ಅಮ್ಮ

/ಅಮ್ಮ ಅಂದ್ರೆ ಯಾರಿಗೆ  ಇಷ್ಟವಿಲ್ಲಹೇಳಿ?,  ಅಮ್ಮ ಎಂದರೆ ಪ್ರತಿಯೊಬ್ಬರಿಗೂ ಇಷ್ಟ/

 

ಅಮ್ಮ ಎಂದ ಕೂಡಲೇ ಮನಸ್ಸಿಗೆ ಆನಂದ ಒಂದು ತರಹದ ಆಹ್ಲಾದ . ಅಮ್ಮ ಎಂದರೆ ಪ್ರೀತಿ, ವಾತ್ಸಲ್ಯ, ಕರುಣೆ, ಮಮತೆ, ಸಹನೆ,ದಯೆ, ತ್ಯಾಗಮಯಿ ಹೀಗೆ ಹಲವು ರೂಪಗಳು ಅಮ್ಮ ಎನ್ನುವ ಶಬ್ದದಲ್ಲಿ ಅಡಗಿದೆ.
ನಮ್ಮಲ್ಲಿ ಅಂದರೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಪ್ರಾಚೀನ ಕಾಲದಿಂದಲೂ ತಾಯಿಗೆ ಬಹಳ ಪೂಜ್ಯನೀಯ ಭಾವನೆಯಿಂದ ಕಾಣುವುದು. “ಮಾತೃದೇವೋಭವ”ತಾಯಿಗೆ ದೇವರ ಸ್ಥಾನವನ್ನು ಕೊಟ್ಟಿದ್ದೇವೆ ಇವಳನ್ನು ಪೂಜ್ಯನೀಯ ಭಾವದಿಂದ ನೋಡುತ್ತೇವೆ

ಅಮ್ಮ ಇಡೀ ಕುಟುಂಬದ ಜವಾಬ್ದಾರಿಯನ್ನು ಹೊರಿಸಿಕೊಂಡು ಎಲ್ಲರಿಗೂ ಸಕಾರ ಮೂರ್ತಿಯಾಗಿ ಇರುವಳು ನಮ್ಮಮ್ಮ.
ಪ್ರತಿಯೊಂದು ಹೆಣ್ಣು ಮಗಳಿಗೆ ಮದುವೆಯಾದ ಮೇಲೆ ತಾಯಿ ಆಗುವಂತಹ ಕ್ಷಣ ಬಹಳ ಅದ್ಭುತ .ಆ ಒಂದು ಕ್ಷಣ ಹೆಣ್ಣು ಮಗಳಿಗೆ ಜೀವನದ ಸಾರ್ಥಕ ಎಂದೆನಿಸುತ್ತದೆ
ಹೆಣ್ಣುಮಗಳಿಗೆ ನಾನು ಮೊದಲ ಬಾರಿಗೆ ತಾಯಿಯಾಗುತ್ತಿದ್ದೇನೆ ಎನ್ನುವ ಸಂತೋಷದಲ್ಲಿ ಅವಳು ಎಷ್ಟೇ ಕಷ್ಟ ನೋವುಗಳು ಆ ಸಂತೋಷದಲ್ಲಿಮರೆಮಾಚಿ ಹೋಗುತ್ತವೆ. ಕೈ ತಾಯಿಯಾಗುವ ಮೊದಲ ತಿಂಗಳಿನಿಂದ ಒಂಬತ್ತು ತಿಂಗಳವರೆಗೆ ಅವಳಿಗೆ ವಾಂತಿ. ನಿದ್ದೆ ಬಾರದಿರದು. ಊಟ ಸೇರದಿರುವುದು. ತಲೆಸುತ್ತು. ಹೀಗೆ ಒಂದಲ್ಲ ಎರಡಲ್ಲ ಅನೇಕರೀತಿಯ ನೋವುಗಳು ಅವಳು ಪ್ರೀತಿಯಿಂದ ಸೇರಿಸಿಕೊಳ್ಳುವ ಮತ್ತೆಆ ಮಗು ಗರ್ಭದಲ್ಲಿಯೇ ಇರುವಾಗಲೇ ತಾಯಿಯನ್ನು ಒದೆಯುವುದು ಇವು ಎಲ್ಲಾ ಅವಳಿಗೆ ಆನಂದಬಾಷ್ಪ ಅವಳ ಕಣ್ಣಲ್ಲಿ ಕಾಣುತ್ತೇವೆ.
ಒಂಬತ್ತು ತಿಂಗಳ ನಂತರ ಈ ಒಂಬತ್ತು ತಿಂಗಳಲ್ಲಿ ಮತ್ತು ಕೊನೆಯ ಕ್ಷಣದಲ್ಲಿ ಅನುಭವಿಸಿದಂತೆ ಆ ನೋವು ಯಾತನೆ ಮಗುವಿನ ಮುಖ ನೋಡಿದ ಕೂಡಲೇ ಅವಳ ಕಣ್ಣಲ್ಲಿ ಆನಂದ ಬಾಷ್ಪ ಸುರಿಮಳೆ ಅವಳ ಆನಂದ ಸಾಗರದಷ್ಟು ಆಳ ಆಕಾಶದಷ್ಟು ಆಗಲ . ಅಮ್ಮನ ಮಡಿಲಲ್ಲಿ ಮಗು ಬಂದಕೂಡಲೇ ಮಗುವಿಗೂ ಕೂಡ ಅದೇ ಅದೇ ಅಂದರೆ ಅಮ್ಮನ ಮಗುವಿಗೆ ಸ್ವರ್ಗದ ಸಂಪೋತ ಮಗುವಿಗೆ ತಾಯಿ ಹಾಲುಣಿಸುವಾಗ ಅದ್ಭುತ ಕ್ಷಣಗಳು ತಾಯಿಗೆ ಬಹಳ ಅದ್ಭುತ ಹೀಗೆ ತಾಯಿ-ಮಗುವಿನ ಜನ್ಮದಿಂದ ಹಿಡಿದು ಆ ಮಗು ದೊಡ್ಡದಾಗಿರವರೆಗೂ ಅದರ ಕಷ್ಟ ನೋವುಗಳೆಲ್ಲ ಅವಳು ಅನುಭವಿಸುವಳು
ಮಗು ಆಟವಾಡುವಾಗ ಎಲ್ಲಾದರೂ ಬಿದ್ದರೆ ಆ ಮಗುವಿನ ನೋವು ತಾಯಿಯಾಗುವುದು ಹೀಗೆ ತಾಯಿ ಕರುಣೆಯ ಮೂರ್ತಿಯಾಗಿ ವಾತ್ಸಲ್ಯಮಯಿ ತನ್ನ ಮಮತೆಯ ಕಡಲಲ್ಲಿ ಮಗುವನ್ನು ಸಂಪೂರ್ಣ ಜವಾಬ್ದಾರಿಯಿಂದ ಜೋಪಾನ ಮಾಡುವುದು ಅವಳೆನಮ್ಮ ಅಮ್ಮ. ಒಂದು ವೇಳೆ ಮಗು ತಪ್ಪು ದಾರಿ ಹಿಡಿದಿದೆ ಎಂದಾಗ ಆ ಮಗುವಿಗೆ ಸರಿಯಾದ ಮಾರ್ಗವನ್ನು ತೋರಿಸಿ ಬದುಕಿಗೆ ದಾರಿದೀಪ ವಾಗುವಳು .
ಹೀಗೆ ಅಮ್ಮ ಎನ್ನುವ ಎರಡಕ್ಷರದಲಿ ಅಡಗಿದೆ ಎಂದು. ಜಗತ್ತಿನಲ್ಲಿ ಪ್ರತಿಯೊಂದಕ್ಕೂ ಒಂದು ಬೆಲೆ ಇದೆ ಆದರೆ ಬೆಲೆಕಟ್ಟಲಾಗದ ಅಂದರೆ ಅಮ್ಮನ ಪ್ರೀತಿ. ಹೀಗೆ ಅಮ್ಮನ ಪ್ರೀತಿ ವಿಶಾಲ ಮುಗಿದಾಗಲ ಮನೋಭಾವನೆ ಹೊಂದಿರುತ್ತಾಳೆ ನಮ್ಮಮ್ಮ

ಅಮ್ಮ ಎಂದರೆ ಮಮತೆಯ ಕಡಲು
ಅಮ್ಮ ಎಂದರೆ ಪ್ರೀತಿಯ ಒಡಲು

ಅಮ್ಮ ಎಂದರೆ ಅಮೃತದ ಸವಿ

ಅಮ್ಮ ಎಂದರೆ ಜೇನಿನ ಸವಿ

ಅಮ್ಮ ಎಂದರೆ ಸಾಗರದಷ್ಟು ಅಗಲ
ಅಮ್ಮ ಎಂದರೆ ಆಕಾಶದಷ್ಟು ಅಗಲ

ಹೀಗೆ ಅಮ್ಮ ಎಂದರೆ ಪ್ರತಿಯೊಬ್ಬರಿಗೂ ಇಷ್ಟ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿ ವರ್ಷಕ್ಕೆ ಒಂದು ದಿವಸ ಎರಡರಂದು mother’s day ಆಚರಿಸುವ ಬದಲು ವರ್ಷದ 365 ದಿನಗಳ ಕಾಲ ನಾವು ನಮ್ಮ ಅಮ್ಮನನ್ನು ಪ್ರೀತಿಯಿಂದ ಮಮತೆಯಿಂದ ಅವಳನ್ನು ನಾವು ನೋಡಬೇಕು ಅವಳ ಕಷ್ಟ-ಸುಖ ನೋವು-ನಲಿವುಗಳನ್ನು ನಮ್ಮ ಜೊತೆ ಹಂಚಿಕೊಳ್ಳಲು ಮತ್ತು ಅವರ ಜೊತೆ ನಮ್ಮನ್ನು ನಾವು ಅವಳಿಗೆ ಸಮರ್ಪಿಸಿಕೊಳ್ಳಬೇಕು
ಅವಳಿಗಾಗಿ ಅವಳ ಇಷ್ಟದ ವಸ್ತು ತಿಂಡಿತಿನಿಸು ಒಡವೆ ಸೀರೆ ಚಿತ್ರಪಟ ಅವಳಿಗಾಗಿ ಕವನಗಳು ಅವಳಿಗಾಗಿ ಲೇಖನ ಗ್ರೀಟಿಂಗ್ಸ್ ಹೀಗೆ ಅವಳು ಯಾವದರಿಂದ ಸಂತೋಷ ಪಡುವಳು ಎಂಬುದನ್ನರಿತು ಕೊಂಡು ಅವಳ ಜೊತೆ ನಾವು ಕಾಲಕಳೆಯಬೇಕು

ಈ ರೀತಿಯಾಗಿ ನಮ್ಮ ಅಮ್ಮನ ಕುರಿತು ಕೆಲವು ಒಂದೆರಡು ಅನಿಸಿಕೆಗಳನ್ನು ನಾನು ಈ ಲೇಖನದ ಮುಖಾಂತರ ತಮ್ಮ ಎದುರಿಗೆ ಬಿಚ್ಚಿಟ್ಟು ಕೊಂಡಿದ್ದೇನೆ

—–ಸ್ವರೂಪ. ಎಸ್. ನಾಗುರ್