಇಟ್ಟುಕೊಂಡು ತಮ್ಮ ಜೀವನವನ್ನು ನಡೆಸುತ್ತಿದ್ದರು. ಅವರ ತಂದೆ ತಾಯಿಗೆ ಸಹಾಯವಾಗಲೆಂದು ಚಿಕ್ಕವಯಸ್ಸಿನಲ್ಲಿಯೇ ಚಹಾ ಮಾರುವಂತಹ ಕೆಲಸದಲ್ಲಿಯೇ ತಮ್ಮನ್ನು ತಾವು ತೊಡಗಿಸಿಕೊಂಡರು ರೈಲಿನಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರಿಗೆ ಚಹಾವನ್ನು ಮಾರುವ ಮೂಲಕ ಅನೇಕ ಜನರ ಜೊತೆ ಒಳ್ಳೆಯ ಸಂಬಂಧವನ್ನು ಬೆಳೆಸಿಕೊಂಡರು .

ಹೀಗೆ ಚಿಕ್ಕವಯಸ್ಸಿನಿಂದಲೇ ಅವರು ಬಹಳ ಪರಿಶ್ರಮಪಡುತ್ತಿದರು, ಚಿಕ್ಕವಯಸ್ಸಿನಿಂದಲೇ ಧೈರ್ಯ, ಆತ್ಮವಿಶ್ವಾಸ, ಮನೋಧರ್ಮವನ್ನು ಹೊಂದಿರುವಂತಹ ವ್ಯಕ್ತಿತ್ವ ಅವರದಾಗಿತ್ತು. ಅವರು ಚಿಕ್ಕವಯಸ್ಸಿನಿಂದಲೇ ಹಿಡಿದು ಆಧ್ಯಾತ್ಮಿದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು. ಆಧ್ಯಾತ್ಮದಲ್ಲಿ ಹೆಚ್ಚಿನ ನಂಬಿಕೆ ಉಳ್ಳವರಾಗಿದ್ದರು. ಚಿಕ್ಕವಯಸ್ಸಿನಿಂದಲೇ ಅವರು ಕಷ್ಟವೇ ಎಂಬುದನ್ನು ಅರಿತುಕೊಂಡು ಜೀವನದ ಸಂಘರ್ಷದಲ್ಲಿ ಹೋರಾಡಿದ ಹೋರಾಟಗಾರರ ಅವರು.

ಅವರು ಚಿಕ್ಕವಯಸ್ಸಿನಲ್ಲಿ ತುಂಬಾ ಒಳ್ಳೆಯ ಈಜುಗಾರರು * ಇಲ್ಲಿ ಒಂದು ಸಂಗತಿ ಕುರಿತು ಹೇಳಬಯಸುತ್ತೇನೆ*
ಅವರ ಊರಿನ ಪಕ್ಕದಲ್ಲಿ ನೀರಿನ ಮಧ್ಯದಲ್ಲಿ ಒಂದು ದೇವಸ್ಥಾನವಿತ್ತು. ಅವನ್ದು ದೇವಸ್ಥಾನದ ಕಳಸದ ಮೇಲೆ ಧ್ವಜವನ್ನು ಹಾರಿಸಲು ಬೇಕಾಗಿತ್ತು. ಆದರೆ ಅಲ್ಲಿ ಒಂದು ಸಮಸ್ಯೆ ಎದುರಾಗಿತ್ತು. ಅದೇನೆಂದರೆ ನೀರಿನ ಮಧ್ಯೆ ಇರುವ ದೇವಸ್ಥಾನದ ಸುತ್ತಮುತ್ತ ಅನೇಕ ರೀತಿಯ ಮಸೂಳೆಗಳು ಕ್ರಿಮಿಕೀಟಗಳು ಇದ್ದವು. ಅಲ್ಲಿ ಹೋಗುವಂತಹ ಕಾರ್ಯ ಯಾರಿಂದಲೂ ಸಾಧ್ಯವಾಗದೇ ಇದ್ದಾಗ ನರೇಂದ್ರ ಮೋದಿಜಿ ದೇವಸ್ಥಾನಕ್ಕೆ ಹೋಗಿಆ ದೇವಾಲಯದ ಮೇಲೆ ಧ್ವಜವನ್ನು ಹಾರಿಸಿ. ಮಸುಳೆಯ ಮರಿಯನ್ನು ಹಿಡಿದುಕೊಂಡು ಮನೆಗೆ ಬಂದರು. ಅವರೇ ಈ ಸಾಹಸವನ್ನು ಕಂಡು ಎಲ್ಲರೂ ಆಶ್ಚರ್ಯಚಕಿತರಾದರು.
ಹೀಗೆ ಮುಂದೆ ಮುಂದೆ ಅವರು ದೊಡ್ಡವರಾಗುತ್ತಾ ಅನೇಕ ಸಮಾಜಿಕ, ರಾಜಕೀಯ ಚಳುವಳಿಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ಭಾಗವಹಿಸಿದರು.

##ಮದುವೆ##
ಮೋದಿಜಿ ಅವರಿಗೆ 13ನೇ ವಯಸ್ಸಿನಲ್ಲಿ ಅವರಿಗೆ ಇಷ್ಟವಿಲ್ಲದಿದ್ದರೂ ಕೂಡ ಜಶೋದಾಬೆನ್ ಜಿಮ್ಮರ್ ಲಾಲ್ ಎಂಬುವರ ಜೊತೆ ಮದುವೆಯಾಗುತ್ತದೆ, ಆದರೆ ಅವರು ಕೆಲವೊಂದು ದಿನಗಳಲ್ಲಿ ಮದುವೆಯೆಂಬ ವೈವಾಹಿಕ ಬಂಧನದಿಂದ ಹೊರ ಬರುತ್ತಾರೆ. ಅವರ ಹೆಂಡತಿ ಒಳ್ಳೆಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಾ. ಇತ್ತೀಚಿಗೆ ನಿವೃತ್ತಿಯಾಗಿ ಇದ್ದಾರೆ ಎಂದು ಹೇಳಬಹುದು

##ಸಂಘಗಳು##
ಇನ್ಮುಂದೆ ಮುಂದೆ ಅವರು ಅನೇಕ ರೀತಿಯ ಚಳುವಳಿಯಲ್ಲಿ ಭಾಗವಹಿಸಿದ ನಂತರ ಅವರಿಗೆ ಅನೇಕ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು. ಆರ್, ಎಸ್, ಎಸ್, ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.
1975ಇಂದಿರಾ ಗಾಂಧೀಜಿ ತುರ್ತುಪರಿಸ್ಥಿತಿಯನ್ನು ಘೋಷಿಸಿದಾಗ ಅವರನ್ನು ವಿರೋಧಿಸಿ ತಮ್ಮದೇ ಆದ ರೀತಿಯಲ್ಲಿ ಸೇವೆಯನ್ನು ಸಲ್ಲಿಸಲು ಮುಂದಾದರು
ABVP ಮುಖಂಡರಾಗಿ ಸೇವೆ ಸಲ್ಲಿಸಿದರು.
##ರಾಜಕೀಯ##
1975 ಭಾರತದ ಪ್ರಧಾನಮಂತ್ರಿ ಇಂದ್ರಾಗಾಂಧಿ ತುರ್ತುಪರಿಸ್ಥಿತಿಯನ್ನು ಘೋಷಿಸಿದಾಗ, ಗುಜರಾತ್ ಸಂಘರ್ಷಸಮಿತಿಯಿಂದ ಇವರನ್ನು ಕಾರ್ಯದರ್ಶಿಯನ್ನಾಗಿ ನೇಮಕ ಮಾಡುತ್ತಾರೆ ಆಗ ಅವರು ಅವರ ವಿರುದ್ಧ ಸಿಂಹಸ್ವಪ್ನ ದಂತೆಎದೆದಟ್ಟಿ ನಿಲ್ಲುತ್ತಾರೆ.1985 ಇದರಲ್ಲಿ ಆರ , ಎಸ್ ಎಸ್ ನಿಂದ ನಿವೃತ್ತಿ ಹೊಂದಿ. ಬಿಜೆಪಿಯಲ್ಲಿ ನೇಮಕಗೊಳ್ಳುತ್ತಾರೆ.

2001 ಅಕ್ಟೋಬರ್ 7ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ . ಒಳ್ಳೆಯ ಬಹುಮತದಿಂದ ರಾಜಕೀಯದಲ್ಲಿ ತಮ್ಮನ್ನು ತೊಡಗಿಸಿಕೊಂಡು, ಅನೇಕ ರೀತಿಯ ಯೋಜನೆ,
ರಾಜಕೀಯ ಪಕ್ಷ
ಭಾರತೀಯ ಜನತಾ ಪಾರ್ಟಿ

ಗುಜರಾತಿನ ಮುಖ್ಯಮಂತ್ರಿಯಾಗಿ ಮುಂದೆ ಭಾರತ ದೇಶದ ಪ್ರಧಾನಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ನಿಂಗೆ ಒಂದು ಕಾಲದಲ್ಲಿ ಚಹಾ ಮಾಡುವಂತಹ ವ್ಯಕ್ತಿ, ಇಂದು ನಮ್ಮ ಭಾರತ ದೇಶದ ಹೆಮ್ಮೆಯ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸುತ್ತಿರುವುದು ಬಹಳ ಸಂತೋಷದ ಸಂಗತಿ ಎಂದು ಹೇಳಬಹುದು. ಯಾವ ಕಾಲದಲ್ಲಿ ಯಾರು ಹೇಗಾಗುತ್ತಾರೆ ಎಂದು ಹೇಳುವುದು ಬಹಳ ಕಷ್ಟಕರ ಕೆಲಸ. ಆದರೆ ನಾವು ಕಾಲಕ್ಕೆ ತಕ್ಕಂತೆ ನಡೆಯುವಂತಹ ಸಾಮರ್ಥ್ಯ ನಮ್ಮನ್ನು ನಾವು ಬೆಳೆಸಿಕೊಳ್ಳಬೇಕು. ನಮ್ಮ ಮೋದಿಜಿ ಅವರು ಕೂಡ ಕಾಲಕ್ಕೆ ತಕ್ಕಂತೆ ಅವರು ಕೈಜೋಡಿಸಿ, ಸತತ ಪರಿಶ್ರಮ ಶ್ರದ್ಧೆ ,ಪ್ರಾಮಾಣಿಕತೆ, ನಿಷ್ಠೆ, ತ್ಯಾಗ ಮನೋಭಾವನೆ, ಶಾಂತಿಯತೆ, ತಮ್ಮ ಆಯುಧಗಳನ್ನು ಆಗಿ ಮಾಡಿಕೊಂಡುರು, ಇದು ಇವತ್ತು ಇಡಿ ವಿಶ್ವದ ತುಂಬಾ ನರೇಂದ್ರ ಮೋದಿಜಿ ಎಂಬ ಝೆಂಕಾರವನ್ನು ಮೊಳಗುತ್ತಿದೆ.
ಇದಕ್ಕೆಲ್ಲ ಕಾರಣ ಅವರು ದೇಶದ ಪ್ರತಿ ಇದ್ದಂತಹ ಪ್ರೀತಿ ಕರುಣೆ ತ್ಯಾಗ ಹಗಲಿರುಳು ಎನ್ನದೆ ಸದಾ ದೇಶದ ಅಭಿವೃದ್ಧಿಗಾಗಿ ತಮ್ಮನ್ನು ತಾವು ಮುಡಿಪಾಗಿಟ್ಟು ಕೊಂಡು ಭಾರತ ದೇಶದ ಹೆಮ್ಮೆಯ ಪುತ್ರರಾಗಿದ್ದಾರೆ ನಮ್ಮ ನರೇಂದ್ರ ಮೋದಿಜಿ.

ನಮ್ಮ ನರೇಂದ್ರ ಮೋದಿಜಿಯವರ ವರ್ಣನೆಗೆ ಪದಗಳೇ ಸಾಲದು, ಅವರ ಕೀರ್ತಿ ದೇಶ-ವಿದೇಶಗಳಲ್ಲಿ ಕೂಡ ಅತಿ , ಉನ್ನತ ಮಟ್ಟದಲ್ಲಿ ವಿಶ್ವದಲ್ಲೆಲ್ಲ ಅವರ ಕೀರ್ತಿ ಹರಡಿದೆ
##ಇಡೀ ವಿಶ್ವದಲ್ಲಿಯೆ ನಿಷ್ಕಳಂಕವಾದ ರಾಜಕೀಯ ವ್ಯಕ್ತಿ ಎಂಬ ಹೆಗ್ಗಳಿಕೆ ಯಲ್ಲಿ ಮೊದಲನೇ ಸ್ಥಾನ ನಮ್ಮ ನರೇಂದ್ರ ಮೋದಿಜಿ

##ಹೀಗೆ ಮೋದಿಜಿ ಅವರು ಅಧಿಕಾರ ಬಂದ ನಂತರ ಹಲವು ಜನ ಜನ ಕಲ್ಯಾಣ ಯೋಜನೆಗಳು ಅನುಷ್ಠಾನಕ್ಕೆ ತಂದರು.
ಅವರು ಬಡವರಿಗಾಗಿ, ರೈತರಿಗಾ, ಮಹಿಳೆಯರು, ಹಿರಿಯ, ನಾಗರಿಕರು, ಅಕ್ಷರಸ್ಥರು ಅನಕ್ಷರಸ್ತರು ವಿಧಿವೇಯರು ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಮತ್ತು ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಅಭಿವೃದ್ಧಿಯನ್ನು ಸಾಧಿಸುವಂತಹ ಉದ್ದೇಶ ನಮ್ಮ ಮೋದಿಜಿ ಕಂಡ ಕನಸುಗಳು ನನಸು ಮಾಡುವಲ್ಲಿ ಸತತ ಪ್ರಯತ್ನ ಮಾಡುತ್ತಲೇ ಇದ್ದಾರೆ.

##ಸ್ವಚ್ಛ ಭಾರತ ಮಿಷನ್##
ಅಕ್ಟೋಬರ್ 2 2014 ಪ್ರಾರಂಭಿಸಿದರು.

#ಮೇಕ್ ಇನ್ ಇಂಡಿಯಾ#
ಡಿಜಿಟಲ್ ಇಂಡಿಯಾ ಮಿಷನ್ ಯೋಜನೆಯನ್ನು 2015ರಲ್ಲಿ ಅನಾವರಣ ಮಾಡಿದರು.

#ಜೂನ್ 21 ವಿಶ್ವ ಸಂಸ್ಥೆಯ ಅಡಿಯಲ್ಲಿ “ಅಂತರಾಷ್ಟ್ರೀಯ ಯೋಗ ದಿನ” ಘೋಷಣೆ ಮಾಡಿದರು.

#ಬೇಟಿ ಬಚಾವೋ ಬೇಟಿ ಪಡಾವೋ”
ಹೆಣ್ಣುಮಕ್ಕಳ ಸಂರಕ್ಷಣೆಗಾಗಿ
Selfie with daughter hash tag, ಅನಾವರಣ

##ಜನ್ ಧನ್ ಯೋಜನ#
ಬಡಜನರ ಸಬಲೀಕರಣಕ್ಕಾಗಿ

##ಆದರ್ಶ ಗ್ರಾಮ ಯೋಜನೆ#
ಗ್ರಾಮಗಳ ಅಭಿವೃದ್ಧಿಗಾಗಿ

##ಸುಕನ್ಯಾ ಸಮೃದ್ಧಿ ಯೋಜನೆ##
ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮತ್ತು ಮದುವೆಗಾಗಿ

##ಸಬ್ಸಿಡಿಯ ನೇರ ನಗದು ವರ್ಗಾವಣೆ##
ಬ್ಯಾಂಕ್ ಖಾತೆ ಮತ್ತು ಗ್ಯಾಸ್ ನಂಬರ್ ಜಮಾ

##ಪ್ರಧಾನಮಂತ್ರಿ ಸುರಕ್ಷಾ ವಿಮೆ# ಗ್ರಾಹಕರಿಗಾಗಿ ಒಂದು ರೂಪಾಯಿ ಕಂತಿನ ಆಧಾರದ ಯೋಜನೆ

##ಜೀವನ್ ಜ್ಯೋತಿ ವಿಮೆ##
18 ರಿಂದ 50 ವರ್ಷದ ವಯಸ್ಸಿನವರಿಗೆ ಅನಾಹುತ ಆದಾಗ ಸಹಾಯಕಎರಡು ಲಕ್ಷದ ವಿಮೆ.

##ನಮಾಮಿ ಗಂಗಾ##
ಗಂಗಾ ನದಿಯ ಶುದ್ಧೀಕರಣಕ್ಕಾಗಿ ಅಭಿಯಾನ.

##ಅಟಲ್ ಪಿಂಚಣಿ ಯೋಜನೆ ##
18 ರಿಂದ 40 ವಯಸ್ಸಿನವರೆಗೂ ಈ ವಿಮೆ ಉಪಯುಕ್ತ

ಹೀಗೆ ಹತ್ತು ಹಲವಾರು ರೀತಿಯ ಅನೇಕ ಕಲ್ಯಾಣ ಯೋಜನೆ . ಅಭಿವೃದ್ಧಿ ಯೋಜನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿ ಸದಾ ದೇಶದ ಪ್ರಗತಿಗಾಗಿ ತಮ್ಮನ್ನು ಮುಡುಪಾಗಿಟ್ಟ ತಾಯಿ ಮತ್ತು ಭಾರತಾಂಬೆಯ ಆಶೀರ್ವಾದದಿಂದ ಅವರು ಇನ್ನೂ ಹೆಚ್ಚು ಕಾಲ ಒಳ್ಳೆಯ ಆರೋಗ್ಯ ಆಯುಸ್ಸು ಕೊಡಲಿ ಎಂದು ನಾವೆಲ್ಲರೂ ದೇವರ ಹತ್ತಿರ ಅವರ ಕಂಡಂತಹ ಎಲ್ಲಾ ಕನಸುಗಳು ಮತ್ತು ಯೋಜನೆಗಳು ಪೂರೈಸಲಿ ಎಂದು ಶುಭ ಹಾರೈಸೋಣ.

 

ಲೇಖಕರು

ಸ್ವರೂಪ ಎಸ್ ನಾಗೂರೆ