ರಕ್ಷಾ ಬಂಧನ
ನಮ್ಮ ಭಾರತ ದೇಶವು ಹಲವಾರು ಸಂಸ್ಕ್ರತಿಕ ಮೌಲ್ಯಗಳನ್ನು ಹೊಂದಿರುವ ದೇಶ. ಹಲವಾರು ರಾಜ್ಯಗಳು, ಜಾತಿಗಳನ್ನು ಹೊಂದಿದರು ಸಹ , ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಏಕೈಕ ದೇಶ.
ಹಾಗೇನೇ ನಮ್ಮ ದೇಶದಲ್ಲಿ ಹೇಗೆ ರಾಜ್ಯಗಳು ಮತ್ತು ಜಾತಿಗಳಿವೆಯೋ ಹಾಗೇನೇ ಆಯಾ ರಾಜ್ಯಕ್ಕೆ ಮತ್ತು ಜ್ಯಾತಿಗಳಿಗೆ ಸಂಬಂಧ ಪಟ್ಟ ಹಾಗೆ ವಿವಿಧ ರೀತಿಯ ಹಬ್ಬಗಳನ್ನು ಆಚರಿಸಲಾಗುತ್ತದೆ . ಅದರಲ್ಲಿ ರಕ್ಷಾ ಬಂಧನವು ವಿಶಿಷ್ಟವಾದ ಸ್ಥಾನವನ್ನು ಪಡೆದುಕೊಂಡಿದೆ. ಏಕೆಂದರೆ ಇದು ಅಣ್ಣ ತಂಗಿಯರ ಮಧುರ ಬಾಂಧವ್ಯದ ಸಂಕೇತವಾಗಿದೆ , ಯಾವುದೇ ಹಬ್ಬದ ತರಹ ಆಚರಿಸದೇ ಭಾವನೆಗಳ ಮೂಲಕವೇ ಆಚರಿಸಿಕೊಳ್ಳಬಹುದಾದ ಹಬ್ಬ ಇದಾಗಿದೆ.
ಅತಿ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಂಥ ಒಂದು ವಿಶಿಷ್ಟ ಹಬ್ಬ ಈ ರಕ್ಷಾ ಬಂಧನ ಅಥವಾ ರಾಖಿ ಪೂರ್ಣಿಮೆ . ಹಳೆಯ ಕಾಲದಲ್ಲಿ ರಾಖಿಯನ್ನು ಅಂದರೆ ಒಂದು ಮಂತ್ರದ ಧಾರವನ್ನು ಪತ್ನಿಯರಿಗೆ ಮತ್ತು ಪ್ರೇಯಸಿಯರಿಗೆ ಕತ್ತಲಾಗುತಿತ್ತು .ಅದು ಅವರ ರಕ್ಷಣೆಗೋಸ್ಕರ ಆದರೆ ಕಾಲ ಬದಲಾದಂತೆ ಅದರ ಮಾನ್ಯಗಳು ಬದಲಾಗುತ್ತಿವೆ. ಗಂಡಸರು ಕಟ್ಟಿದರೆ , ಅದು ಹೆಂಡತಿಯರ ಮತ್ತು ಪ್ರೇಯಸಿಯರ ರಕ್ಷಣೆಗೆಂದು , ಹೆಣ್ಣುಮಕ್ಕಳು ಕಟ್ಟಿದರೆ ಅದು ಅಣ್ಣ ತಮ್ಮಂದಿರ ರಕ್ಷಣೆಗೋಸ್ಕರ ಎಂದು.
ನಾವು ಚಿಕವರಾಗಿದ್ದಾಗ , ನಮ್ಮ ಶಾಲೆಯ ಶಿಕ್ಷಕಿಯೊಬ್ಬರು , ನಾವು ರಕ್ಷಾ ಬಂಧನವನ್ನು ಯಾಕೆ ಆಚರಿಸಬೇಕು ಎಂದು ಕೇಳಿದಾಗ ಅವರು ನಮಗೆ ಒಂದು ಚಿಕ್ಕದಾದ ಕಥೆಯನ್ನು ಹೇಳಿದರು. ಅದು ಈ ಲೇಖ ಬರೆಯುವಾಗ ನೆನಪಾಗ್ತಾ ಇದೆ , ಅದೇನಾನೆಂದರೆ ಒಬ್ಬ ಅಣ್ಣನು ತುಂಬ ದುಃಖದಲ್ಲಿದ್ದ ಹಾಗು ಆತನು ಆ ದುಃಖದಿಂದ ಬಳಲಿ ಬೆಂಡಾಗಿ ಕಾಯಿಲೆಗೆ ಒಳಗಾಗಿದ್ದ , ತನ್ನ ಜೀವನದ ಆಸೆಯನ್ನೇ ಬಿಟ್ಟಿದ್ದ, ಅಂತಹ ಸಮಯದಲ್ಲಿ ಆತನ ತಂಗಿ ತನ್ನ ಅಣ್ಣನಿಗಾಗಿ ದೇವರಲ್ಲಿ ಪ್ರಾರ್ಥಿಸಿ , ತಪಸ್ಸನ್ನು ಮಾಡಿ ಆತನ ಜೇವವನ್ನು ಆ ದೇವತೆಗಳು ಕೊಟ್ಟ ಒಂದು ಮಂತ್ರದ ದಾರದಿಂದ ಉಳಿಸಿಕೊಂಡಳು . ರಾಖಿಯಂತೆ ಕಾಣುವ ಆ ಮಂತ್ರದ ದಾರವೇ ಇಂದು ರಕ್ಷಾ ಬಂಧನವನ್ನು ಆಚರಿಸಲು ಕಾರಣೀಭೂತವಾಯಿತು. ಇದರಿಂದಾಗಿ ಅಣ್ಣ ತಮ್ಮಂದಿರ ಸುರಕ್ಷತೆಗಾಗಿ ಹಾಗು ಅಕ್ಕ ತಂಗಿಯರ ರಕ್ಷಣೆಗಾಗಿ ರಕ್ಷಾ ಬಂಧನವನ್ನು ಆಚರಿಸುವ ಪದ್ಧತಿಯು ನಮ್ಮ ದೇಶದಲ್ಲಿ ಪ್ರಾರಂಭವಾಯಿತು.
ರಕ್ಷಾ ಬಂಧನದ ಮೂಲ ಉತ್ತರ ಭಾರತವಾಗಿದ್ದರು ಇಂದು ನಮ್ಮ ದೇಶದ ಮೂಲೆ ಮೂಲೆಗಳಲ್ಲಿ ಕೂಡ ಈ ಹಬ್ಬವನ್ನು ಆಚರಿಸಲಾಗುತ್ತದೆ.ಮುಖ್ಯವಾಗಿ ಹೇಳಬೇಕಾದರೆ ಈ ಹಬ್ಬವು , ದೈನಂದಿನ ಚಟುವಟಿಕೆಗಳಲ್ಲಿ ಮರೆತು ಹೋಗಿರುವ ಅಣ್ಣ – ತಂಗಿ ಮತ್ತು ಅಕ್ಕ ತಮ್ಮಂದಿರ ಸಂಬಂಧಗಳನ್ನು ಮತ್ತೆ ನೆನಪಿಗೆ ತರುವಂತಹ ಕೆಲಸ ಮಾಡುತ್ತದೆ. ಅಣ್ಣ ತಂಗಿಯರ ಮಧುರ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ.
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹಿಂದೂ ಸಂಪ್ರದಾವದಲ್ಲಿ ಆಚರಿಸುವ ಪ್ರತಿಯೊಂದು ಹಬ್ಬಕ್ಕೂ ಅದರದೇ ಆದ ವಿಶೇಷತೇ ಇದೆ.
ನಮ್ಮ ಉತ್ತರ ಕರ್ನಾಟಕದಲ್ಲಿ ಹೆಣ್ಣುಮಕ್ಕಳು ಮದುವೆಯಾದ ಕೆಲವು ವರ್ಷಗಳವರೆಗೆ ಪಂಚಮಿ ಹಬ್ಬಕ್ಕೆ ತವರು ಮನೆಗೆ ಹೋಗುವ ವಾಡಿಕೆ ಇದೆ. ಹಾಗೆಯೆ ಪಂಚಮಿಗೆ ಹೋದರೆ ರಾಖಿ ಪೂರ್ಣಿಮೆಯು ಮುಗಿಸಿಯೇ ವಾಪಸ್ಸು ಬರುವುದು ರೂಢಿತನವಾದ ಪದ್ಧತಿ. ಪಂಚಮಿಗೆ ತವರಿಗೆ ಹೋದ ಹೆಣ್ಣುಮಕ್ಕಳು ತವರಿನ ಸುಖವನ್ನು ಪಡೆದು, ವಿಧ ವಿಧವಾದ ಉಡುಗೊರೆಗಳನ್ನು ಪಡೆದು ಸಂತಸದಿಂದ ಗಂಡನ ಮನೆಗೆ ಮರಳುವ ಸಂಭ್ರಮವೇ ಅನಿರ್ವಚನೀಯ.
ಹಿಂದಿನ ಕಾಲದಲ್ಲಿ ಪಂಚಮಿಗೆ ತವರಿಗೆ ಬಂಡ ಹೆಣ್ಣು ಮಕ್ಕಳು ರಾಖಿ ಹುಣ್ಣಿಮೆಗೋಸ್ಕರ ಮನೆಯಲ್ಲಿಯೇ ರಾಖಿಗಳನ್ನು ತಯಾರಿಸುತಿದ್ದರ ಮತ್ತು ಕೈಯಿಂದ ತಯಾರಿಸಿದ ರಾಖಿಯನ್ನು ಅಣ್ಣ ತಮ್ಮಂದಿರಿಗೆ ಕಟ್ಟಿ ಅವರಿಂದ ಕಾಣಿಕೆಯನ್ನು ಪಡೆಯುತಿದ್ದರು.
ಈ ರಕ್ಷಾ ಬಂಧನವೇ ಹಾಗೆ ಇದು ಕೇವಲ ಒಂದು ಹಬ್ಬವಾಗದೆ ಸಂಬಂಧಗಳನ್ನು ಬೆಸೆಯುವ ಒಂದು ಕೊಂಡಿಯಾಗಿದೆ . ಚಿಕ್ಕಂದಿನಿಂದಲೂ ಜೊತೆಯಾಗಿ ಕುಡಿ ಬೆಳೆದ ಅಣ್ಣ – ತಂಗಿ ಅಕ್ಕ -ತಮ್ಮ ಪ್ರತಿ ರಕ್ಷಾ ಬಂಧನದಲ್ಲೂ ಕೂಡಿ ಮಡಿದ ರಾಖಿಗಳು. ಮನೆಯನ್ನು ತರಿಳು ತೋರಣಗಳಿಂದ ಶೃಂಗರಿಸಿದ ಆ ಕ್ಷಣಗಳು , ರಾಖಿಯನ್ನು ಇಡುವ ತಟ್ಟೆಯ ಶೃಂಗಾರ , ರಾಖಿ ತಟ್ಟೆಯಲ್ಲಿಡುವ ದೀಪದ ಪಣತಿಗೆ , ಬತ್ತಿ ಮಾಡಿ ಎಣ್ಣೆಯ ಹಾಕಿದ ಆ ದೀಪ ಹಚ್ಚಿದ ನೆನಪುಗಳು , ಅಷ್ಟೊಂದು ಸುಂದರ ಅರಿಶಿಣ, ಕುಂಕುಮ , ಮಂತ್ರಾಕ್ಷತೆಯನ್ನು ಹಾಕಿ , ರಾಖಿಯನ್ನು ಕಟ್ಟಿ , ಸಿಹಿಯನ್ನು ತಿನ್ನಿಸಿ , ಆರತಿ ಮಾಡಿ ತಾಯಂದಿರು ತಯಾರಿಸಿದ ಸಿಹಿ ತಿನುಸುಗಳನ್ನು ತಿನ್ನಿಸುವುದು ಒಂದು ಸುಂದರ್ ಕ್ಷಣವೇ ಸರಿ. ಎಲ್ಲವೂ ಮುಗಿದ ನಂತರ ಮನೆಯ ಜನರೆಲ್ಲಾ ಕುಳಿತುಕೊಂಡು ಪ್ರೀತಿಯಿಂದ ಭೋಜನ ಮಾಡುವುದೇ ಒಂದು ಸುಂದರ ಅನುಭವ.
ಕೆಲವು ಜನರ ಅನಿಸಿಕೆಯ ಪ್ರಕಾರ ರಾಖಿ ಕಟ್ಟುವುದು ಎಂದರೆ ಹೆಣ್ಣು ಮಕ್ಕಳ ರಕ್ಷಣೆಗಾಗಿ ಮಾತ್ರ ಎಂದು , ಆದರೆ ಅದು ಕೇವಲ ಹೆಣ್ಣು ಮಕ್ಕಳ ಅಂದರೆ ಅಕ್ಕ – ತಂಗಿಯರ ರಕ್ಷಣೆಗೋಸ್ಕರ ,ಸಹಾಯಕ್ಕೋಸ್ಕರ ಮಾತ್ರವಲ್ಲ , ಅಣ್ಣ – ತಮ್ಮ , ಅಪ್ಪ ಚಿಕ್ಕಪ್ಪ, ಮತ್ತು ಅಜ್ಜಂದಿರ ರಕ್ಷಣೆಗೂ ಕೂಡ ಅಳವಡಿಸುತ್ತದೆ . ಎಷ್ಟೋ ಕಡೆ ಹೆಣ್ಣು ಮಕ್ಕಳು ಮಾಡುವೆ ಆಗಿ ಹೋದರು ಕೂಡ ತಮ್ಮ ತವರುಮನೆಯವರನ್ನು ಕೂಡ , ತನ್ನ ಗಂಡನ ಮನೆಯವರ ಜೊತೆ ಅಂದರೆ ಅತ್ತೆ ಮಾವಂದಿರ ಜೊತೆ ತನ್ನ ತಂದೆ ತಾಯಂದಿರನ್ನು ಮತ್ತು ಕೆಲವೊಂದು ಸಮಯದಲ್ಲಿ ತಮ್ಮ ಅಣ್ಣ ತಮ್ಮಂದಿರನ್ನು ಕಠಿಣ ಪರಿಸ್ಥಿತಿಯಲ್ಲಿ ನೋಡಿಕೊಂಡು ಅವರ ಜವಾಬ್ದಾರಿಯನ್ನು ತಾನು ಹಂಚಿಕ್ನೋದ ಬಹಳಷ್ಟು ಹೆಣ್ಣುಮಕ್ಕಳನ್ನು ನಾವು ಕಂಡಿದ್ದೇವೆ.
ಅದಕ್ಕೆ ನಾನು ಹೇಳೋದು ಈ ರಾಖಿ ಹುಣ್ಣಿಮೆನೆ ಅಷ್ಟೊಂದು ವಿಶಿಷ್ಟಕರವಾದ ಹಬ್ಬ. ಕೆಲವು ಮನೆಗಳಲ್ಲಿ ಇಬ್ಬರು ಗಂಡು ಮಕ್ಕಳೇ ಇರೋದು , ಅವರಿಗೆ ರಾಖಿ ಕಟ್ಟೋಕೆ ಮನೆಯಲಿ ಒಂದು ಹೆಣ್ಣು ಮಗು ಕೂಡ ಇರುವುದಿಲ್ಲ ಅಂತಹ ಸಂಧರ್ಭದಲ್ಲಿ ಚಿಕ್ಕಮನ , ದೊಡ್ಡಮ್ಮನ ಮಕ್ಕಳು , ಅಥವಾ ಅಕ್ಕ ಪಕ್ಕದಲ್ಲಿ ವಾಸಿಸುವ , ನಮ್ಮ ಗೆಳೆಯರು ಬೇರೆ ನೆಂಟರಿಷ್ಟರ ಮಕ್ಕಳು ಕೂಡ ರಾಖಿಯನ್ನು ಕಟ್ಟುವುದು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮಾತ್ರ ಕಾಣಬಹುದು. ಮತ್ತೆ ಕೆಲವು ಕಡೆ ಕೆಲವು ಹೆಣ್ಣು ಮಕ್ಕಳು ತಮ್ಮ ಅಣ್ಣ ತಮ್ಮಂದಿರಿಗೆ ಹಾಗು ಚಿಕ್ಕಮ್ಮ , ಚಿಕ್ಕಪ್ಪ , ದೊಡ್ಡಮ್ಮ , ದೊಡ್ಡಪ್ಪನ ಮಕ್ಕಳಿಗೆ ಅವರ ಮನೆಯಲ್ಲಿ ಹೆಣ್ಣು ಮಕ್ಕಳಿಲ್ಲದ ಕಾರಣ ತಾವೇ ರಾಖಿ ಹುಣ್ಣಿಮೆ ದಿನ ಊಟಕ್ಕೆ ಕರೆದು ರಾಖಿಯನ್ನು ಕಟ್ಟುವುದು , ಎಲ್ಲರಿಗು ಒಂದು ಒಳ್ಳೆಯ ಭ್ರಾತೃತ್ವದ ಸಂದೇಶವನ್ನು ಕೊಡುತ್ತದೆ .
ಇನ್ನು ರಾಖಿಗಳ ಬಗ್ಗೆ ಹೇಳಬೇಕೆಂದರೆ , ಹಿಂದಿನ ಕಾಲದಲ್ಲಿ ಹತ್ತಿಯ ನೂಲಿನಿಂದ ಮನೆಯಲ್ಲಿಯೇ ತಯಾರಿಸುತ್ತಿದ್ದರು , ಆದರೆ ಕಾಲ ಮುಂದುವರೆದಂತೆ ವಿವಿಧ ರೀತಿಯ ರಾಖಿಗಳು ಅಂಗಡಿ ಮಾರಾಟಗಳಲ್ಲಿ ದೊರಕಲಾರಂಭಿಸಿದವು. ಮಕ್ಕಳಿಗೋಸ್ಕರ ಕಾರ್ಟೂನಿನ ಪಾತ್ರದ ವಿವಿಧ ರಾಖಿಗಳು , ಗಡಿಯಾರದ ರೂಪದಲ್ಲಿರುವ ರಾಖಿಗಳು, ದೇವರ ರೂಪದಲ್ಲಿರುವ ರಾಖಿಗಳು , ಇನ್ನಿತರ ವಿವಿಧ ರೀತಿಯ ಚಿತ್ತಾರಗಳುಳ್ಳ ರಾಖಿಗಳು , ಚಿಕ್ಕ ಗಾತ್ರದಿಂದ ಹಿಡಿದು ದೊಡ್ಡ ಗಾತ್ರದ ರಾಖಿಗಳು ನಮಗೆ ಕಾಣಸಿಗುತ್ತದೆ . ಮತ್ತೆ ಮುಂದು ವರೆದು ನೋಡಿದರೆ ಈಗಿನ ಕಾಲದಲ್ಲಿ , ಉನ್ನತ ವ್ಯಾಸಂಗಕ್ಕಾಗಿ , ನೌಕರಿ ಮಾಡುವುದಕ್ಕಾಗಿ ದೊರದ ಊರಿನಲ್ಲಿ ಅಥವಾ ದೂರದ ದೇಶದಲ್ಲಿ ನೆಲೆಸಿರುವ ಅಣ್ಣ – ತಮ್ಮಂದಿರಿಗೆ ಪೋಸ್ಟ್ ಅಥವಾ ಅಂಚೆಯ ಮೂಲಕ ಕಲಿಸುವುದಕ್ಕಾಗಿ ವಿಶೇಷ ರೀತಿಯ ರಾಖಿಗಳನ್ನು ಕೂಡ ತಯಾರಿಸಲಾಗುತ್ತಿದೆ.
ಎಷ್ಟೇ ವಯಸಾಗಲಿ , ಎಷ್ಟೇ ದೂರವಿರಲಿ ಈ ಹಬ್ಬದ ಮೂಲಕ ಮತ್ತೆ ಎಲ್ಲರನ್ನು ಒಂದು ಗುಡಿಸುವ ಕೆಲಸ ಮಾಡುತ್ತಿದೆ ಈ ಚಿಕದಾದ ನೂಲಿನ ರಾಖಿ . ಮತ್ತೆ ರಾಖಿ ಹುಣ್ಣಿಮೆ ಇನ್ನು ತಿಂಗಳು ಮುನ್ನಿರುವಾಗಲೇ ಅಂಗಡಿಗಳಲ್ಲಿ ವಿವಿಧ ರೀತಿಯ ರಾಖಿಗಳು ರಾರಾಜಿಸುತಿರುತ್ತವೆ , ನೋಡಿಗರ ಕಣ್ಣು ಕುಕ್ಕುಸುತ್ತಿವೆ . ಯಾವುದು ಖರೀದಿಸುವುದು , ಯಾವುದು ಬಿಡುವುದು ಗೊಂದಲ ಬೇರೇ. ಅಲ್ಲೂ ಕೂಡ ಕಿಕ್ಕಿರಿದ ಜನ ಜಂಗುಳಿ , ಹಾಗೇನೇ ತಮ್ಮ ತಮ್ಮ ಅಂತಸ್ತಿನ ಪ್ರಕಾರ ಬೆಳ್ಳಿ ಮತ್ತು ಬಂಗಾರದ ರಾಖಿಗಳನ್ನು ಕೂಡ ಇಂದಿನ ಕಾಲದಲ್ಲಿ ಕಾಣುತಿದ್ದೇವೆ .
ಹಾಗೇನೇ ಈ ರಕ್ಷಾ ಬಂಧನಕ್ಕೆ ಬೇರೆ ಬೇರೆ ರಾಜ್ಯಗಳಲ್ಲಿ , ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತಿದ್ದೆ , ಉತ್ತರ ಭಾರತದಲ್ಲಿ ರಕ್ಷಾ ಬಂಧನ , ಗುರಾತಿನಲ್ಲಿ ಪವಿತ್ರೋ ಪಾನ , ಮಹಾರಾಷ್ಟ್ರದಲ್ಲಿ ರಾಖಿ ಪೂರ್ಣಿಮಾ , ಬಂಗಾಳ ಮತ್ತು ಒಡಿಸ್ಸಾದಲ್ಲಿ ಝೂಲನ್ ಪೂರ್ಣಿಮಾ , ಕರ್ನಾಟಕದಲ್ಲಿ ನೂಲು ಹುಣ್ಣಿಮೆ ಹಾಗು ಛತ್ತೀಸಘಡ್ನಲ್ಲಿ ಕಜರಿ ಪೂರ್ಣಿಮಾ
ಬೇರೆ ಬೇರೆ ಪ್ರಾಂತ್ಯಗಳಲ್ಲಿ , ಬೇರೆ ಬೇರೆ ಹೆಸರುಗಳಲ್ಲಿ ಕರೆಯಲ್ಪಡುವ ಹಬ್ಬವೇ ರಕ್ಷಾ ಬಂಧನ ಅಥವಾ ರಾಖಿ ಹುಣ್ಣಿಮೆ
ರೂಪಾ ಪಾಟೀಲ
( ಹವ್ಯಾಸಿ ಲೇಖಕರು )