ಅಕ್ಕ ಸ್ಮರಿಸುವೆ ದಿನವು ನಿನ್ನ ನಾಮವ

ಅಕ್ಕಮಹಾದೇವಿ ಜಯಂತಿಯ ಶುಭಾಶಯಗಳು

ಅಕ್ಕ ಸ್ಮರಿಸುವೆ ದಿನವು ನಿನ್ನ ನಾಮವ

ಚೈತ್ರ ಶುದ್ಧ ಹುಣ್ಣಿಮೆ
ಉಡುತಡಿಯಲ್ಲಿ ನಿನ್ನ ಜನನ
ಪ್ರಪ್ರಥಮ ಮಹಿಳಾ ಕವಿತ್ರಿ ಸ್ತ್ರೀ
ಕುಲಕ್ಕೆ ಹೆಮ್ಮೆಯ ಪುತ್ರಿ

ಅಕ್ಕ ಸ್ಮರಿಸುವೆ ದಿನವು ನಿನ್ನ ನಾಮವ

ಸುಮಿತ್ರಾ ದೇವಿಯ ಪ್ರೀತಿಯ ಪುತ್ರಿ
ನಿರ್ಮಲಶೆಟ್ಟಿ ಅಕ್ಕರೆಯ ಮಗಳೆ
ಸೌಂದರ್ಯಕ್ಕೆ ಮಾರುಹೋದ ಕೌಶಿಕ ರಾಜನೇ
ಹರ ಚೆನ್ನಮಲ್ಲಿಕಾರ್ಜುನನೇ ಪತಿ

ಅಕ್ಕ ಸ್ಮರಿಸುವೆ ದಿನವು ನಿನ್ನ ನಾಮವ

ಬಸವಕಲ್ಯಾಣ ಭಕ್ತಿಯ ಕ್ಷೇತ್ರವಾಯಿತು
ಅನುಭವ ಮಂಟಪದ ಭಕ್ತಿಯ ಜ್ಞಾನವನ್ನು ಉಣಬಡಿಸಿ
ಅಲ್ಲಮನ ದಿಟ್ಟ ಪ್ರಶ್ನೆಗೆ ದಿಟ್ಟ ಉತ್ತರ ಕೊಟ್ಟಳು

ಅಕ್ಕ ಸ್ಮರಿಸುವೆ ದಿನವು ನಿನ್ನ ನಾಮವ

ಸ್ತ್ರೀ ಕುಲಕ್ಕೆ ನವಮಾರ್ಗ
ವೈರಾಗ್ಯ ಮಾರ್ಗದಿಂದ
ಜಗತ್ತನ್ನು ಬೆಳಗಿದ ಜಗನ್ಮಾತೆ
ಶ್ರೀಶೈಲದ ಕದಳಿಯ ಬನದಲ್ಲಿ
ಚೆನ್ನಮಲ್ಲಿಕಾರ್ಜುನ ಐಕ್ಯವಾಗುತತ್ತಾಳೆ

ಅಕ್ಕ ಸ್ಮರಿಸುವೆ ದಿನವೂ ನಿನ್ನ ನಾಮವು

—— ಸ್ವರೂಪ  ನಾಗುರೆ