ಬಂಜೆತನ

ಬಯಸದೆ ಬಂದ ಪಾಪ 
ಬಂಜೆತನ ಹೆಣ್ಣಿಗೆ ಶಾಪ;
 
ಸಂಸಾರದೊಳು ಕಾಣಲಿಲ್ಲ ಸುಖ, 
ಅನುಭವಿಸಿದಳಾಕೆ ದುಃಖ,
 
ಹೊಟ್ಟೆಯಲ್ಲಿ ಅರಳಲಿಲ್ಲ ಹೂ 
ಕೇಳಲಿಲ್ಲ ಕರುಳ ಕುಡಿಯ ಕೂಗೂ;
 
ಆಸೆ ಈಡೇರಲಿಲ್ಲ 
ನವಮಾಸದ ಬೆನೆ ಹೊರಲಿಲ್ಲ
 
ಬಾಣಂತಿ ಸುಖ ಕಾಣಲಿಲ್ಲ 
ಕಣ್ಣೀರು ಒರೆಸುವುದು ತಪ್ಪಲಿಲ್ಲ
 
ಆಸೆಯ ಈಡೇರಿಕೆಗೆ ಆಸ್ಪತ್ರೆ ಸುತ್ತಿದಳು
ಆಸೆ ನಿರಾಸೆಯಾಗಿ ಹಿಂಸೆ ಅನುಭವಿಸಿದಳು

ಅಮ್ಮ ಶಬ್ದ ಕೇಳದೆ ಬೇಸತ್ತಳು
ಮನೆಯವರ ಯಾತನೆಗೆ ಸುಸ್ತಾದಳು
 
ನೂರಾರು ದೇವರಿಗೆ ಹರಕೆ ಹೊತ್ತಳು 
ಹೊತ್ತ ಹರಕೆ ಈಡೇರಲಿಲ್ಲ
 
ಬಂಜೆ ಎಂಬ ಪಟ್ಟ ಕಟ್ಟಿಕೊಂಡು 
ಜೀವನದ ದುರಂತ ಅಂತ್ಯ‌ ಕಂಡಳು. 
 
ಸ್ವರೂಪ ಎಸ್ ನಾಗೂರೆ