ಕೋವಿಡ –19 ವೈರಾಣು

ಇಡೀ ವಿಶ್ವವೇ ತಲ್ಲಣಗೊಳಿಸಿರುವ ವೈರಾಣ ಈ ಒಂದು ಮಹಾಮಾರಿರೋಗಕ್ಕೆ ಈಗಾಗಲೇ ಲಕ್ಷಾಂತರ ಜನರು ಸಾವಿಗೀಡಾಗಿದ್ದಾರೆ ಅಲ್ಲದೆ ಲಕ್ಷಾಂತರ ಜನರು ಈ ಒಂದು ಸೋಂಕಿಗೆ ಒಳಗಾಗಿದ್ದು ಅನೇಕ ರೀತಿಯ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಒಂದುರೋಗದ ವೈರಸನ ತೀವ್ರತೆ ತುಂಬಾ ಜಾಸ್ತಿ ಇದೆ ಈ ವೈರಾಣು 2019ರಲ್ಲಿ ಕಾಣಿಸಿಕೊಳ್ಳುವುದರಿಂದ ಇದಕ್ಕೆ ಕೋವಿಡ_19 ಎಂದು ಕರೆಯಲಾಗಿದೆ.

ಈ ಒಂದು ವೈರಸ್ ಮೊದಲು ಕಾಣಿಸಿಕೊಂಡಿದ್ದು ಚೈನಾದೇಶದ ವ್ಯೊಹಾನ ಎಂಬ ಪಟ್ಟಣದಲ್ಲಿ ನಮ್ಮ ಸಂಶೋಧಕರು ಅನೇಕ ರೀತಿಯ ಸಂಶೋಧನೆಗಳನ್ನು ಮಾಡಿದ ನಂತರ ಅಲ್ಲಿನ ಜನರು ಮಾಂಸಹಾರಿಗಳು ತಿನ್ನಲು ಅನೇಕರೀತಿಯ ಕಪ್ಪೆ, ಕ್ರಿಮಿಕೀಟ,ಸರಿಸೃಪ , ಮುಂತಾದ ಅನೇಕ ರೀತಿಯ ಪ್ರಾಣಿಗಳ ಸೇವನೆಯನ್ನು ಮಾಡುತ್ತಿದ್ದರು ಒಂದು ಪದ್ಧತಿಯಿಂದಲೂ ಈ ರೀತಿಯ ವೈರಸ್ ಹುಟ್ಟಿಕೊಂಡಿದೆ ಎಂದು ಕೆಲವರು ಹೇಳಿದ್ದಾರೆ ಮತ್ತೆ ಕೆಲವರು ಈ ಒಂದು ವೈರಾಣುಗೆ ಜ್ವಾಲಾಮುಖಿಯ ಮೂಲ ಕಾರಣವೆಂದು ಹೇಳಿದರು ಜ್ವಾಲಾಮುಖಿ ಹೊರಬರುವಂತೆ “ಲಾವಾ” ಎಂಬ ದ್ರವದಿಂದ ಈ ವೈರಾಣು ಹುಟ್ಟಿಕೊಂಡಿದೆ ಎಂದು ಕೆಲವರು ಹೇಳುತ್ತಾರೆ ಯಾವುದು ಮೂಲ ಕಾರಣ ಎಂದು ನಿಖರವಾದ ಮಾಹಿತಿ ಲಭಿಸಿಲ್ಲ ಇನ್ನೂ ಸಂಶೋಧನೆ ನಡೆಯುತ್ತಿದೆ

ಈ ಒಂದು ವೈರಸ್ ಇದು ಪ್ರಾಣಿಗಳಲ್ಲಿ ಮತ್ತು ಮನುಷ್ಯರಲ್ಲಿ ಮುಖ್ಯವಾಗಿ ಶ್ವಾಸಕೋಶ ದ ಹಾಗೂ ಉಸಿರಾಟಕ್ಕೆ ತೊಂದರೆಯನ್ನುಂಟು ಮಾಡುತ್ತದೆ ಈ ಒಂದು ರೋಗ ಒಬ್ಬರಿಂದ ಮತ್ತೊಬ್ಬರಿಗೆ ಬಹುಬೇಗ ಹರಡುವಂತಹ ರೋಗ

ಇದು ಒಂದು ಸಾಂಕ್ರಾಮಿಕ ರೋಗ ಒಬ್ಬರಿಂದ ಒಬ್ಬರಿಗೆ ಬಹುಬೇಗ ಹರಡುವಂತಹ ರೋಗ ಒಂದು ದೂರದೃಷ್ಟಿ  ಸಂಗತಿಯೆಂದರೆ ಇಂಥ ಒಂದು ಸಾಂಕ್ರಾಮಿಕ ರೋಗಗಳು ನಾವು ಸುಮಾರು 100ರಷ್ಟು ವರ್ಷಗಳಿಗೊಮ್ಮೆ ಇಂತಹ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿವೆ ಎಂದು ಹೇಳಬಹುದು 1 ಸಂಖ್ಯೆಗಳ ಪ್ರಕಾರ 172೦ ರಲ್ಲಿ ಪ್ಲೇಗ್ ಎಂಬ ಮಹಾಮಾರಿಗೆ ಅನೇಕ ಜನರು ಸಾವಿಗೀಡಾಗಿದ್ದಾರೆ. ಈ ಒಂದು ರೋಗವು ಇಲಿ ಯಿಂದ ಹರಡುವಂತಹ ರೋಗ ಅಂದು ಈ ಒಂದು ಮಹಾಮಾರಿ ರೋಗಕ್ಕೆ ಸಾವಿರಾರು ಜನರು ಸಾವಿಗೀಡಾಗಿದ್ದಾರೆ ಒಂದು ಊರಲ್ಲಿ ಒಂದು ರೋಗ ಬಂದಿದೆ ಅಂದರೆ ಇಡೀ ಊರೇ ಸರ್ವನಾಶ ಆಗುತ್ತಿದ್ದಂತೆ

ತದಾನಂತರ 1820 ರಲ್ಲಿ ಕಾಲರಾ ರೋಗ ಅನೇಕ ಜನರು ಸಾವಿಗೀಡಾಗಿದ್ದಾರೆ ಈ ರೋಗ ಕೂಡ ಒಂದು ಸಾಂಕ್ರಾಮಿಕ ರೋಗದಂತೆ ವಾಂತಿ ಭೇದಿ ಸ್ವಚ್ಛತೆ ಇಲ್ಲದೆ ಹುಟ್ಟಿಕೊಂಡಿರುವ ರೋಗ.ತದಾನಂತರ 2019ರ ಪ್ರಾರಂಭದಲ್ಲಿ ಕೋರೋನ ಎಂಬ ವೈರಸ್ ಇಡೀ ವಿಶ್ವವನ್ನೇ ಬೆರಗಾಗಿಸಿ ದೆ

ಕೋವಿಡ್_19 ಇದು ಒಂದು ಮಹಾಮಾರಿ ರೋಗ ಇವಂದು ರೋಗ ಒಬ್ಬರಿಂದ ಮತ್ತೊಬ್ಬರಿಗೆ ಯಾವ ರೀತಿಯಲ್ಲಿ ಹರಡುತ್ತದೆ ಮತ್ತು ಅದರ ಲಕ್ಷಣಗಳೇನು

ಇದರ ಲಕ್ಷಣಗಳು.
ಜ್ವರ
ತಲೆನೋವು
ನೆಗಡಿ ಮತ್ತು ಕೆಮ್ಮು
ಉಸಿರಾಟದ ತೊಂದರೆ
ಬೇದಿ
ಎಂದು ಹೇಳಬಹುದು

ಇಂತಹ ಲಕ್ಷಣಗಳು ಕಂಡು ಬಂದರೆ ಅದು ಕೋರೋನವೈರಸ್ ನ ಲಕ್ಷ್ಮಣ ಎಂದೇ ಹೇಳಬಹುದು ಆದರೆ ಲಕ್ಷಣ ಕಾಣಿಸಿಕೊಂಡಾಗ ಭಯಪಡದೆ ಅದನ್ನು ಎದುರಿಸುವ ಸಾಮರ್ಥ್ಯ ನಾವು ತಂದುಕೊಳ್ಳಬೇಕು

ಈ ಒಂದು ರೋಗ ಒಬ್ಬರಿಂದ ಮತ್ತೊಬ್ಬರಿಗೆ ಯಾವ ರೀತಿಯಲ್ಲಿ ಹೇಳುತ್ತದೆ
1. ಸೋಂಕಿತ ವ್ಯಕ್ತಿಯು ಸೀನಿದಾಗ ಮತ್ತು ಕೆಮ್ಮಿದಾಗ
2. ಸೋಂಕಿತ ವ್ಯಕ್ತಿಯ ಜೊತೆ ನಿಕಟ ಸಂಪರ್ಕದಲ್ಲಿದ್ದಾರೆ. ಹಸ್ತಲಾಘವ ಅಥವಾ ಮುಟ್ಟಿದಾಗ
3. ಸೋಂಕಿತ ವ್ಯಕ್ತಿಯು ಬಳಸಿದ ವಸ್ತುಗಳನ್ನು ಯಾವುದೇ ರಕ್ಷಣೆ ಇಲ್ಲದೆ ಪುನಃ ಬಳಸಿದಾಗ
4. ಸ್ವಚ್ಛಗೊಳಿಸದ ಕೈಗಳೇ ಕೈಗಳಿಂದ ಕಣ್ಣು ಮೂಗು ಬಾಯನ್ನು ಮುಟ್ಟುವುದರಿಂದ
ಈ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ವಂಥದ್ದು

ಇದು ಈಗಾಗಲೇ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ತಾಂಡವಾಡುತ್ತಿದೆ ಅನೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಕೂಡ ಈ ಒಂದು ಮಹಾಮಾರಿ ರೋಗಕ್ಕೆ ಶರಣಾಗತಿ ಇವಂದು ಮಹಾಮಾರಿ ರೋಗಕ್ಕೆ ತೀವ್ರಗತಿಯಲ್ಲಿ ತುತ್ತಾಗಿರುವ ಅಂತಹ ದೇಶ ಎಂದರೆ ಇಟಲಿ, ಅಮೇರಿಕಾ,ಸ್ಪೇನ್ , ನೈಜೀರಿಯಾ ಮುಂತಾದ ಅನೇಕ ರಾಷ್ಟ್ರಗಳು ಈ ಒಂದು ಮಹಾಮಾರಿ ರೋಗದಿಂದ ಕೈಗೆಟುಕದ ಪರಿಸ್ಥಿತಿಯಲ್ಲಿದೆ 1 ಮಹಾಮಾರಿ ರೋಗಕ್ಕೆ ಶರಣಾಗತ ವಾಗಿದೆ.
ಈ ವೈರಸ್ ಗೆ ತುತ್ತಾದ ಅಂತಹ ರಾಷ್ಟ್ರಗಳಲ್ಲಿ ನಮ್ಮ ರಾಷ್ಟ್ರ ಒಂದು ಆದರೆ ಇಲ್ಲಿ ಅದು ಅಷ್ಟು ಭೀಕರ ವಾದಂತಹ ಪರಿಸ್ಥಿತಿ ಇಲ್ಲ ಇಲ್ಲಿವರೆಗೂ ಇದಕ್ಕೆ ಕಾರಣ ನಮ್ಮ ಮೋದಿಜಿ ಮತ್ತು ನಮ್ಮ ಭಾರತ ದೇಶದವರು ಧಾರ್ಮಿಕ ಶಕ್ತಿಯ ಮೇಲೆ ನಂಬಿಕೆ ಇದೇ ಮುಖ್ಯ ಕಾರಣ
ನಮ್ಮ ಭಾರತ ದೇಶದಲ್ಲಿ ಅನೇಕ ರಾಜ್ಯಗಳಲ್ಲಿ ಈ ವೈರಸ್ ವಿದೇಶದಿಂದ ಬಂದವರಿಂದಲೇ ಹರಡಿ ದಂತಹ ಒಂದು ರೋಗ ಈ ರೋಗದಿಂದ ಜನರು ಮುಕ್ತಿ ಪಡೆಯುವುದು ಎಂದರೆ ಲಾಕ್ ಡೌನ್ ಮುಖಾಂತರ ಒಂದೇ ಮಾರ್ಗ ಹಾಗಾಗಿ ನಮ್ಮ ಮೋದಿಜಿ ಅವರು ಇಡೀ ಭಾರತ ದೇಶವನ್ನೇ ಭಾರತ ದೇಶಕ್ಕೆ ದಿಗ್ಬಂಧನ ಮಾಡಲು ಹೇಳಿದ್ದಾರೆ

ಭಾರತ ದಿಗ್ಬಂಧನ ಮಾಡುವ ಮೂಲ ಉದ್ದೇಶ..
ಕರುನಾ ಮಹಾಮಾರಿ ರೋಗ ಹರಡದಂತೆ. ತಡೆ ತಡೆ ಹಿಡಿಯಲು stay at home ಮನೆಯಲ್ಲಿ ಸುರಕ್ಷಿತವಾಗಿರುವ ಒಂದೇ ಮಾರ್ಗೋಪಾಯ ಎಂದು ಹೇಳಬಹುದು
ಕೋರೋನ ವೈರಸ್ ಅನ್ನೆ ಒಂದು ಸವಾಲಾಗಿ ತೆಗೆದುಕೊಂಡುಅದನ್ನು ಎದುರಿಸಲು ಒಂದೇ ಒಂದು ಮಾರ್ಗ ನಮ್ಮನ್ನು ನಾವು ಲಕ್ಷ್ಮಣರೇಖೆ ಹಾಕಿ ಮನೆಯಲ್ಲಿರುವ ಮೋದಿಜಿಅವರು ಇಡೀ ಭಾರತ ದೇಶವನ್ನು ದಿಗ್ಬಂಧನ ಹಾಕಿರುವುದನ್ನು ನೋಡಿ ಇತರ ರಾಷ್ಟ್ರಗಳು ಕೂಡ ಮೋದಿಯ ಮೋದಿಯ ಕಾರ್ಯವನ್ನು ನೋಡಿ ಪ್ರಶಂಸೆ ಮಾಡಿದ್ದಾರೆ
ಇಡೀ ಭಾರತ ದೇಶಕ್ಕೆ ದಿಗ್ಬಂಧನದಿಂದ ಅನೇಕ ರೀತಿಯ ಕಷ್ಟಗಳು ಎದುರಿಸಬೇಕಾಗುತ್ತದೆ ಆದರೂ ಅದಕ್ಕಿಂತ ದೊಡ್ಡ ಕಷ್ಟವನ್ನು ನಾವು ಭಾರತಭಾರತ ದೇಶಕ್ಕೆ ದಿಗ್ಬಂಧನ ಹಾಕದಿದ್ದರೆ ಅದಕ್ಕಿಂತಲೂ ಹೆಚ್ಚಿನ ಸಮಸ್ಯೆ ಮತ್ತು ಸಾವಿನ ಸರಮಾಲೆಗಳ ಅಂಚಿನಲ್ಲಿ ಇರಬೇಕಾಗಿರುವ ಅಂತಹಪರಿಸ್ಥಿತಿ ನಮ್ಮದಾಗಿರುತ್ತಿತು
ಭಾರತ ದೇಶಕ್ಕೆ ದಿಗ್ಬಂಧನಕ್ಕೆ ಇಡೀ ಭಾರತ ದೇಶದ ಪ್ರಜೆಗಳು ಸಹಕರಿಸುತ್ತಿದ್ದಾರೆ ಅದರಲ್ಲಿ ಕೆಲವರು ಅಂದರೆ
1. ನಮ್ಮ ವೈದ್ಯರು ಮತ್ತು ಆರೋಗ್ಯ ಇಲಾಖೆ
2. ನಮ್ಮ ಪೌರಕಾರ್ಮಿಕರು
3. ನಮ್ಮ ವೀರ ಸೈನಿಕರು
4. ನಮ್ಮ ಪೊಲೀಸ್ 🙏🏻🙏🏻🙏🏻🙏🏻🙏🏻💐💐💐 ಇವರ ಕೆಲಸವಂತೂ ಬಹಳ ಮಹನೀಯ ವಾದಂತಹ ಕೆಲಸ ಅಂತ ಹೇಳಬಹುದು
1. ಇಡೀ ಭಾರತ ದೇಶವನ್ನು ತನ್ನ ಕುಟುಂಬ ವೆಂದು ತಿಳಿದುಕೊಂಡ ನಮ್ಮ ಮೋದಿಜಿ”ವಸುದೈವ ಕುಟುಂಬಕಂ” ಈ ಒಂದು ಮಹಾಮಾರಿ ಕೋರೋನ ನಾವೆಲ್ಲರೂ ಒಂದಾಗಿ ಧೈರ್ಯದಿಂದ ಧೃತಿಗೆಡದೆ ಈ ಮಹಾಮಾರಿ ಕೋರೋನ ಎದುರಿಸೋಣ🙏🏻 ಎಂದು ತಿಳಿಸಿದ್ದಾರೆ
2. ಅದೇ ರೀತಿ ತಮ್ಮ ಪ್ರಾಣವನ್ನು ಮುಡುಪಾಗಿಟ್ಟು ಹಗಲಿರುಳು ಎನ್ನದೆ ಸತತವಾಗಿ ತಮ್ಮ ಕೆಲಸ ದೇವರ ಕೆಲಸ ಎಂದು ತಿಳಿದು ಮಾಡುತ್ತಿರುವ ನಮ್ಮ ವೈದ್ಯರು ಮತ್ತು ನರ್ಸ್ ಅವರೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ ಅವರಿಗೆ ನಮ್ಮ🙏🏻 ನಮನಗಳು
3. ಅದೇ ರೀತಿ ನಮ್ಮ ಪೊಲೀಸರು ಕೂಡ 24 ಗಂಟೆಗಳ ಕಾಲ ತಮ್ಮ ಕುಟುಂಬ ಜೊತೆಯಲ್ಲಿ ಸಮಯ ಕಳೆಯದೆ ಜನರ ರಕ್ಷಣೆಯೇ ನಮ್ಮ ಮುಖ್ಯ ಗುರಿ ಎಂದು ತಿಳಿದ ಪೊಲೀಸರು ರಸ್ತೆಗಳಲ್ಲಿ ಬೀದಿಬೀದಿಗಳಲ್ಲಿ ಜನರಿಗೆ ತಿಳಿಹೇಳಿ ಜನರಲ್ಲಿ ಜಾಗೃತಿಯನ್ನು ಕೊಡುತ್ತಿದ್ದಾರೆ ನಮ್ಮ ಪೊಲೀಸರು🙏🏻

4. ರಸ್ತೆ. ರೈಲ್ವೆ ನಿಲ್ದಾಣ. ಬಸ್ ನಿಲ್ದಾಣ . ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಮತ್ತು ಬೀದಿಗಳು ತಮ್ಮ ಜೀವನದ ಪರವೇ ಇಲ್ಲದೆ ಕೆಲಸ ಮಾಡುತ್ತಿರುವಂತಹ ನಮ್ಮ ಪೌರಕಾರ್ಮಿಕರು ಅವರಿಗೆ ನಮ್ಮ ನಮನ🙏🏻

ಭಾರತ ದೇಶದ ದಿಗ್ಬಂಬಂಧನದಿಂದಾಗಿ ಸಾವಿರಾರು ಜನರಿಗೆ ಸಾವಿರಾರು ರೀತಿಯ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಅದರಲ್ಲಿ , ಬಡಜನರು, ವ್ಯಾಪಾರಸ್ಥರು, ಉದ್ದಿಮೆದಾರರು ಮುಂತಾದ ಹಲವಾರು ಜನರಿಗೆ ಹಲವಾರು ರೀತಿಯ ಹಲವಾರು ಸಮಸ್ಯೆಗಳು ಎದುರಿಸುತ್ತಿದ್ದಾರೆ ಆದರೂ ಈ ಎಲ್ಲಾ ಸಮಸ್ಯೆಗಳನ್ನು ನಾವು ಎದುರಿಸಬೇಕು ಮತ್ತು ಕೋರೋನ ಎಂಬ ಮಹಾಮಾರಿ ರೋಗ ಹೋಗಲಾಡಿಸಲು ನಾವೆಲ್ಲರೂ ಒಂದೇ ಯಾವುದೇ ರೀತಿಯಲ್ಲಿ ಜಾತಿ ಭೇದ ಮೇಲು-ಕೀಳು ಎಂಬದೆ ನಾವೆಲ್ಲರೂ ಒಂದೇ. ” ವಿವಿಧತೆಯಲ್ಲಿ ಏಕತೆ ” ಎಂದು ಸಾರುತ್ತಾ”ಒಗ್ಗಟ್ಟಿನಲ್ಲಿ ಬಲವಿದೆ” ಎಂಬುದನ್ನು ತೋರಿಸಿ ಕೊಡುವ ಅಂತಹ ಸಂದರ್ಭ ಇದಾಗಿದೆ ಇಡೀ ವಿಶ್ವಕ್ಕೆ ನಮ್ಮ ಭಾರತ ದೇಶವು ಮಾದರಿಯಾಗಲಿ ಎಂದು ನಾವೆಲ್ಲಾ ಹಾರೈಸೋಣ

ಜೈ ಹಿಂದ್
ಜೈ ಭಾರತ್