Lockdown ಮುಗಿದ ನಂತರ ಜನಜೀವನ ಸಾಮಾನ್ಯವಾಗಿರುವುದೆ ಅಥವಾ ಇನ್ನೂ ಕೊರೋನ ದ ಭಯದಲ್ಲಿ ಜೀವಿಸಬೇಕ ಇದು ನಮ್ಮ ನಿಮ್ಮೆಲ್ಲರಲಿ ಇರುವ ಒಂದು ದೊಡ್ಡ ಪ್ರಶ್ನಾರ್ಥಕ ಚಿನ್ಹೆ ,ಯಾಕ ಅಂತೀರಾ ಈಗಿನ ಕರೋನ ಸೊಂಕಿತರ ಪರಿಸ್ಥಿತಿ ನೋಡಿದರೆ ಲಾಕಡೌನ್ ತೆಗೆದರೂ ಕೂಡ ಬಹಳಷ್ಟು ಯೆಚ್ಚರಿಕೆಯಿಂದ ಇನ್ನೂ ಹೇಳಬೇಕೆಂದರೆ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡು ಪ್ರತಿಯೊಂದು ಹೆಜ್ಜೆಯನ್ನು ಇಡಬೇಕಾಗುತ್ತದೆ ಯಾಕೆಂದರೆ ಅದು ಸಂಪೂರ್ಣವಾಗಿ ತೊರೆದು ಹೋಗಬೇಕೆಂದರೆ ಹಲವಾರು ತಿಂಗಳುಗಳ ಅವಧಿ ತೆಗೆದುಕೊಳ್ಳುತ್ತದೆ.
ಕರೋನದಂತಹ ವೈರಾಣುಗಳು ಇಷ್ಟೊಂದು ಬೇಗ ನಶಿಷಿ ಹೋಗಲಾರವು ಆದರೂ ಲಾ ಕಡೌನ್ ನಿಧಾನವಾಗಿ ಸಡಿಲಿಸಿ ಕೆಲಸ ಕಾರ್ಯಗಳನ್ನು ಆರಂಭ ಮಾಡಲೇಬೇಕು ಇಲ್ಲದಿದ್ದರೆ ಆರ್ಥಿಕ ಅಸಮತೋಲನ ಉಂಟಾಗುವ ಸಾಧ್ಯತೆ ಇರುತ್ತದೆ.
ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಪ್ರಾಣಹಾನಿಗಳು ಮತ್ತು ಹಲವಾರು ರೀತಿಯ ಆರ್ಥಿಕ ನಷ್ಟಗಳು ಪ್ರತಿಯೊಂದು ಕ್ಷೇತ್ರದಲ್ಲಿ ಉಂಟಾಗುತ್ತಿವೆ ,ಎಲ್ಲರ ಹೊಟ್ಟೆ ತುಂಬುವ ರೈತನಿಗೆ ಅತಿಯಾದ ಸಂಕಷ್ಟಗಳು ಎದುರಾಗಿವೆ ಮತ್ತು ಎದುರಾಗುತ್ತಲೇ ಇವೆ ಇಲ್ಲಿ ನಾನು ಹೇಳಲು ಬಯಸುವ ಮಾತೇನೆಂದರೆ ಮುಂದಿನ ದಿನಗಳಲ್ಲಿ ಅಂದರೆ ಲಾಕ್ಡೌನನ ನಂತರ ರೈತರಿಗೆ ಯಾವುದೇ ಅನ್ಯಾಯವಾಗದಂತೆ ಎಲ್ಲರೂ ನಡೆದುಕೊಳ್ಳಬೇಕು ಅದು ಏನೆಂದರೆ ರೈತರಿಗೆ ಯಾವುದೇ ಮಧ್ಯವರ್ತಿಗಳ ಕಾ ಟವಿಲ್ಲದೆ ನೇರವಾದ ಮಾರುಕಟ್ಟೆಯ ವ್ಯವಸ್ಥೆ ಮಾಡಿಕೊಡಬೇಕು
ಇದು ಸರ್ಕಾರದ ಕೆಲಸವಾದರೂ ಜನಸಾಮಾನ್ಯರು ಇದಕ್ಕೆ ಬೆಂಬಲ ಕೊಡಲೇಬೇಕು ಇಲ್ಲವಾದರೆ ರೈತರ ಆತ್ಮಹತ್ಯೆಗಳ ಸಂಖ್ಯೆ ಹೆಚ್ಚುತ್ತದೆ ಮತ್ತು ಲಾಕ್ಡೌನ್ನಲ್ಲಿರುವ ಹಾಗೆ ಹಣ್ಣು ,ತರಕಾರಿ ,ದವಸ ಧಾನ್ಯಗಳು ಎಲ್ಲವೂ ಹಾಳಾಗುತ್ತವೆ ,ಮಧ್ಯವರ್ತಿಗಳ ಕಾ ಟ ದಿಂದಾಗಿ ರೈತರು ತಾವು ಬೆಳೆದ ಬೆಳೆಗೆ ಸೂಕ್ತವಾದ ಹಣ ಸಿಗಲಿಲ್ಲವಾದರೆ
ತಾವು ಬೆಳೆದ ಬೆಳೆಗಳನ್ನು ತಾವೇ ಹಾಳುಗೆಡವುತ್ತಾರೆ ,ಆಗ ನಮ್ಮ ಜನರಿಗೆ ಬೇಕಾಗುವಷ್ಟು ಆಹಾರ ಸಿಗದೆ ಪರದಾಡುವಂತಹ ಪರಿಸ್ಥಿತಿ ಉಂಟಾಗುತ್ತದೆ ಇದು ಒಂದು ಯೋಚನೆ ಮಾಡಬೇಕಾದ ವಿಷಯ ಇದು ನಿಜವಾಗಿ ಹೇಳಬೇಕೆಂದರೆ ಕ ರೋನ ದ ಹಾಗೆ ಇದು ಕೂಡ ಒಂದು ರಾಷ್ಟ್ರೀಯ ವಿಪತ್ತಾಗಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗಬಹುದು .
ಒಂದು ಮಾತು ಯಾವಾಗಲೂ ನನ್ನ ಮನಸ್ಸಿನಲ್ಲಿ ಬರುತ್ತೆ ಅದೇನೆಂದರೆ ಎಷ್ಟೇ ಶ್ರೀಮಂತ ವ್ಯಕ್ತಿ ಇರಲಿ ದುಡ್ಡು ಕೊಟ್ರು ಅನ್ನ ಸಿಗಲ್ಲ ಯಾಕೆಂದರೆ ದುಡ್ಡನ್ನು ಮುದ್ರಿಸಲು ಸಾಧ್ಯ ಆದರೆ ಅನ್ನವನ್ನು ಮುದ್ರಿಸಲು ಸಾಧ್ಯವೇ ,ಆದ್ದರಿಂದ ಲಾಕ್ದೌನ್ ಮುಗಿದ ನಂತರ ನೇರವಾಗಿ ರೈತರಿಂದಲೇ ಎಲ್ಲವನ್ನೂ ಖರೀದಿಸುವ ನಿಟ್ಟಿನಲ್ಲಿ ನಾವುಗಳು ಅಂದರೆ ಭಾರತ ದೇಶದ ಪ್ರಜೆಗಳು ಹೋರಾಡಬೇಕು ನೆನಪಿಡಿ ರೈತರ ಹಕ್ಕುಗಳಿಗಾಗಿ ನಾವು ಹೋರಾಡಿದರೆ
ನಮಗೆ ಅನ್ನ ಇಲ್ಲದಿದ್ದರೆ ಎಷ್ಟೇ ದುಡ್ಡು ಕೊಟ್ಟರೂ ತುತ್ತು ಅನ್ನಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಬಹುದು ಹುಷಾರ್
ಅದೇ ರೀತಿ ಇನ್ನೂ ಬೇರೆ ಬೇರೆ ರೀತಿಯಾದ ಯಾವ ಯಾವ ಕೆಲಸಗಳನ್ನು ನಾವು ಲೋಕ್ಡೌನ್ ನಂತರ ಮಾಡಬಹುದು ಅವುಗಳೆಂದರೆ ನಮ್ಮ ಊರು ನಮ್ಮ ಜಿಲ್ಲೆಯಲ್ಲಿ ಸಿಗುವಂತಹ ವಸ್ತುಗಳನ್ನು ಬೇರೆ ಕಡೆಯಿಂದ ಖರೀದಿಸಬಾರದು ಆದಷ್ಟೂ ನಮ್ಮಲ್ಲಿರುವ ಅಂಗಡಿಗಳಲ್ಲಿ ಅಂದರೆ ಲೋಕಲ್ ಮಾರುಕಟ್ಟೆ ಯಲ್ಲಿ ಸಿಗುವಂತಹ ವಸ್ತುಗಳನ್ನು ಬೇರೆ ಕಡೆಯಿಂದ ತರಿಸಿಕೊಳ್ಳಬಾರದು ಚಿಕ್ಕ ಚಿಕ್ಕ ವ್ಯಾಪಾರಸ್ತರಿಗೆ ಅನುಕೂಲವಾಗುವಂತೆ ಅವರಲ್ಲಿರುವ ವಸ್ತುಗಳನ್ನೆ ಖರೀದಿಸಬೇಕು ಇತ್ತೀಚಿಗೆ ಬೇರೆ ಬೇರೆ ರೀತಿಯ ಆನ್ಲೈನ್ ಮಾರುಕಟ್ಟೆಗಳು ಅತ್ಯಂತ ಪ್ರಚಲಿತದಲ್ಲಿವೆ ಇವುಗಳು ವಿದೇಶದ ವಸ್ತುಗಳನ್ನು ಆನ್ಲೈನ್ ಮೂಲಕ ಮಾರುವಂತಹವು ಆದಷ್ಟೂ ಅಂತಹ ವಸ್ತುಗಳ ಬಳಕೆಯನ್ನು ಕಡಿಮೆ ಮಾಡಿದರೆ ನಮ್ಮ ನಮ್ಮ ಊರಿನ ಚಿಕ್ಕ ಚಿಕ್ಕ ವ್ಯಾಪಾರಸ್ತರಿಗೆ ನಾವು ಸಹಾಯ ಮಾಡಿದ ಹಾಗಾಗುತ್ತದೆ .
ಕೊನೇಲಿ ಒಂದು ಮಾತು ಅದೇನೆಂದರೆ ಲಾಕ್ಡೋನ ಮುಗಿದ ನಂತರ ಆದಷ್ಟು ನಮ್ಮ ಊರು ನಮ್ಮ ನಾಡು ನಮ್ಮ ದೇಶವನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು ಹಾಗೆ ಮಾಡಿದಾಗ ಮಾತ್ರ ಎಂತಹ ವಿಪತ್ತು ಬಂದರೂ ನಾವೆಲ್ಲರೂ ಒಂದಾಗಿ ಎದುರಿಸಲು ಸಾಧ್ಯವಾಗಬಹುದು.
ಹಾಗೇನೇ ಆರೋಗ್ಯದ ದೃಷ್ಟಿಯಿಂದ ಹೇಳಬೇಕೆಂದರೆ ನಮ್ಮ ಪ್ರಾಚೀನ ಭಾರತೀಯ ಪದ್ಧತಿಗಳನ್ನು ಅಳವಡಿಸಿಕೊಂಡು ಜೀವನ ಸಾಗಿಸಬೇಕು ಈಗಾಗಲೇ ಕೊರೋನದಿಂದಾಗಿ ಎಲ್ಲರೂ ಭಾರತೀಯ ಪದ್ಧತಿಗಳನ್ನು ಅನುಸರಿಸುತ್ತಿದ್ದಾರೆ. ಇದೆ ರೀತಿ ಮುಂದುವರಿಸಿಕೊಂಡು ಹೋಗಬೇಕು ಆಗ ಮಾತ್ರವೇ ಯಾವುದೇ ರೀತಿಯ ವೈರಾಣುವಿನಿಂದ ನಮಗೆ ನಾವು ರಕ್ಷಣೆ ಮಾಡಿಕೊಳ್ಳಬಹುದು
ಇಲ್ಲಿ ಇನ್ನೊಂದು ಮುಖ್ಯವಾದ ಒಂದು ಮಾತನ್ನು ಹೇಳಲೇಬೇಕು ಇಲ್ಲದೆ ಇದ್ರೆ ಈ ಲೇಖನ ಅಪೂರ್ಣ ಯಾಕೆ ಗೊತ್ತೆ. ಮೇಲೆ ನಾನು ಲಾಕ್ಡೌನ್ನ ಮುಗಿದ ನಂತರ ಏನೇನು ಮಾಡಬೇಕು ಅಂತ ಹೇಳ್ದೆ ಆದರೆ ಲಾಕಡೌನ್ನ ನಲ್ಲಿ ಇದ್ದಾಗ ಮನೆಯಲ್ಲಿ ಯಾವ ರೀತಿ ನಮ್ಮನ್ನು ನಾವು ಗಟ್ಟಿಗೊಳಿಸುವುದು ಅಂದರೆ ನಮ್ಮ ದೇಹವನ್ನು ಒಳಗಿಂದ ಮತ್ತು ಹೊರಗಿನಿಂದ ಯಾವ ರೀತಿಯಾಗಿ ರಕ್ಷಣೆಯನ್ನು ಮಾಡಬೇಕು
ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಯಾವ ರೀತಿ ಹೆಚ್ಚಿಸಿಕೊಳ್ಳಬೇಕು ಅಂತ ಹೇಳ್ತೀನಿ
ಬಹಳಷ್ಟು ಜನರಿಗೆ ರೋಗನಿರೋಧಕ ಶಕ್ತಿ ಅಂದರೆ ಏನು ಅಂತಾನೆ ಗೊತ್ತಿರಲ್ಲ ,ಸಾಮಾನ್ಯವಾಗಿ. ನಾವು ಎಲ್ಲರ ಮನೆಯಲ್ಲೂ ಒಂದು ಮಾತು ಕೆಳಪಡುತ್ತೇವೆ ಅದೇನೆಂದರೆ ಹಣ್ಣುಗಳು , ಒಣ ಹಣ್ಣು ಮತ್ತು ಮೊಳಕೆಭರಿತ ಕಾಳುಗಳು ಜಾಸ್ತಿ ತಿನ್ನೋದಿಲ್ಲ ಯಾವಾಗಲಾದರೂ ತಿಂತಾರೆ ಅಂತ ಅದನ್ನೆಲ್ಲ ತಿನ್ನೋಕೆ ಟೈಂ ಇಲ್ಲ ಹೊಟ್ಟೆ ತುಂಬಾ ಊಟ ಮಾಡ್ತೀವಿ ಅಷ್ಟೆ ಸಾಕು ಅಂತ ಹೇಳ್ತಾರೆ ,ಆದರೆ ಅದು ತಪ್ಪು ತಿಳುವಳಿಕೆ. ನಮ್ಮ ದೈನಂದಿನ ಆಹಾರದ ಜೊತೆಗೆ ದಿನದ ಒಂದು. ಸಮಯ ನಾವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪದಾರ್ಥಗಳನ್ನು ತಿನ್ನಲೇಬೇಕು ,ಇಲ್ಲದಿದ್ದರೆ ಕೊರೋನಾ ದಂತಹ ವೈರಾಣುಗಳು ಅತಿ ವೇಗವಾಗಿ ದೇಹದೊಳಗೆ ಪ್ರವೇಶ ಮಾಡಿ ಮನುಷ್ಯನ ದೇಹವನ್ನು ರೋಗಗ್ರಸ್ತವನ್ನಾಗಿ ಮಾಡುತ್ತವೆ ,
ಅದಕ್ಕೆ ನಾವು ಯಾವಾಗಲೂ ಅಂತಹ ಆಹಾರ ಪದ್ಧತಿಯನ್ನು ದಿನ ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಹಾಗಿದ್ದಾಗ ಮಾತ್ರ ನಾವು ನಮ್ಮ ದೇಹವನ್ನು ಕೆಟ್ಟ ವೈರಾಣುಗಳಿಂದ ರಕ್ಷಿಸಿಕೊಳ್ಳಲು ಸಾಧ್ಯ ,ಆದರೆ ಈಗ ವೈರಾಣು ಬಂದಿದೆ ಈಗ ನಾನು ರೋಗನಿರೋಧಕ ಶಕ್ತಿ ಅಂದರೆ immunity ಯನ್ನು ಹೆಚ್ಚಿಸಿಕೊಳ್ಳುತ್ತೇನೆ ಅಂದರೆ ಅದುಸಾಧ್ಯವಿಲ್ಲ ಅದಕ್ಕೆ ಕ್ರಮೇಣವಾಗಿ ನಾವುಗಳು ಶಕ್ತಿಯುತವಾದ ಅಂದರೆ healthy food habit ನ್ನೂ ಅಭ್ಯಾಸ ಮಾಡಿಕೊಳ್ಳಬೇಕು ಆಗ ನಾವು ಎಂತಹುದೇ ವೈರಾಣು ಇರಲಿ ಅದರ ವಿರುದ್ದ ಹೊರಾಡಬಲ್ಲ ಸದೃಢತೆ ಹೊಂದಬಹುದು ,ಮತ್ತು ಕೊರೋನ್ ದಂತಹ ಮಹಾಮಾರಿಯನ್ನು ನಮ್ಮ ಹಿತಕ್ಕಾಗಿ ದೇಶದ ಹಿತಕ್ಕಾಗಿ ಮತ್ತು ವಿಶ್ವದ ಹಿತಕ್ಕಾಗಿ ಹೊಡೆದು ಓಡಿಸುವ ಕಾರ್ಯವನ್ನು ಮಾಡಲು ತಯಾರಾಗಿರಬಹುದು
ಹಾಗೇನೇ ರೋಗನಿರೋಧಕ ಎನ್ನುವ ಮಾತು ಬಂದಾಗ ಯೋಗ ಮತ್ತು ವ್ಯಾಯಾಮದ ಬಗ್ಗೆಯೂ ಮಾತನಾಡಲೇಬೇಕು ಯಾಕೆ ಅಂತೀರಾ ಯಾವುದೇ ಒಂದು ಆಹಾರವನ್ನು ತಿಂದಾಗ ಅದು ಜೀರ್ಣವಾಗುವ ಹಾಗೆ ನಾವು ಕೆಲಸಗಳನ್ನು ಮಾಡಬೇಕಾಗುತ್ತದೆ
ಬರಿ ತಿನ್ನುತ್ತಾ ಹೋದ್ರೆ ,ಅದು ಕೇವಲ ಕೊಬ್ಬಿನರೂಪದಲ್ಲಿ ಶೇಖರಣೆ ಯಾಗಿ ,ದೇಹದ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ ಮತ್ತು. ದೇಹದ ಗಾತ್ರ ಹೆಚ್ಚುತ್ತಾ ಹೋಗಿ ಬೇರೆ ಬೇರೆ ರೀತಿಯ ರೋಗಗಳು ದೇಹವನ್ನು ಆಕ್ರಮಿಸಿಕೊಳ್ಳುತ್ತದೆ ,ಅದಕ್ಕೋಸ್ಕರ ಪ್ರತಿಯೊಬ್ಬರೂ ತಮ್ಮ ವಯಸ್ಸು ಮತ್ತು ದೈಹಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಬೇಕಿದ್ದರೆ ಡಾಕ್ಟರ ಸಲಹೆಯನ್ನು ಪಡೆದುಕೊಂಡು ಯೋಗ ಮತ್ತು ವ್ಯಾಯಾಮಗಳನ್ನು ಮಾಡತಕ್ಕದ್ದು ಹಾಗೇನೇ lockdowm ಮುಗಿದ ತಕ್ಷಣ ಮತ್ತೆ ನೀವು ಮೊದಲಿನ ಹಾಗೆ ಓಡಾಡುವ ಹಾಗಿಲ್ಲ ಯಾಕೆಂದರೆ ವೈರಾಣುಗಳು ಎಲ್ಲಾ ಕಡೆ ಇರುತ್ತವೆ ಅದಕ್ಕಾಗಿ ನೀವುಗಳು ಈಗಿರುವ ತರಹ ಅಂದ್ರೆ ಹೊರಗಡೆ ಹೋದಾಗ ಮಾಸ್ಕ್ ಹಾಕಿಕೊಂಡು ಹೋಗಿ , ಆದಷ್ಟು ಸೋಶಿಯಲ್ distancing ಮಾಡಬೇಕು , ಹೊರಗಡೆಯಿಂದ ಬಂದ ತಕ್ಷಣ ಕೈ ಕಾಲುಗಳನ್ನು ಸ್ವಚ್ವವಾಗಿ ತೊಳೆದುಕೊಳ್ಳಬೇಕು ಚಿಕ್ಕ ಮಕ್ಕಳು ಮತ್ತು ಆಗತಾನೆ ಹುಟ್ಟಿದ ಮಾಕ್ಕಳನ್ನು sanitizer ಹಚ್ಚಿಕೊಳ್ಳದೆ ಮುಟ್ಟಬಾರದು ,ಹಣ್ಣು ತರಕಾರಿಗಳನ್ನು ಉಗುರು ಬಿಸಿ ನೀರಲ್ಲಿ ಉಪ್ಪು ಅಥವಾ ತಿನ್ನುವ Soda. ಹಾಕಿ ತೊಳೆದುಕೊಳ್ಳಬೇಕು ಹೀಗೆ ಇನ್ನೂ ಹತ್ತು ಹಲವಾರು ಕ್ರಮಗಳನ್ನು ಅನುಸರಿಸಿ ಆದಷ್ಟು ನಮ್ಮನ್ನು ನಾವು ಕಾಪಾಡಿಕೊಳ್ಳುವ
ಪ್ರಯತ್ನ ಮಾಡಬೇಕು ನಮ್ಮ ಜೀವನ ಶೈಲಿಯನ್ನು ಚನ್ನಾಗಿ ನಡೆಸಿಕೊಂಡು ಹೋಗಬೇಕು ಇಲ್ಲದಿದ್ದರೆ ಆಪತ್ತು ತಪ್ಪಿದ್ದಲ್ಲ .
After the lock down is over, be a part of digital India , as u all can see most of d developed cities have started using Technology to make their daily life transactions. That era is gone when u had to stand in long queues for Banking, the era is digital ,so make yourself DIGITAL and make use of today’s Technology, make online transactions for shopping, use UPI apps to deposit ,send or withdraw money, use digital cash to pay for daily life products and services, its like u can pay anyone any time with jus one click without havng a single hard cash on hand , it not only makes ur life easy, but it makes it fast too! just within few seconds you can transact digital money to anyone in the country! see how easy it makes our life ,be a part of development of the city, be a part of digital India !
ಧನ್ಯವಾದಗಳು
– ರೂಪಾ ಪಾಟಿಲ್