ನಾವು ಕಂಡ ಶ್ರೇಷ್ಠ ಸಂತ
ಕಲಿಯುಗದ
ಜ್ಞಾನಸ್ವರೂಪಿ,
ಸರಳ ಸಜ್ಜನಿಕೆಯ
ದಿವ್ಯರೂಪಿ
ಇವರೇ
ಶ್ರೀ ಸಿದ್ದೇಶ್ವರ ಸ್ವಾಮಿಗಳು.
ಶ್ವೇತಾಂಬರ ಶುಭ್ರ ಸುಲೋಚನ
ಜೇಬಿಲ್ಲದ ಜುಬ್ಬಾದಾರಿ
ಕಳವಿರದ ಜ್ಞಾನದ ತಿಜೋರಿ !
ಹಸಿದವರಿಗೆ ಅನ್ನ ನೀರು ನೀಡಿದ ಪರಮ ದಾಸೋಹಿ…
ಬಡವರ ಬದುಕಿನ ಬೇಗೆಯರಿತ
ಆಪ್ತ ಬಂಧು
ನೊಂದ ಮನಸ್ಸುಗಳಿಗೆ ಸಾಂತ್ವನ ನೀಡಿದ ಕರುಣಾಮಯಿ
, ಪ್ರೀತಿಯ ವಾತ್ಸಲ್ಯ ಹಂಚಿದ ಮಮತಾಮಯಿ ಮೂರ್ತಿ…
ಶಿಕ್ಷಣದ ಸಂಜೀವಿನಿ
ನೀಡಿದ ಧನ್ವಂತರಿ
ಇವರೇ
ನಾವು ಕಂಡ ನಡೆದಾಡುವ ದೇವರು
ಶ್ರೀ ಸಿದ್ದೇಶ್ವರ ಸ್ವಾಮಿಗಳು…
ಸುತ್ತಲ ಜೀವಸಂಕುಲಕೆ
ಲೇಸು ಬಯಸಿದ ಜೀವದಾನಿ
ಸರಳ ಮಾತಿನ ಅವಧಾನಿ..
ಜನ ಮನ ಗೆದ್ದ
ಅನುಭಾವದ ತಪೋನಿಧಿ
ಪ್ರಕೃತಿಯ ಮಡಿಲೇ
ಶ್ರೀಗಳ ಸನ್ನಿಧಿ..
ಸಮತೆ ಮಮತೆಗಳ ಕ್ರಾಂತಿಯ ಹರಿಕಾರ
ಪ್ರತಿ ಮನೆ ಮನದಲ್ಲೂ
ಶ್ರೀ ಸಿದ್ದೇಶ್ವರ ಸ್ವಾಮಿಗಳ ಹೆಸರಿನ ಝೇಂಕಾರ
ಹಿತ ಮಿತ ಮೃದು ಭಾಷಿಕ ವಚನಕಾರ
ಚತುರ್ಭಾಷೆಗಳ ಬಲ್ಲ
ಪ್ರಬುದ್ಧ… ಇದ್ದ ಇವರೊಳೆಗೆ ಆ ಬುದ್ಧ !
ಇವರೇ
ನಮ್ಮ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮಿಗಳು
ಸ್ವರೂಪರಾಣಿ, ಎಸ್, ನಾಗೂರೆ