🌻ಮರೆಯಾಗುತ್ತಿದೆ ಶೀಗಿ ಹುಣ್ಣಿಮೆ🌻
ಇತ್ತೀಚಿನ ದಿನಗಳಲ್ಲಿ ನಮ್ಮ ಜಾನಪದ ಸಂಸ್ಕೃತಿಯು ಮರೆಮಾಚುತ್ತದೆ. ಎಂದು ಹೇಳುವುದೆ ತುಂಬಾ ವಿಷಾದನೀಯ.
ಮರೆಯಾಗುತ್ತಿರುವಂತಹ ಸಂಸ್ಕೃತಿಯು ಕೆಲವೊಂದು ಊರುಗಳಲ್ಲಿ ಮತ್ತು ಕೆಲವೊಂದು ಜನರ ಮನೆಗಳಲ್ಲಿ ಇನ್ನೂ ಜೀವಂತವಾಗಿದೆ. ಶೀಗಿ ಹುಣ್ಣಿಮೆ ಚಿಕ್ಕಮಕ್ಕಳಿಂದ ಹಿಡಿದು ವಯಸ್ಸಾದವರು ಕೂಡ ಈ ಹಬ್ಬ ತುಂಬಾನೇ ಸಂತೋಷ ಕೊಡುವಂತಹ ಹಬ್ಬ ಎಂದು ಹೇಳಬಹುದು.ಈ ಈ ಒಂದು ಹಬ್ಬ ಒಂದೊಂದು ಭಾಗಗಳಲ್ಲಿ ಒಂದೊಂದು ಊರುಗಳಲ್ಲಿ ಒಂದೊಂದು ತರಹದ ಆಚರಣೆಯನ್ನು ನಾವು ನೋಡುತ್ತೇವೆ.
ಶೀಗಿ ಹುಣ್ಣಿಮೆ ಎಂದರೇನು?
ಇದು ಒಂದು ಜನಪದ ಹಬ್ಬ ಎಂದು ಹೇಳಬಹುದು . ಈ ಒಂದು ಹಬ್ಬ ಚಿಕ್ಕ ಮತ್ತು ದೊಡ್ಡವರು ಹೆಣ್ಣುಮಕ್ಕಳು ಆಚರಿಸುವಂತಹ ಹಬ್ಬ . ಇದು ಒಂದು ವೈಶಿಷ್ಟ್ಯವೆಂದರೆ ಇದು ವರ್ಷದಲ್ಲಿ ಒಂದು ಸಾರಿ ಅದು ದಸರಾ ಹಬ್ಬದ ದಿನದಲ್ಲಿ ಪ್ರಾರಂಭವಾಗಿ ಸತತ ಏಳು ದಿವಸ ಆಚರಿಸುವ ಹಬ್ಬ ಇದಕ್ಕೆ ಸಗಣಿಯನ್ನು ಬಳಸಿ ಮಾಡುವಂತಹ ಹಬ್ಬ ಇದು ಒಂದು ಸಾಂಸ್ಕೃತಿಕ ಹಬ್ಬ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಹ ಹಬ್ಬ
ಸೀಗಿ ಹುಣ್ಣಿಮೆ ಇದು ನವರಾತ್ರಿ ಎಲ್ಲಿ ಬರುವಂತಹ ಒಂದು ಹುಣ್ಣಿಮೆ. ನಾಡಹಬ್ಬ ಎಂದು ಆಚರಿಸುವಂತಹ ದಸರಾ ಹಬ್ಬದ ಆಯುಧಪೂಜೆ ದಿನ ಪ್ರಾರಂಭವಾಗುವದು ಈ ಹುಣ್ಣಿಮೆ ನಮ್ಮೂರ್ ಕಡೆ (ಉತ್ತರ ಕರ್ನಾಟಕ) ಇದನ್ನು ಮಾನಂಬಿಯ ದಿನ ಪ್ರಾರಂಭವಾಗಿ ಸತತ ಏಳು ದಿವಸ ಶೀಗಿ ಹಬ್ಬ ಆಚರಿಸುತ್ತಾರೆ. ನಾವು ಚಿಕ್ಕವರಿದ್ದಾಗ ಈ ಹಬ್ಬ ತುಂಬಾನೇ ಇಷ್ಟ ಮತ್ತು ಬಹಳ ಸಂತೋಷದಿಂದ ನಮ್ಮ ಗೆಳತಿಯರ ಜೊತೆಗೂಡಿ ಬಹಳ ವಿಜ್ರಂಭಣೆಯಿಂದ ನಾವೆಲ್ಲರೂ ಆಚರಿಸುತ್ತಿದ್ದೇವು. ಸಂಜು ಹಾಡಿರುವ ಅನೇಕರೀತಿಯ ಜನಪದ ಹಾಡುಗಳು ಇಂದು ಇವಾಗಲು ಕೂಡ ನಮ್ಮ ಬಾಯಲ್ಲಿ ಆ ಹಾಡುಗಳು ಮೆಲುಕು ಹಾಕುತ್ತಲೇ ಇರುತ್ತೇವೋ ಅಂತ ಹಾಡುಗಳುಅಂತ ಅನೇಕ ಹಾಡುಗಳು ನಮ್ಮ ಜನಪದ ಹಾಡುಗಳಲ್ಲಿ ಮತ್ತು ಅನೇಕ ಗರತಿಯರ ಪದಗಳಲ್ಲಿ ನಾವು ನೋಡುತ್ತೇವೆ.
ಶೀಗಿಹುಣ್ಣಿಮೆಯ ಆಚರಣೆ ಹೇಗೆ
ಇದರ ಆಚರಣೆಯು ಒಂದು ವಿಶಿಷ್ಟ ರೀತಿಯಲ್ಲಿ ಇದೆ ನಾವು ಚಿಕ್ಕವರಿರುವಾಗ ಈ ಹಬ್ಬವನ್ನು ಆಚರಿಸುವ ಪರಿ ವ್ಯಕ್ತಪಡಿಸುತ್ತೇನೆ ನಾವು ಚಿಕ್ಕವರಿದ್ದಾಗ ಯಾರ ಮನೆಯಲ್ಲಿ ದೇಶಿಯ ಆಕಳು ಇರುತ್ತದೆ ಅದರ ಸಗಣಿಯನ್ನು ತೊಗೊಂಡು ಬಂದು ದಿನಾ ಒಂದರಂತೆ ಮನೆಯ ಪರವಾಗಿಲ್ಲ ಅಥವಾ ಹೆಬ್ಬಾಗಿಲು ಬಲಗಡೆಯ ಗೋಡೆಯ ಮೇಲೆ ದಿನ ಬಂದರಂತೆ ಆ ಸಗಣಿಯಿಂದ ಚಿತ್ರವನ್ನು ಬಿಡುತ್ತಿದ್ದೆವು ಅದರ ಪಕ್ಕದಲ್ಲಿಯೇ ಒಂದುಮಾಡ ಇರುತ್ತಿತ್ತು ಅಲ್ಲಿಯೇ ದೀಪವನ್ನು ಉರಿಸುತ್ತಿದೆವು.
ದಿನವೊಂದು ಚಿತ್ರಗಳು ಈ ಕೆಳಗಿನಂತಿವೆ.
ಮೊದಲ ದಿನ ಸೂರ್ಯ ಚಂದ್ರ
ಎರಡನೇ ದಿನ ಸರ ಚೀಲ
ಮೂರನೆಯದಿನ ಗಂಗೆ ಗೌರಿ
ನಾಲ್ಕನೆಯ ದಿನ ಕರಬನ
ಐದನೆಯ ದಿನ ಕಬ್ಬಿನ ಮೊಳ
ಆರನೆಯ ದಿನ ಭಾರಂ ಭಾವಿ
ಏಳನೆಯ ದಿನ ಏಳು ಸುತ್ತಿನ ಕೋಟೆ
ಹೀಗೆ ದಿನ ಒಂದರಂತೆ ಚಿತ್ರ ಬಿಡಿಸಿ ದಿನರಾತ್ರಿ ಸಗಣಿಯಿಂದ ಬರೆದ ಚಿತ್ರಕ್ಕೆ ಪೂಜೆ ಮಾಡಿ ಅಗರಬತ್ತಿ ತೋರಿ ಅದಕ್ಕೆ ಕುಕ್ಕಿಂನ
ಹೂಮತ್ತುಕಾರಳ ಹೂ ಗಳಿಂದ ಅಲಂಕೃತ ಮಾಡುತ್ತಿದ್ದೇವೆ. ಪೂಜಿಗಾಗಿ ಪ್ರಸಾದರೂಪದಲ್ಲಿ ದಿನ ಒಂದರಂತೆ ಒಂದು ದಿನ ಬೆಲ್ಲಾ ಶೇಂಗಾ, ಎಳ್ಳು-ಸಕ್ಕರೆ, ಅಳ್ಳು, ಹೆಸರುಬೇಳೆ ಸೆಕ್ರಿ ಹೀಗೆ ಒಬ್ಬ ಒಂದೊಂದುತಂದು ಎಲ್ಲರೂ ಒಂದರಲ್ಲೇ ಹಾಕಿ ಪೂಜೆಯೆಲ್ಲ ಆದಮೇಲೆ ಹಾಡೆಲ್ಲ ಮುಗಿದ ಮೇಲೆ ಕಟ್ಟೆಯ ಮೇಲೆ ಕುಳಿತುಕೊಂಡು ಎಲ್ಲಾ ಪ್ರಸಾದವನ್ನು ಒಂದು ಬುಟ್ಟಿಯಲ್ಲಿ ಹಾಕಿ ತಿನ್ನುತ್ತಿದ್ದೆವು.
ಹೂವನ್ನು ಹಾಕುತ್ತಿರುವಾಗ ಒಂದು ಹಾಡು
ಕುಕ್ಕಿಂನ ಹೂವಕ್ಕ ಕಾರಳ ಹೂವಕ್ಕ
ಭಾಳ ಭಾಳ ಪರಿಮಳ ಎಂಬ ಹಾಡಿನಿಂದ ಪ್ರಾರಂಭವಾಗುತ್ತಿತ್ತು
ಗೋಡೆಯ ಎದುರುಗಡೆ ಕಟ್ಟೆಯ ಮೇಲೆ ಎಲ್ಲರೂ ಕುಳಿತುಕೊಂಡು ಒಬ್ಬೊಬ್ಬರ ಧ್ವನಿಯ ಜೊತೆಗೂಡಿ ಒಬ್ಬರು ಹಾಡನ್ನು ಪ್ರಾರಂಭವಾಗುತ್ತಿತ್ತು
1, ಒಂದಾ ಎಲಿ ತರಿಸಿದ, ಅದರದೇಟು ಕಡಿಸಿದ,
ಬಾಯಿ ಕಮಲಹರಿಸಿದ
2, ಆಚವರ ದೊಡ್ಯಾ ಗ ತೆಂಗಿನ ಗಿಡ ಹುಟ್ಟಿ
ಇಚ್ಚವರ ದೊಡ್ಯಾಗ ಬಾದಾಮಿ ಗಿಡ ಹುಟ್ಟಿ
ಬದಾಮ್ ಖೊಲ್ಯಾಗಕಡಿತ ಬಾರೊ ತಮನಮ ಗಿಳಿರಾಜ.
3, ಒಂದೇ ಲಂಬದು ದಸರ ಕ್ಯಾದಿಗೆ , ಅದರ ಮೇಲೊಂದು ಅಲಕಿಲ ಮಲಕಿಲ ಮನೆಯ ಮಾಡಿದೆ.
4, ಹಳ್ಳದ ಥಡಿಯಲ್ಲಿ ಬಿತ್ಯಾರೆ ಈ ಅರಿಶಿನ ಬಾಣಂತಿ ಗೌರಮ್ಮಗಾ ಹಚ್ಚಾರೆ ಈ ಅರಶೀನ
5,ಊರು ಮುಂದಿನ ಬೇಲಿ,
ಬೇಲಿಗಿ ಹಾಕ್ಯರೆ ಕೀಲಿ
ನಮ್ಮ ಗೌರಮ್ಮ ಇಟ್ಟಾಳೆ ವಾಲಿ
ಕೋಲ ಮುತ್ತಿನ ಕೋಲೆ.
6, ಒಂದುಅಂಬದುಏನ್ ಗೌರಿ ಕೋಲು ಮುತ್ತಿನ ಕೋಲೆ
ಎರಡ್ ಅಂಬದುಏನೆ ಗೌರಿ
ಕೋಲ ಮುತ್ತಿನ ಕೋಲೆ
7, ಒಂದು ಗಿಡ ಕೊಂದ ಪತ್ರಿ
8, ಕಡ್ಡೆ ಹೇರು ಬಂದಾವಕ್ಕ ಬಂದು ಬಾಗಿಲಿಗೆ ಸಿದ್ದಾಂತಕ್ಕೆ
ಹಲವಾರು ರೀತಿಯ ವಿಶೇಷವಾಗಿ ಅರ್ಥಗರ್ಭಿತ ವಾದಂತ ಹಾಡುಗಳನ್ನು ನೋಡುತ್ತೇವೆ. ಇದರ ಸಂಪ್ರದಾಯದ ಮೂಲಕ ಅಣ್ಣ-ತಮ್ಮಂದಿರ ಆಯುಷ್ಯ ಕೂಡ ಹೆಚ್ಚಾಗಲ್ಲಿ ಮತ್ತು ಅವರಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸುತ್ತಾರೆ.
ಹೀಗೆ ಸುಮಾರು 10:11 ಗಂಟೆವರೆಗೂ ಇಂಥ ಹಾಡುಗಳ ಸುರಿಮಳೆಯೇ ನಡೀತಾ ಇತ್ತು
ಆದರೆ ದಸರಾ ಹಬ್ಬದ ಒಂದು ದಿವಸ ಈ ಒಂದು ಆಚರಣೆ ಬೇಗ ನೆ ಮುಗಿತಾ ಇತ್ತು ಏಕೆಂದರೆ ದಸರಾ ಹಬ್ಬದ ದಿನ ಮನೆಯ ಗಂಡು ಮಕ್ಕಳು ಹೊಸ ಬಟ್ಟೆಯನ್ನು ಉಟ್ಟುಕೊಂಡು ಶಿಲಂಗ ಕದಿಯುವಂತಹ ಒಂದು ಸಂಪ್ರದಾಯ, ಅಲ್ಲಿಂದ ಅವರು ಮನೆಗೆ ಬರುವಷ್ಟರಲ್ಲಿ ಗೋಡೆಯ ಮೇಲೆ ಬರೆದಂತಹ ಚಿತ್ರವನ್ನು ಅಳಿಸಿ ಹಾಕುತ್ತಿದ್ದೆವು ಅಂದರೆ ಬೇಗ ಪೂಜೆ ಮಾಡಿ ಬೇಗ ಹಾಡಿ ಮುಗಿಸುತ್ತಿದ್ದೆವು. ಹೀಗೆ ಈ ರೀತಿಯಾದ ಈ ಹಬ್ಬವನ್ನು ಆಚರಿಸಿ ಕೊನೆಗೆ ಆರತಿ ಪದ ಹಾಡುತ್ತಿದ್ದೆವು.
ಒಂದು ಎಣ್ಣೆ ತಂದು
ಒಂದು ಬತ್ತಿ ಮಾಡಿ
ಕರನಾಳ ಕೊಟ್ಯಾಗ
ಮಂಗಲ ಪೆಟ್ಯಾಗ
ರಾಯೆ ರಾಡ ರಡ ಬಿದ್ಯಾಗ
ಚಟ್ಟನದಾಗ ಪಟ್ಟಣ ದಾಗ
ಗೌರಿ ಕಂಡೆನೆ ಶೀಗಿ ಬಂಧನವೆ
ಆರ್ತಿ ಪದದಿಂದ ಮುಕ್ತಾಯ ಮಾಡುತ್ತಿದ್ದೇವೆ.
ಇಂತಹ ಆಚರಣೆಗಳು ಇತ್ತೀಚಿನ ದಿನಗಳಲ್ಲಿ ಬಹಳ ಕಡಿಮೆಯಾಗುತ್ತಿವೆ
ಆದರೆ ನಾವು ನಮ್ಮ ಮಕ್ಕಳಿಗೆ ಇಂತಹ ಆಚರಣೆಗಳನ್ನು ತೋರಿಸಿಕೊಡಬೇಕು. ಮತ್ತು ಈ ಹಬ್ಬದ ಆಚರಣೆಯ ಕುರಿತು ಮಕ್ಕಳಲ್ಲಿ ಜಾಗೃತಿಯನ್ನು ಮೂಡಿಸಬೇಕು
ಇಂತಹ ಆಚರಣೆಗಳು ಇನ್ನೂ ಹೆಚ್ಚು ಜನರು ತೆಗೆದುಕೊಂಡು ಹೆಚ್ಚು ಜನರು ಆಚರಿಸಲಿ ಎಂದು ಶುಭ ಹಾರೈಸುತ್ತೇನೆ
ಹೀಗೆ ಸತತವಾಗಿ ಏಳು ದಿನ ಆಚರಿಸಿ, ಕೊನೆಗೆ ಹುಣ್ಣಿಮೆಯ ದಿವಸ ದಿನಾಲು ಚಿತ್ರದ ಬಿಡಿಸಿದಾಗ ಗೋಡೆಯ ಮೇಲೆ ಸುಣ್ಣದಿಂದ ಸಾರಸಿ. ಅದಕ್ಕೆ ಚಾಜದ ಬಣ್ಣದಿಂದ ಅಲಂಕರಿಸಿ ಸಗಣಿಯಿಂದ ಬರೆದಂತಹ 7 ದಿನದ ಚಿತ್ರಗಳು ಆ ಗೋಡೆಯ ಮೇಲೆ ವಿವಿಧ ಬಣ್ಣಗಳಿಂದ ಚಿತ್ರ ಬಿಡಿಸಿ ಕೊನೆಯ ದಿನ ಅದಕ್ಕೆ ಹೋಳಿಗೆಯ ಪ್ರಸಾದವನ್ನು ಮಾಡಿ ಬೆಳಗ್ಗೆ ಪೂಜೆ ಮಾಡಿ ಪ್ರಸಾದ ತೋರುತ್ತಿದೆವು. ಹೂವಿನ ಹಾರ ಹಾಕಿ ಪೂಜೆ ಮಾಡಿ ಅವತ್ತಿನ ರಾತ್ರಿ ದಿನದ ರಾತ್ರಿಯಾ ಕಿಂತಲೂ ಹೆಚ್ಚು ಸಮಯ ಕುಳಿತು ಎಲ್ಲಾತರದ ಹಾಡುಗಳನ್ನು ಹಾಡುತ್ತಿದ್ದರು ಕೊನೆಗೆ ಮತ್ತೆ ಒಂದು ವರ್ಷದ ಬಳಿಕ ಬಾರಿ ನಮ್ಮ ಗೌರಮ್ಮ ಗಂಗೆ ಗೌರಮ್ಮನನ್ನು ವಿದಾಯದ ಮಾಡುತ್ತಿದ್ದೇವೆ
ಆದರೆ ಅಂತಹ ಅಣ್ಣ ಕೊಡು
ತೊಗರಿ ಅಂತಹ ತಮ್ಮ ಕೊಡು ಇಂದು ಕೂಡ ನಾವು ಹೇಳುತ್ತಿದ್ದೆವು
ಇಂತಹ ವಿಶಿಷ್ಟ ವಾದಂತಹ ಸಂಪ್ರದಾಯ ಶೀಗಿಹುಣ್ಣಿಮೆ ಇಂದಿಗೂ ನಾವು ಬಹಳ ಸಂತೋಷದಿಂದ ಮತ್ತು ವಿಜ್ರಂಭಣೆಯಿಂದ ನಾನು ನನ್ನ ಮಕ್ಕಳೊಂದಿಗೆ ಆಚರಿಸುತ್ತೇವೆ.
ಸ್ವರೂಪ ಎಸ್ ನಾಗೂರೆ