ಜನಪದರಲ್ಲಿ ಹಚ್ಚೆ ಕಲೆ ವೈಶಿಷ್ಟತೆಗಳು

ಜನಪದ ಕಲೆ ಎಂದರೆ ಒಂದು ವೈಶಿಷ್ಟತೆಯನ್ನು ಒಳಗೊಂಡಿರುತ್ತದೆ. ಬದುಕಿನ ಎಲ್ಲಾ ಸುಂದರ ಆಲೋಚನೆಗಳ ಒಂದು ಸುಂದರ ಆಲೋಚನೆಗಳ ಒಂದು ಕ್ರಿಯಾರೂಪ. ಇದು ಒಂದು ತರದ ಕಲ್ಪನೆಯ ರಂಗಿನ ಆವರಣ ಹೊಂದಿರುವಂಥದ್ದು. ಕಲೆ ಎಂಬ ಪದವು ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಲೆದ ಹೋಗುತ್ತಿದೆ. ಕಲೆಯೆಂಬುದು ಪರಿವರ್ತನಾಶೀಲವಾದುದು. ಅನೇಕ ರೀತಿಯ ಕಲೆಗಳನ್ನು ನಾವು ನಮ್ಮ ಜನಪದರ ಸಾಹಿತ್ಯದಲ್ಲಿ ನೋಡುತ್ತೇವೆ. ಜನಪದ ಕಲೆಗಳ ಎಂದರೆ ನೃತ್ಯ ,ಸಂಗೀತ, ಕಲೆ, ವಾಸ್ತುಶಿಲ್ಪ, ಗಾದೆ ,ಐತಿಹ್ಯ, ಹಾಡು ಹೀಗೆ ಹತ್ತಾರು ಹಲವಾರು ರೀತಿಯ ಜನಪದ ಕಲೆಗಳನ್ನು ನಾವು ನೋಡುತ್ತೇವೆ. ಅದಲ್ಲದೆ ರಂಗೋಲಿ, ಕಸೂತಿ ,ಚಿತ್ರ ವಿನ್ಯಾಸ, ಕೌದಿ ಹೊಲಿಯುವುದು, ಹೆಚ್ಚ ಹಾಕುವಿಕೆ ಹತ್ತು ಹಲವಾರು ಕಲೆಗಳನ್ನು ನಾವು ನೋಡುತ್ತೇವೆ. ಅದರಲ್ಲಿ ನಾನು ಹಚ್ಚೆ ಕಲೆ ಕುರಿತು ಈ ಕೆಳಗೆ ವಿವರಿಸಲಾಗಿದೆ.

##ಹಚ್ಚೆ ಕಲೆ ##
ಇದು ನಮ್ಮ ಜನಪದ ಸಾಹಿತ್ಯದಲ್ಲಿ ಇರುವಂತಹ ವಿಶಿಷ್ಟವಾದಂತಹ ಸಂಪ್ರದಾಯಗಳಲ್ಲಿ ಒಂದು.ಇದು ಬಹಳ ಮಹತ್ವವಾದದ್ದು ಮತ್ತು ನಮ್ಮ ಜನಪದರ ನಂಬಿಕೆಯನ್ನು ಒಳಗೊಂಡಿರುವಂತಹದು.ಒಂದು ಕಲೆ ಇದು ತನ್ನದೇ ಆದಂತಹವಿಶಿಷ್ಟತೆ ಹೊಂದಿದೆ.

*ಮುಕ್ತಕ: *
*ಅಚ್ಚಳಿಯದಿರಲೆಂದು ಚುಚ್ಚಿ ಹಾಕಿದೆ ಹಚ್ಚೆ
ನಿಚ್ಚಳದಿ ಪೋಪುದೈ ಮುಚ್ಚೆ ಮಣ್ಣಿನಲಿ
ಅಚ್ಚಳಿಯನೈ ಭಜಿಸೆ ಸಚ್ಚಿದಾನಂದ ತಾ
ಹೆಚ್ಚಾದ ಜನುಮಕ್ಕೆ ತಿಳಿಯೋ ಶಾಮ*

*ಭಾವಾರ್ಥ *
ಕೈಮೇಲೆ ಮೈಮೇಲೆ ಅನೇಕ ಮಂದಿ ಹಚ್ಚೆಯನ್ನು ಹಾಕಿಸಿಕೊಳ್ಳುತ್ತಾರೆ. ಅದನ್ನು ಹಾಕಿಸಿಕೊಳ್ಳುವಾಗಯಾವುದೋ ಒಂದು ರೀತಿಯ  ರಸವನ್ನು ಬಳಸಿ ಸೂಜಿಯಿಂದ ಚುಚ್ಚಿ ಚುಚ್ಚಿ ಹಾಕುವರು ಹಚ್ಚೆ. ಅಚ್ಚಳಿಯದೆ ಇರುವಂತಹ ಹಚ್ಚೆ. ಮನುಷ್ಯ ಮನುಷ್ಯ ಮಣ್ಣಿನಲ್ಲಿ ಮುಚ್ಚಿದಾಗ ಅವನೊಂದಿಗೆ ಅದು ನಿಶ್ಚಯವಾಗಿ ನಾಶವಾಗುತ್ತದೆ. ಭಗವಂತನ ಹೆಸರಿನ  ಹಚ್ಚೆ ಹಾಕಿಸಿ ಕೊಂಡಾಗ ಜನುಮ ಜನುಮದಲ್ಲು ಭಗವಂತ ಅವರ ಮನದಲ್ಲಿ ಅಚ್ಚಳಿಯದೆ ಉಳಿಯುತ್ತಾನೆ ಎಂಬ ನಂಬಿಕೆ.

*ಹಚ್ಚೆ ಎಂದರೇನು
ನಮ್ಮ ಜನಪದರ ಸಂಸ್ಕೃತಿಯಲ್ಲಿ ಹಚ್ಚೆ ಹಾಕಿಸಿಕೊಳ್ಳುವುದು ಕೂಡ ಒಂದು ಸಂಪ್ರದಾಯ. ಇದು ಮುತ್ತೈದೆಯರ ಸಂಕೇತ. ಅವರ ಒಂದು ನಂಬಿಕೆ. ಅದೇನೆಂದರೆ
ನಾವು ಎಷ್ಟೇ ಸಂಪತ್ತು ಆಸ್ತಿ ಐಶ್ವರ್ಯ ಇದ್ದರು ನಾವು ಸತ್ತಾಗ ಎಲ್ಲವನ್ನು ಬಿಟ್ಟು ಹೋಗಬೇಕಾಗುತ್ತದೆ ಆದರೆ ನಮ್ಮ ಜೊತೆ ಬರುವಂತಹ ವಸ್ತು ಎಂದರೆ ಅದು ಹಚ್ಚೆ. ಮತ್ತು ನಮ್ಮ ದೇಶದಲ್ಲಿ  ಹಿಂದೂ ಧರ್ಮಿಯರ ದೇಶ ನಮ್ಮ ಹಿಂದೂ ಮಹಿಳೆಯರಿಗೆ ಗುರುತಿಗಾಗಿಹಚ್ಚೆ ಹಾಕುತ್ತಾರೆ. ಮತ್ತೆ ನಾವು ಸತ್ತಾಗ ಮೇಲೆ ಯಮರಾಯನ ಕೂಡ ನಮ್ಮ ಮೈಮೇಲೆ ಹಚ್ಚೆಯ ಗುರುತನ್ನು ಪರೀಕ್ಷಿಸುತ್ತಾನೆ ಎಂಬ ಒಂದು ಪ್ರತೀತವಿದೆ. ಏಕೆಂದರೆ ನೀನು ಮನುಷ್ಯನ ಜನ್ಮದಿಂದ ಬಂದಿರುವಂತಹ ಗುರುತಿಗಾಗಿ. ಅಲ್ಲದೆ ಹಚ್ಚೆ ಹಾಕುವುದು ನಮ್ಮ ಸಂಸ್ಕೃತಿಯ ಪ್ರತಿಬಿಂಬವಿದಂತೆ.

ಇಂಥ ನಮ್ಮ ಹಳೆಯ ಸಂಪ್ರದಾಯವನ್ನು ಆಧುನಿಕ ಜಗತ್ತಿನಲ್ಲಿ ವಿಭಿನ್ನವಾದ ರೀತಿಯಲ್ಲಿ ಇದನ್ನು ಅಳವಡಿಸಲಾಗಿದೆ. ಸದ್ಯದಲ್ಲಿಯೇ ಅದನ್ನು ಟ್ಯಾಟೂ (Tatto) ಎಂದು ಕೂಡ ಕರೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಇದು ತುಂಬಾ ಪ್ರಸಿದ್ಧಿಯನ್ನು ಕೂಡ ಪಡೆದಿದೆ ಎಂದು ಹೇಳಬಹುದು.

ಹಚ್ಚೆ ಯಾವ ರೀತಿಯಲ್ಲಿ ಮತ್ತು ಎಲ್ಲಿಎಲ್ಲಿ ಹಾಕುತ್ತಾರೆ*
ನಮ್ಮ ಜನಪದರು ಹಿಂದಿನ ಕಾಲದಲ್ಲಿ ಹಣೆಯ ಮೇಲೆ(ಹಂಚೆಬಟ್ಟು) ಎಂದು ಹೆಣ್ಣುಮಕ್ಕಳ ಹಣೆಯ ಮೇಲೆ ಹಾಕುತ್ತಿದ್ದರು. ಕೈಗಳ ಮೇಲೆ ಸೂರ್ಯ ಚಂದ್ರ, ಗಂಗೆ ಗೌರಿ, ಅಕ್ಕ ತಂಗಿಯರ , ಅಪ್ಪ ಅಮ್ಮನ ಹೆಸರು ಮತ್ತು ಚಿತ್ರಗಳನ್ನು ಬಿಡಿಸಿ ಕೊಳ್ಳುತ್ತಿದ್ದರು.

ಇತ್ತೀಚಿಗೆ ಆಧುನಿಕವಾಗಿ ಇದನ್ನು ಟ್ಯಾಟೂ ರೂಪದಲ್ಲಿ ಹೊಸ ಹೊಸ ರೀತಿ ಹೊಸ ಹೊಸ ಶೈಲಿಯಲ್ಲಿ ಹಚ್ಚೆ ಹಾಕುತ್ತಿದ್ದಾರೆ. ಪ್ರಾಣಿ-ಪಕ್ಷಿ ತೇರು ಶಿವನ ಸಂಕೇತ ಮಲ್ಲಿಗೆ ಹೂ ಹೀಗೆ ಹತ್ತು ಹಲವಾರು ತರಹದ ಆಧುನಿಕ ಶೈಲಿಯಲ್ಲಿ ಮತ್ತು ಶಾಶ್ವತವಾಗಿ *ಹುಬ್ಬುಗಳ ಹಚ್ಚೆ. *ತುಟಿಗಳ ಮೇಲೆ ಹೆಚ್ಚೆ* ಹತ್ತು ಹಲವಾರು ರೀತಿಯಲ್ಲಿ ಹಚ್ಚೆಗಳನ್ನು ಹಾಕಿಸುತ್ತಿದ್ದಾರೆ.
ನಮ್ಮ ಜನಪದರು ಮೊದಮೊದಲು ಹಣೆಯ ಮೇಲೆ ಕೈ ಮೇಲೆ. ಅಕ್ಕ-ತಂಗಿಯರ ಸವಿನೆನಪಿಗಾಗಿ ಗಲ್ಲದ ಮೇಲೆ. ಬೆರಳಿನ ಮೇಲೆ ಹಚ್ಚೆ ಹಾಕಿಸುವುದರಿಂದ ಮಾಡುವಂತಹ ಅಡಿಗೆ ಕೆಡುವುದಿಲ್ಲವಂತೆ(ಹಾಳಾಗುವುದಿಲ್ಲ) ಎಂಬ ಪ್ರತಿತವಿದೆ .
ಇತ್ತೀಚಿಗೆ ಆಧುನಿಕ ಜಗತ್ತಿನಲ್ಲಿ ಹೊಸ ರೀತಿಯಲ್ಲಿ ರೊಟ್ಟಿಗೆ ತೋಳುಬಂದಿ ಹಾಕಿರುವ ರೀತಿಯಲ್ಲಿ, ಮಕ್ಕಳಲ್ಲಿ ಹೊಕ್ಕಳ ಬಳ್ಳಿಯಂತೆ, ಪುರುಷರು ತಮ್ಮ ಶಕ್ತಿ ಪ್ರದರ್ಶನಕ್ಕಾಗಿ, (6 ಪ್ಯಾಕ್ ಪ್ರದರ್ಶನಕ್ಕಾಗಿ) ಸ್ತ್ರೀಯರ ಬೆನ್ನು ಮೇಲೆ, ಭುಜದ ಮೇಲೆ, ಕಾಲುಗಳ ಮೇಲೆ, ಕೈಗಳ ಮೇಲೆ ಹೀಗೆ ಹತ್ತು ಹತ್ತು ಹಲವಾರು ಕಡೆಯಲ್ಲಿ ಹೊಸ ಹೊಸ ಶೈಲಿಯ ಹೊಸ ಹೊಸ ರೂಪದಲ್ಲಿ ಹಚ್ಚೆಯನ್ನು ಹಾಕುವಂತಹವರಾಗಿದಾರೆ.

*ಹಚ್ಚೆಹಾಕಲು ಕಾರಣಗಳು*

ನಮ್ಮ ಜನಪದರು ಹಚ್ಚೆ ಹಾಕಲು ಅನೇಕ ಕಾರಣಗಳು
** ಸತ್ತಾಗ ನಮ್ಮ ಜೊತೆ ಬರುವಂತಹ ಏಕೈಕ ಆಸ್ತಿ
**ಹಿಂದೂ ಮಕ್ಕಳ ಗುರುತಿನ ಸಂಕೇತ ಕ್ಕಾಗಿ
**ಇದು ನಮ್ಮ ಮುತ್ತೈದೆಯರ ಸಂಕೇತ
**ಅಚ್ಚಳಿಯದೆ ಇರುವಂತಹ ಒಂದು ಸವಿ ನೆನಪು
** ಬಂಧುಬಾಂಧವರು ಹಾಕಿಸಿದ ಹಚ್ಚೆಸವಿನೆನಪು ಶಾಶ್ವತವಾಗಿರಲು
** ಜನಪದರು ಸಂತೆ ಮತ್ತು ಜಾತ್ರೆಯಲ್ಲಿತಮ್ಮ ಮಕ್ಕಳು ಮತ್ತು ಕುಟುಂಬದ ಸದಸ್ಯರು ಜನತೆಯಲ್ಲಿ ಹೋಗಬಾರದೆಂಬ ಎಂದು
** ಸದ್ಯದಲ್ಲಿ ಚಾಲ್ತಿಯಲ್ಲಿ ಇರುವಂತ ಒಂದು ವಿಚಿತ್ರವಾದ ಟ್ರೈಡ್.
**ಜನಪದರ ಹಚ್ಚೆಯನ್ನು ಇವಾಗ ಟ್ಯಾಟೂ ಎಂಬ ಹೊಸ ರೂಪ
**ಮನುಷ್ಯ ಮಣ್ಣಿನಲ್ಲಿ ಲೀನವಾಗುವರೆಗೂ ಹಚ್ಚೆ ಅವನಲ್ಲಿ ಇರುತ್ತದೆ.
**ನಮ್ಮ ಪ್ರೀತಿಯ ಸಂಕೇತವಾಗಿ ತಮ್ಮ ಭಾವನೆಗಳ ಅಭಿವ್ಯಕ್ತಿ ನಿಗಾಗಿ ಹಚ್ಚೆ ಹಾಕಿಸಿಕೊಳ್ಳುತ್ತಾರೆ
**ಹಚ್ಚಿ ಹಾಕುವಿಕೆ ಇವಾಗ ಒಂದು ರೀತಿಯ ಫ್ಯಾಷನ್ ಆಗಿದೆ.


ಜನಪದ ರಿಂದ ಹಿಡಿದು ಇಂದಿನ ಆಧುನಿಕ ಯುಗದಲ್ಲಿ ಹತ್ತು ಹಲವಾರು ರೀತಿಯ ಕಾರಣಗಳನ್ನಿಟ್ಟುಕೊಂಡು ಹಚ್ಚೆಗಳನ್ನು ಹಾಕುವಂತಹ ಪದ್ಧತಿ ಹಿಂದಿನ ಕಾಲದಿಂದಲೂ ನಡೆದು ಬಂದಿರುವಂತಹ ಒಂದು ಪದ್ಧತಿ ಎಂದು ಹೇಳಬಹುದು. ಇಂದು ಆಧುನಿಕ ಜಗತ್ತಿನಲ್ಲಿ ಒಂದು ಮತ್ತಷ್ಟು ವಿಶಿಷ್ಟವಾಗಿ ವಿಸ್ತಾರವಾಗಿ ದೇಶ-ವಿದೇಶಗಳಲ್ಲಿ ಕೂಡ ಹರಡುವಂತಹ ಒಂದು ಕಲೆಯಾಗಿದೆ ಎಂದು ಹೇಳಬಹುದು .ಈ ಒಂದು ಕಲೆಯು ಅನೇಕ ರೀತಿಯ ದಾಖಲೆಗಳನ್ನು ಕೂಡ ಮೂಡಿಸುವಲ್ಲಿ ನಮ್ಮ ಜನ ಮುಂದಾಗಿದ್ದಾರೆ ಎಂದು ಹೇಳಬಹುದು.

*ಹಚ್ಚೆ ಹಾಕಿಸಿಕೊಳ್ಳುವುದರಿಂದ ಆಗುವಂತಹ ಲಾಭಗಳು*
ಹಚ್ಚೆಹಾಕಿಸಿಕೊಳ್ಳುವುದರಿಂದ ಹತ್ತು ಹಲವಾರು ರೀತಿಯ ಲಾಭಗಳನ್ನು ನಾವು ಹಿಂದಿನ ಕಾಲದಿಂದಲೂ ಕೂಡ ನೋಡುತ್ತೇವೆ. ಆದರೆಇಂದು ಆಧುನಿಕ ಯುಗದಲ್ಲಿ ಕೂಡ ಅನೇಕ ರೀತಿಯ ಸಂಶೋಧನೆಗಳನ್ನು ನಡೆಸಿ ಅದರ ಲಾಭಗಳನ್ನು ಕುರಿತು ಬಹಳ ವಿಸ್ತಾರವಾದಂತಹ ರೀತಿಯಲ್ಲಿ ನಾವು ನೋಡಬಹುದು.
##ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ##
USA ಸಂಶೋಧನಾ ಸಂಸ್ಥೆಯು ಮನುಷ್ಯನ ದೇಹದ ಮೇಲೆ ಕೆಲವೊಂದು ಪ್ರಯೋಗಗಳು ಮಾಡುವುದರ ಮೂಲಕ ಕೆಲವು ಅಧ್ಯಯನ ನಡೆಸಿದೆ. ಹಿಂದಿನ ಕಾಲದಿಂದಲೂ ಹಚ್ಚೆ ಹಾಕಿಸಿಕೊಳ್ಳುವ ಪದ್ಧತಿ ಆರೋಗ್ಯಕ್ಕೆ ಬಹಳಷ್ಟು ಅನುಕೂಲ ಎಂಬ ಪ್ರತೀತಿ ಇದೆ. ಅದನ್ನೇ ವೈಜ್ಞಾನಿಕವಾಗಿ ಅಧ್ಯಯನ ನಡೆಸಿದಾಗ ಯಾರು ಹಚ್ಚೆ ಹಾಕಿಸಿಕೊಳ್ಳುತ್ತಾರೆ ಅವರ ದೇಹದಲ್ಲಿ ಇಮ್ಮುನೋ ಗ್ಲೋಬ್ಯುಲಿನ್ ಎ ಅಂಶ ಎಂದಿಗೂ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ.ಮತ್ತು ಯಾವುದೇ ಸೋಂಕು ಎದುರಾಗದಂತೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.*ಅಂಟಿ ಬ್ಯಾಟಿಂಕ್*
ಉತ್ಪತ್ತಿ ಮಾಡುತ್ತದೆ. ಗ್ಯಾಸ್ಟ್ರಿಕ್, ಹೊಟ್ಟೆ ಹುಣ್ಣು , ಶೀತ ,ಕೆಮ್ಮು, ಜ್ವರ, ಇತ್ಯಾದಿ ಯಾವುದೇ ಸಮಸ್ಯೆಗಳನ್ನು ಬಂದರೂ ಅದನ್ನು ಎದುರಿಸುವಂತಹ ಸಾಮರ್ಥ್ಯ ಇದಕ್ಕಿದೆ.

*ಮಾನಸಿಕ ಒತ್ತಡ ಕಡಿಮೆ ಆಗುತ್ತದೆ
ಮಾನಸಿಕ ಒತ್ತಡ ಕಡಿಮೆಯಾಗಲು ಇದು ದೇಹದಲ್ಲಿ ಉತ್ಪತ್ತಿಯಾಗುವ ಅಂತ ಇಮ್ಮನೋ ಗ್ಲೋಬ್ಯಲಿನ್ _ಎ *, ಹೆಚ್ಚಾದಂತೆ ಕಾರ್ಡಿಸಲ್ ಕಡಿಮೆಯಾಗುತ್ತಾ ಹೋಗುತ್ತದೆ ಕಾಡ್ರಿಸಲ್ ಎಂದರೆ ಇದು ಮಾನಸಿಕ ಒತ್ತಡಕ್ಕೆ ಸಂಬಂಧಪಟ್ಟಿರುವ ಅಂತ ಒಂದು ರೀತಿಯ ಹಾರ್ಮೋನ್. ಇದು ದೇಹದಲ್ಲಿ ಹೆಚ್ಚಾದಂತೆ ನಮ್ಮ ಶಕ್ತಿ ಕುಂದುತ್ತದೆ. ಮತ್ತು ಮಾನಸಿಕ ಒತ್ತಡ (depression) ಹೆಚ್ಚಾಗಿ ಮೆದುಳು ಮತ್ತು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅಲ್ಲದೇ ತಲೆನೋವು, ಮೈ ಗ್ರೆನ್ ಮತ್ತು ದೇಹದ ತೂಕ ಹೆಚ್ಚಾಗಲು ಕೂಡ ಇಂಥ ಹಾರ್ಮೋನ್ ಕಾರಣವಾಗುತ್ತವೆ ಆದರೆ ಹಚ್ಚೆ ಹಾಕುವುದರಿಂದ ಈ ಎಲ್ಲಾ ಕಾರಣಗಳು ಕ್ರಮೇಣವಾಗಿ ಕಡಿಮೆಯಾಗುತ್ತಿದೆ.
*ಅಥ್ಲೆಟಿಕ್ಸ್ ಹಾಗೂ ವ್ಯಾಯಾಮ ಮಾಡುವವರಿಗೆ ತುಂಬಾ ಒಳ್ಳೆಯದು*
ಇವರು ತಮ್ಮ ದಿನನಿತ್ಯದ ಸತತ ಅಭ್ಯಾಸದಿಂದ ಮಾಂಸಖಂಡಗಳ ಮೇಲೆ ನೋವು ಇದ್ದೇ ಇರುತ್ತದೆ ಏಕೆಂದರೆ ಅವರ ಸತತ ಪರಿಶ್ರಮವೇ ಕಾರಣ ಇವರಿಗೆ ಕಾರ್ಡಿಸಲ್ ಎಂಬ ಹಾರ್ಮೋನ್ ದೇಹದಲ್ಲಿ ಕಡಿಮೆಯಾದಷ್ಟು ಮಾಂಸಖಂಡಗಳು ಬೇಗಬೇಗ ರಿಪೇರಿ ಆಗುತ್ತೇವೆ. ಹಚ್ಚೆ ಹಾಕಿಸಿಕೊಳ್ಳುವುದರಿಂದ ಸ್ವಯಂಚಾಲಿತcardisal ಹಾರ್ಮೋನ್ ಕಡಿಮೆ ಮಾಡಿ ಅವರಿಗೆ ಹೆಚ್ಚಿನ ಶಕ್ತಿಯನ್ನು ಒದಗಿಸಿಕೊಡುತ್ತದೆ ಈ ಹಚ್ಚೆ

*ಫ್ಯಾಶನ್ ಇಂಡಸ್ಟ್ರಿಯಲ್ಲಿ ಕೆಲಸ ಸಿಗುತ್ತದೆ

ಇವತ್ತಿನ ಕಾಲದಲ್ಲಿ ಪ್ರತಿಯೊಬ್ಬರು ಜೀವನ ಸ್ಟೈಲಿಶ ಜೀವನಶೈಲಿಗೆ ಮಹತ್ವ ಕೊಡುತ್ತಾರೆ. ಪ್ರಸ್ತುತ ಸಿಕ್ಕಿರುವ ಮಾಹಿತಿ ಪ್ರಕಾರ . ಇವಾಗ ಮಾಡೆಲಿಂಗ್ ಹಾಗೂ ಫ್ಯಾಷನ್ ಸಂಸ್ಥೆಗಳು ಹಚ್ಚೆ ಹಾಕಿಸಿಕೊಂಡವರು ತುಂಬಾ ಬುದ್ಧಿವಂತರು ಎಂದು ಪರಿಗಣಿಸುತ್ತಿದ್ದಾರೆ. ಅವ್ರು ತುಂಬಾ ಚುರುಕಾಗಿರುತ್ತಾರೆ ಇಂದಿನ ಒತ್ತಡದ ಬದುಕಿನಲ್ಲಿ ಎಂಥಾ ಸಂದರ್ಭ ಬಂದರೂ ಅದನ್ನು ಬಹಳ ಅಚ್ಚುಕಟ್ಟಾಗಿ ನಿರ್ಮಿಸಿಕೊಂಡು ಹೋಗುತ್ತಾರೆ ಎಂಬ ಒಂದು ನಂಬಿಕೆ . ಹಚ್ಚೆ ಹಾಕಿಸಿಕೊಂಡ ವರಿಗೆ ಇಂತಹ ಫ್ಯಾಷನ್ ಇಂಡಸ್ಟ್ರಿಯಲ್ಲಿ ಕೆಲಸ ಸಿಗುವುದಂತೂ ಗ್ಯಾರಂಟಿ.

*ಲಸಿಕೆಯನ್ನು ಅಭಿವೃದ್ಧಿಪಡಿಸಲು ತುಂಬಾ ಸಾಯಕ*
ಇತ್ತೀಚಿನ ದಿನಗಳಲ್ಲಿ ಲಸಿಕೆ ತಯಾರಿಸುವ ಹಾಗೂ ಲಸಿಕೆ ನೀಡುವ ಪ್ರಕ್ರಿಯೆ ತುಂಬಾ ದುಬಾರಿ ಹಾಗಾಗಿ ನಮ್ಮ ವಿಜ್ಞಾನಿಗಳು ಹಳೆಯ ಕಾಲದ ಸಂಪ್ರದಾಯಕ್ಕೆ ಒತ್ತು ಕೊಟ್ಟಿದ್ದಾರೆ. ಒಬ್ಬ ರೋಗಿಗೆ ಲಸಿಕೆಯನ್ನು ಕೊಡಲು ಹಚ್ಚೆಗಳನ್ನು ಬಳಸುತ್ತಿದ್ದಾರೆ. ಅಲ್ಲದೆ ರೋಗನಿರೋಧಕ ಶಕ್ತಿಯನ್ನು ಕೂಡ ಬಲಪಡಿಸುತ್ತದೆ ಇದನ್ನು ಈಗಾಗಲೇ ಅನೇಕ ಪ್ರಾಣಿಗಳ ಮೇಲೆ ಪ್ರಯೋಗ ಮಾಡಿ ಯಶಸ್ಸು ಕೂಡ ಆಗಿದ್ದಾರೆ.

*ವಿಶ್ವಾಸ ಮತ್ತು ಸ್ವಾಭಿಮಾನವನ್ನು ಹೆಚ್ಚಿಸುತ್ತದೆ
ಹಚ್ಚೆ ಹಾಕಿಸಿಕೊಂಡವರು ತುಂಬಾ ಚುರುಕಾಗಿರುತ್ತಾರೆ, ಮತ್ತು ಅವರು ಮಾಡುವಂತಹ ಕೆಲಸದ ಮೇಲೆ ತುಂಬಾ ನಂಬಿಕೆ ಮತ್ತು ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಸಾಮಾನ್ಯ ಮನುಷ್ಯನಿಗೂ ಮತ್ತು ಹಚ್ಚೆ ಹಾಕಿಸಿದವರು ಮನುಷ್ಯನಿಗೂ ಮೇಲೆ ಸಂಶೋಧನೆ ಮಾಡಿದಾಗ ಸಾಮಾನ್ಯ ಮನುಷ್ಯನಿಗಿಂತಲೂ ಹಚ್ಚೆ ಹಾಕಿಸಿಕೊಂಡು ಶೇಕಡ 75 ಪ್ರತಿಶತದಷ್ಟು ತುಂಬಾ ಅಚ್ಚುಕಟ್ಟಾಗಿ ಸ್ವಾಭಿಮಾನ ವಿಶ್ವಾಸ ಹೆಚ್ಚಾಗಿರುತ್ತದೆ ಎಂದು ಸಾಬೀತುಪಡಿಸಿದ್ದಾರೆ.
*ಹಚ್ಚಿ ಹಾಕಿಸಿಕೊಂಡವರು ತುಂಬಾ ಖುಷಿಯಾಗಿರುತ್ತಾರೆ*
ಹಚ್ಚೆ ಹಾಕಿಸಿಕೊಂಡ ಆಗ ಸಹಜವಾಗಿ ತುಂಬಾ ನೋವನ್ನು ಅನುಭವಿಸಬೇಕಾಗುತ್ತದೆ. ಆದರೆ ಹಚ್ಚೆ ಹಾಕಿಸಿಕೊಂಡ ನಂತರ ಅವರ ಆನಂದ ಬಹಳಷ್ಟು ಆಗಿರುತ್ತದೆ ಎಂದು ಹೇಳಬಹುದು ಏಕೆಂದರೆ ಅವರ ದೇಹದಲ್ಲಿ *ಎಂಡೋರ್ಫ್ರಿನ್, ಮತ್ತು ಅಡ್ರಿನಲೈನ್*ಎಂಬ ಹಾರ್ಮೋನ್ಗಳು ಬಿಡುಗಡೆ ಆಗಿ ಮನಸ್ಸಿನಲ್ಲಿ ತುಂಬಾ ಖುಷಿಯಾಗಿ ಭಾವನೆಗಳನ್ನು ಮೂಡಿಸುತ್ತದೆ ಮತ್ತು ಹೆಚ್ಚು ಲವಲವಿಕೆಯ ಇರುವಂತೆಯೇ ಮತ್ತು ಬಂದಂತ ಸಂಕಷ್ಟಗಳನ್ನು ಸುಲಭವಾಗಿ ಬರುವ ಬಗೆಹರಿಸುವಂತೆ ಕೆಲಸ ಮಾಡುತ್ತದೆ.

ಹೀಗೆ ಹತ್ತು ಹಲವಾರು ರೀತಿಯ ಲಾಭಗಳನ್ನು ನಾವು ನೋಡಬಹುದು ನಮ್ಮ ಜನಪದರು ಹಿಂದಿನ ಕಾಲದಲ್ಲಿ ಇಂತಹ ಅನೇಕ ನಂಬಿಕೆಗಳು ಅವರನ್ನು ಜೀವಂತವಾಗಿರಿಸಿವೆ ಏನೆಂದರೆ ಹಚ್ಚೆ ಹಾಕಿಸುವುದರಿಂದ ನಮ್ಮ ಮಹಿಳೆಯರು ಸದಸ್ಯರಾಗಿರುತ್ತಾರೆ ಮತ್ತು ಬೆರಳುಗಳ ಮೇಲೆ ಹಾಕುವುದರಿಂದ ಅವರು ಮಾಡುವಂತಹ ಡಿಕೆ ಕೆಡುವುದಿಲ್ಲ ಎಂಬ ಪ್ರತೀತ. ಅಚ್ಚಳಿಯದೇ ಸದಾ ತನ್ನ ಜೊತೆಯಲ್ಲಿ ಇರುವಂತದ್ದು ಮತ್ತು ಮನುಷ್ಯ ಮಣ್ಣಿನಲ್ಲಿ ಲೀನವಾಗುತ್ತಿರುವ ಎಂಬ ನಂಬಿಕೆ. ಅದೇ ರೀತಿ ಅವರ ನಂಬಿಕೆಗೆ ಜೀವಂತವಾಗಿರಲು ಇಂದು ಆಧುನಿಕ ಯುಗದಲ್ಲಿ ಕೂಡ ಅನೇಕ ಸಂಶೋಧನೆಗಳ ಮುಖಾಂತರ ಹಚ್ಚೆ ಅಂದರೆ ಟ್ಯಾಟೂ ಹಾಕುವುದು ಅನೇಕ ಲಾಭಗಳನ್ನು ಅರಿತುಕೊಂಡು ಸದ್ಯದ ದಿನದಲ್ಲಿ ಇದು ಒಂದು ಹೊಸ ರೀತಿಯ ಟ್ರೆಂಡ್ ಮತ್ತು ಟ್ರೆಡಿಶನಲ್ ಆಗಿ ಹೊರಹೊಮ್ಮಿದೆ ಎಂದು ಹೇಳಬಹುದು.

ಸ್ವರೂಪಾರಾಣಿ  ಸುಧೀರ್  ನಾಗೊರೆ