ಲಾಕ್ ಡೌನ್ ನಂತರ ಏನು ? ಹೇಗೆ? ಯಾವಾಗ ?
Lockdown. ಮುಗಿದ ನಂತರ ಜನಜೀವನ ಯಾವ ರೀತಿಯಲ್ಲಿ ಇರಬಹುದು ಎಂಬುದನ್ನು ನೆನೆಸಿಕೊಳ್ಳಲು ಕಷ್ಟವೆನಿಸುತ್ತದೆ ಏಕೆಂದರೆ ಅಷ್ಟೊಂದು ಭಯಂಕರವಾದ ವಾತಾವರಣ ಸೃಷ್ಟಿ ಮಾಡಿದೆ ಈ ಕೋರೋನ ಎಂಬ ಮಹಾಮಾರಿ ರೋಗ.
Lockdown ಆದಾಗ ನಾವೆಲ್ಲರೂ stay at home ಇದ್ದಾಗ ಎಲ್ಲರೂ ಒಟ್ಟಾಗಿ ಕುಟುಂಬದ ಎಲ್ಲಾ ಸದಸ್ಯರು ಮನೆಯಲ್ಲಿದ್ದು ಅನೇಕ ಮುಂಜಾಗೃತ ಕ್ರಮದಿಂದ ಎರಡು ಹೊತ್ತಿನ ಊಟ ನೆಮ್ಮದಿಯಿಂದ ಮಾಡುತ್ತಿದ್ದೆವು ಆದರೆ ನಂತರ ಎರಡು ಹೊತ್ತಿನ ಊಟ ಕೂಡ ನಾವು ಬಹಳ ಜಾಗೃತಿಯಿಂದ ಮತ್ತು ಪ್ರತಿಯೊಂದನ್ನು ನಾವು ಯೋಚನೆ ಮಾಡಿಯೇ ಸ್ವೀಕರಿಸಬೇಕಾಗುತ್ತದೆ ಅದೇ ರೀತಿ ಮನೆಯ ಹೊರಗೆ ಹೋದಾಗ ಅಂದರೆ ಆಫೀಸ್, ಸ್ಕೂಲ್, ಬ್ಯಾಂಕ್, ರಸ್ತೆ, ರೈಲು ಸಂಚಾರ ಮಾಡಬೇಕಾದರೂ ಬಹಳ ಎಚ್ಚರಿಕೆಯಿಂದ ಮತ್ತು ಮುಂಜಾಗ್ರತೆ ಕ್ರಮವನ್ನು ವಹಿಸಬೇಕಾಗುತ್ತದೆ
ಏಕೆಂದರೆ ಈ ಒಂದು ಕೋರೋನ ಎಂಬ ಮಹಾಮಾರಿ ರೋಗದ ತೀವ್ರತೆ ಇಷ್ಟು ಬೇಗ ಮುಗಿಯುವುದಿಲ್ಲ ಅದು ನಮ್ಮ ದೇಶದಿಂದ ಸಂಪೂರ್ಣವಾಗಿ ನಿವೃತ್ತಿ ಹೊಂದಿದೆ ಎಂದು ನಾವು ತಿಳಿದುಕೊಳ್ಳಬಾರದು. ಅಂದರೆ ಎಷ್ಟು? ದಿನ ಈ ತರಹದ ಮುಂಜಾಗ್ರತೆ ವಹಿಸಬೇಕು ಏನು ಇಲ್ಲ ಅಂದರೆ ನಾವು 6 ತಿಂಗಳುಗಳ ಕಾಲ ಜಾಗೃತೆಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು. ನಮ್ಮ ಕುಟುಂಬ ರಕ್ಷಿಸಿದರೆ
ನಮ್ಮ ಸಮಾಜ ರಚಿಸಿದಂತೆ ನಮ್ಮ ಸಮಾಜ ರಕ್ಷಿಸಿದರೆ ನಮ್ಮ ದೇಶದ ರಕ್ಷಿಸಿ ದಂತೆ ಇದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ತಿಳಿದುಕೊಳ್ಳಬೇಕು ಈ ಒಂದು lockdown ದಿಂದ ಅನೇಕ ಜನರಿಗೆ ಅನೇಕ ರೀತಿಯಲ್ಲಿ ಸಮಸ್ಯೆಗಳು ಎದುರಿಸಬಹುದು
ಆದರೂ ಈ 1 lockdown ಮುಖಾಂತರ ನಮ್ಮ ಜನರಿಗೆ ಪೊಲೀಸ್, ವೈದ್ಯರು, ನಮ್ಮ ದೇಶ, ನಮ್ಮ ಸೈನಿಕರು, ಈ ಅವರ ಸಾಧನೆಯನ್ನು ಸಹಾಯವಾಯಿತು ಅರಿಯಲು ಸಹಾಯವಾಯಿತುಅಲ್ಲದೆ ನಮ್ಮ ಜನರಿಗೆ ಪೊಲೀಸರ ಬಗ್ಗೆ ಇರುವ ತಪ್ಪು ಕಲ್ಪನೆ ಅಥವಾ ತಪ್ಪು ತಿಳುವಳಿಕೆ ಮತ್ತು ಅವರ ಬಗ್ಗೆ ಕಡಿಮೆಯಾಯಿತು ಎಂದು ಹೇಳಬಹುದು
ಇದರಿಂದಾಗಿ ಅನೇಕ ರೀತಿಯಲ್ಲಿ ಸಮಸ್ಯೆಗಳು ಅನೇಕ ರೀತಿಯಲ್ಲಿ ಜನರಿಗೆ ಸಾವಿರಾರು ರೀತಿಯಲ್ಲಿ ತೊಂದರೆಗಳು ಎದುರಿಸಬೇಕಾಗುತ್ತದೆ ಅದರಲ್ಲಿನಮ್ಮ ರೈತರು ಅವರು ಬೆಳೆಸಿದಂತಹ ಬೆಳೆಗೆ ಸರಿಯಾದ ರೀತಿಯ ಬೆಲೆ ಸಿಗದೇ ಇರುವುದು ಮತ್ತು ಅವರು ಮೇಲೆಸಾಲದ ಬಾದೆ ಮತ್ತು ಅವರನ್ನು ಕಾಡುತ್ತಿರುವ ಬಡತನ ಹೀಗೆ ಅನೇಕ ರೀತಿಯ ಸಮಸ್ಯೆಯಿಂದ ನಮ್ಮ ರೈತರು ಆತ್ಮಹತ್ಯೆಗೆ ಬಲಿಯಾಗುತ್ತಾರೆ ಬಲಿಯಾಗುತ್ತಾರೆ
ಬಡವರಿಗೆ ಅಂದರೆ ದಿನಗೂಲಿ ಮಾಡುವಂತಹ ಕೂಲಿಕಾರ್ಮಿಕರಿಗೆ ತುಂಬಾ ತುಂಬಾ ಸಮಸ್ಯೆ ಎದುರಾಗುತ್ತದೆಏಕೆಂದರೆ ಅವರಿಗೆ ಸರಿಯಾದ ರೀತಿಯಲ್ಲಿ ಕೆಲಸ ಸಿಗುವುದಿಲ್ಲ ಸಿಕ್ಕಂತ ಕೆಲಸದಲ್ಲಿ ಸರಿಯಾದ ಸಂಬಳ ಸಿಗುವುದಿಲ್ಲ ಸಿಕ್ಕಿರುವ ಅಂತಹ ಸಂಬಳದಲ್ಲಿ ತಮ್ಮ ಕುಟುಂಬದ ಜೀವನಕ್ಕೆ ಬೇಕಾಗಿರುವಂತಹ ಮೂಲ ಸಾಮಗ್ರಿಯನ್ನು ತಂದುಕೊಳ್ಳಲು ಕಷ್ಟ ಏಕೆಂದರೆ ಎಲ್ಲಾ ದಿನಸಿ ಸಾಮಗ್ರಿಗಳ ಬೆಳೆಗಳೆಲ್ಲ ಜಾಸ್ತಿಯಾಗುತ್ತವೆ ಹೀಗೆ ಅವರ ಜೀವನದ ಮೇಲೆ ತುಂಬಾ ಪ್ರಭಾವ ಬೀರುತ್ತದೆ ಎಂದು ಹೇಳಬಹುದು ಮತ್ತೆ ಅದೇ ರೀತಿ ವ್ಯಾಪಾರಸ್ಥರಿಗೂ ಅವರಿಗೂ ಕೂಡ ಸಮಸ್ಯೆ ಜನರು ವ್ಯಾಪಾರ ಮಾಡಿದಾಗ ಮಾತ್ರ ವ್ಯಾಪಾರಸ್ಥರಿಗೂ ಲಾಭ ಹೀಗೆ ಎಲ್ಲಾ ವರ್ಗದ ಜನರಿಗೂ ವಿವಿಧ ರೀತಿಯಲ್ಲಿ ಅನೇಕ ರೀತಿಯ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.
ಇಲ್ಲಿ ನಾನು ಮತ್ತೊಂದು ವಿಷಯವನ್ನು ಹೇಳಲು ಬಯಸುತ್ತೇನೆ ನಮ್ಮ ದೇಶ ಮತ್ತು ನಮ್ಮ ದೇಶದ ಸಂಸ್ಕೃತಿ ಎಲ್ಲವೂ ಅತೀ ಮುಖ್ಯ ಪಾತ್ರವಹಿಸುತ್ತದೆ ಎಂದು ಹೇಳಬಹುದು ದೇಶದವರು ಧಾರ್ಮಿಕ ಶಕ್ತಿ ಮೇಲೆ ಕೂಡ ಬಹಳ ನಂಬಿಕೆ ಇಟ್ಟಿದೆ
ನಾವೆಲ್ಲರೂ ಆದಷ್ಟು ಮಟ್ಟಿಗೆ ಸ್ವದೇಶಿ ವಸ್ತುಗಳನ್ನೇ ಬಳಸಬೇಕು ಮತ್ತು ವಿದೇಶಿ ಆಚರಣೆಗಳನ್ನು ಬದಿಗೊತ್ತಿ ಬೇಕು
ನಮ್ಮ ದೇಶದಲ್ಲಿ ಆಚರಿಸುವ ಹಬ್ಬಗಳು ನಮಗೆ ಬಹಳ ರೀತಿಯಿಂದ ಪ್ರಚೋದನೆಯನ್ನು ಮತ್ತು ಪುಷ್ಟಿಯನ್ನು ಕೊಡುತ್ತದೆ ಎಂದು ಹೇಳಬಹುದು
ಸಂಕ್ರಾಂತಿ ಹಬ್ಬ_ ಎಳ್ಳು ಬೆಲ್ಲದ
ಯುಗಾದಿ ಹಬ್ಬ_ ಬೇವು ಬೆಲ್ಲ
ದಸರಾ ಹಬ್ಬ_ ದುಷ್ಟಶಕ್ತಿಯ ದಹನ
ಹೀಗೆ ಒಂದೊಂದು ಹಬ್ಬಗಳು ಕೂಡ ನಮಗೆ ಒಂದು ರೀತಿಯ ಪಾಠಗಳನ್ನು ಬೋಧಿಸುತ್ತದೆ ಎಂದು ಹೇಳಬಹುದು
ಅದೇ ರೀತಿ ನಾವು ನಮ್ಮ ದಿನನಿತ್ಯದ ಜೀವನ ಅಂದರೆ ನಮ್ಮ ಇಂದಿನ ಬದುಕು busy schedule ಒತ್ತಡದ ಬದುಕಾಗಿದೆ ನಮ್ಮ ಆರೋಗ್ಯದ ಕಡೆಗೆ ಗಮನ ಇಲ್ಲ ಬರೀ ದುಡ್ಡು ದುಡ್ಡು ಎಂದು ಅದರ ಹಿಂದೆ ಹೋಗುತ್ತಿದ್ದೇವೆ ಆದರೆ ಇನ್ನಮೇಲೆ ನಾವು ನಮ್ಮ ಆರೋಗ್ಯ ಬಹಳ ಎಚ್ಚರಿಕೆಯಿಂದ ವಹಿಸಬೇಕು ನಾವು ದಿನನಿತ್ಯ ಸೇವಿಸುವ ಆಹಾರ ಕೂಡ ವಿಟಮಿನ್, ಪ್ರೋಟೀನ್, ಮತ್ತು ರೋಗನಿರೋಧಕ ಶಕ್ತಿಯನ್ನು ಕೊಡುವಂತಹ (immunity) ಪದಾರ್ಥಗಳು ಹೆಚ್ಚಾಗಿ ಸೇವನೆ ಮಾಡಬೇಕು ಅದರ ಜೊತೆಗೆ ಯೋಗ, ವ್ಯಾಯಾಮ, waking ಇವೆಲ್ಲ ನಮ್ಮ ದಿನನಿತ್ಯದ ದಿನಚರಿಯಲ್ಲಿ ಸೇರಿಸಿಕೊಂಡು ಒಂದನ್ನು ತಪ್ಪದಂತೆ ಬಹಳ ಜಾಗೃತವಾಗಿ ಇರಬೇಕು ನಮ್ಮ ಜೀವ ನಮ್ಮ ಅಂಗೈಯಲ್ಲಿ ಇಟ್ಟುಕೊಳ್ಳ ಕೊಳ್ಳಬೇಕು
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ರಾಮಬಾಣ ಕೆಲವು ಪದಾರ್ಥಗಳು
ತುಳಸಿ ಎಲೆ
ಬೆಳ್ಳುಳ್ಳಿ
ಹಸಿಶುಂಠಿ
ವಿಟಮಿನ್ಸ್ C ಇರುವಂತಹ ಹಣ್ಣು ಮತ್ತು ತರಕಾರಿಗಳು
ನಕ್ಷತ್ರಾಕಾರದ ಮೊಗ್ಗು, ಮೆಣಸು, ಏಲಕ್ಕಿ
ಈ ರೀತಿಯಾದಂತಹ ಜೀವನ ನಾವು ಮುಂದೆ ಅಂದರೆ ಲಾಕ್ ಡೌನದ ನಂತರ ಜೀವನ ಕುರಿತು ಕೆಲವೊಂದು ಅನಿಸಿಕೆಗಳನ್ನು ಈ ಲೇಖನದಲ್ಲಿ ಹಂಚಿಕೊಂಡಿದ್ದೇನೆ
—- ಸ್ವರೂಪ .ನಾಗೊರೆ