ಪಂಚಗವ್ಯ ಮಹತ್ವದ ಕುರಿತು ಉಪನ್ಯಾಸ
ಡಾ. ಡಿ ಪಿ ರಮೇಶ್ ಬಿ.ಎ.ಎಂ.ಎಸ್ ಅವರು ಕಳೆದ 25 ವರ್ಷಗಳಿಂದ ಪಂಚಗವ್ಯ ಚಿಕಿತ್ಸೆಯಲ್ಲಿ ತುಂಬಾ ಅನುಭವಸ್ಥರು. ಅವರು ಗೋಮಾತೆ ಮತ್ತು ಪಂಚಗವ್ಯ ಆಯುರ್ವೇದ ಕುರಿತು 18-07-2022 ರಂದು ಬೀದರ್ ಜಿಲ್ಲೆಯ ಎರಡು ಮುಖ್ಯ ಆಯುರ್ವೇದ ಕಾಲೇಜುಗಳಾದ ಎಂ .ಕೆ ಜಾಬ್ ಶೆಟ್ಟಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಶ್ರೀ ಸಿದ್ದರಾಮೇಶ್ವರ ಆಯುರ್ವೇದ ಮೆಡಿಕಲ್ ಕಾಲೇಜುಗಳಲ್ಲಿ ಗೋಮಾತೆಯ ಮಹತ್ವ,ದಿನನಿತ್ಯದ ಜೀವನದಲ್ಲಿ ಹಾಗೂ ಕ್ರಾನಿಕ್ ಮತ್ತು ಮಾರಣಾಂತಿಕ ರೋಗಗಳ ಕುರಿತು ಉಪನ್ಯಾಸ ನೀಡಿದರು.
ಡಾಕ್ಟರ್ ಡಿ.ಪಿ.ರಮೇಶ್ ಅವರು ಹೇಳಿದ ಪ್ರಕಾರ ವೇದಗಳು ಹೇಳಿದಂತೆ ಪೃಥ್ವಿ ಮತ್ತು ಗೋಮಾತೆ ಪರಸ್ಪರ ಪೂರಕ ಪದಗಳು ಒಂದನ್ನು ಬಿಟ್ಟು ಇನ್ನೊಂದಿಲ್ಲ ಅದಕ್ಕಾಗಿ ನಮ್ಮ ಪೂರ್ವಜರು ಗೋವನ್ನು ಕುರಿತು “ಗಾವೋ ವಿಶ್ವಸ್ಯ ಮಾತರಃ”, ಗೋಮಯೇ ವಸತೇ ಲಕ್ಷ್ಮಿ, ಗೋಮೂತ್ರೇ ಧನ್ವಂತ್ರಿ , ಕ್ಷಿರ ಸರ್ವ ಔಷಧಿ ಸಾರಂ” ಎಂದು ಹಾಡಿ ಹೊಗಳಿದ್ದಾರೆ.
ಗೋವು ಮಾನವಕುಲಕ್ಕೆ ಮಾತ್ರವಲ್ಲದೆ ವಿಶ್ವದ ಸಕಲ ಜೀವರಾಶಿಗಳಿಗೂ ತಾಯಿಯಾಗಿದ್ದಾಳೆ ಎಂದೂ ಪೂಜಿಸಿಕೊಂಡು ಬಂದ ಶ್ರೇಷ್ಠವಾದ ಧರ್ಮ ನಮ್ಮದು ಗೋವನ್ನು ಆರಾಧಿಸಿದರೆ ಸಕಲ ದೇವತೆಗಳನ್ನು ಪೂಜೀಸಿದಂತೆಯೇ. ಈ ಕಾರಣಕ್ಕಾಗಿಯೇ “ಮಾತ ಸರ್ವಭೂತಾನಾಂ ಸರ್ವ ಸುಖಪ್ರದಾ” ಗೋವು ಎಲ್ಲರಿಗೂ ತಾಯಿ, ಎಲ್ಲರಿಗೂ ಎಲ್ಲಾ ಸುಖವನ್ನು ನೀಡುವ ದೇವತೆ ಎಂದು ಬಣ್ಣಿಸಲಾಗಿದೆ.
ನೀರು ಭೂಮಿ, ಅರಣ್ಯ, ಜೀವಸಂಕುಲ, ಪರಿಸರ, ಮಾನವಜಾತಿ ಮತ್ತು ಸಂಸ್ಕೃತಿಗಳನ್ನು ರಕ್ಷಿಸುವ ಮಹತ್ಕಾರ್ಯವನ್ನು ಗೋಮಾತೆ ಮಾಡುತ್ತಾಳೆ. ಅದಕ್ಕಾಗಿಯೇ ನಾವು ಗೋವಿನ ಸಂರಕ್ಷಣೆ ಸಂವರ್ಧನೆ ಮಾಡಬೇಕಾಗಿದೆ .
ಮಾತೃಶಕ್ತಿಯ ದಿವ್ಯ ಅಂಶವೇ ಗೋ ವಂಶ, ದೈವೀ ಸಂಸ್ಕೃತಿಯ ಅತ್ಯುನ್ನತ ಸೂತ್ರವೇ ಗೋಪಾಲನೆ . ಧನ ಸಂಪತ್ತನ್ನೇ ಶ್ರೇಷ್ಠವೆಂದು ಆರಾಧಿಸುವ, ಸುಖಭೋಗಗಳೇ ಜೀವನದ ಸರ್ವಸ್ವ ಎನ್ನುವ ವರ್ತಮಾನ ಕಾಲದ ಧರ್ಮದಲ್ಲಿ ಸಾಮೂಹಿಕ ಹಿತಗಳನ್ನು ಬದಿಗೆ ತಳ್ಳಿ ಬಿಡಲಾಗಿದೆ . ಸ್ವಾರ್ಥಕ್ಕೆ ಹೆಚ್ಚಿನ ಮಹತ್ವ. ಧರ್ಮನಿರಪೇಕ್ಷತೆ ಎಂಬ ಶಬ್ದದ ಅಸ್ಪಷ್ಟ ವ್ಯಾಖ್ಯಾನದಲ್ಲಿ ಗೋ ವಂಶ ಮತ್ತು ಗೋಪಾಲನೆ ಸಂಪೂರ್ಣ ಉಪೇಕ್ಷಿಸಲ ಪಟ್ಟಿದೆ. ಭಾರತದಂತಹ ಕೃಷಿಪ್ರಧಾನ ದೇಶದ ಮೇರುದಂಡವೇ ಗೋವು, ಅದುವೇ ಮೂಲಧನ ಆಗಿದೇ ಮಾತ್ರವಲ್ಲ ಬಡ್ಡಿ ಮತ್ತು ಚಕ್ರ ಬಡ್ಡಿಯೂ ಕೂಡ ಆಗಿದೆ
ಈ ದೇಶದ ದೌರ್ಭಾಗ್ಯವೆಂದರೆ ಇಲ್ಲಿ ಪ್ರತಿವರ್ಷ ಎರಡು ಕೋಟಿಗಿಂತ ಹೆಚ್ಚು ಗೋವಂಶದ ಹತ್ಯೆ ನಡೆಯುತ್ತಿದೆ. ಭಾರತದ ಆತ್ಮಸ್ಥೈರ್ಯವನ್ನು ನಷ್ಟ ಗೋಳಿಸಬೇಕು ಎನ್ನುವ ವಿದೇಶಗಳ ಷಡ್ಯಂತ್ರ ಬೇರುಬಿಟ್ಟು ಬೆಳೆಯುತ್ತಿದೆ .
ವೇದಗಳ ಕಾಲದಿಂದಲೂ ಗೋಮಾತೆಗೆ ಒಂದು ಪೂಜನೀಯ ಸ್ಥಾನ ನೀಡಿದ್ದೇವೆ. ಗೋವನ್ನು “ಅಘನ್ಯಾ” ( ಪಾಪ ರಹಿತಳು ಪಾಪವನ್ನು ದೂರ ಮಾಡುವವಳು)
ಎಂದು ಹೊಗಳಿದ್ದಾರೆ . ಯಜುರ್ವೇದದಲ್ಲಿ “ಗೋಃ ಮಾತ್ರಾನ ವಿದ್ಯತೇ”( ಗೋವಿಗೆ ಸಮನಾದದ್ದು ಮತ್ತೊಂದು ಇಲ್ಲ) ಎಂದು ಬಣ್ಣಿಸಿದೆ . ಅಥರ್ವವೇದದಲ್ಲಿ “ಧೇನು ಸದನಃ ರಯಿಣಾಮ್ “(ಗೋವು ಸರ್ವ ಸಂಪತ್ತಿನ ತವರು) ಎಂದು ಗೋವಿನ ಮಹತ್ವವನ್ನು ತಿಳಿಸಲಾಗಿದೆ. ಪುಣ್ಯಕೋಟಿಯ ಕಥೆಯನ್ನು ಕೇಳುತ್ತಾ ಬೆಳೆದ ಹಿರಿದಾದ ಸಂಸ್ಕೃತಿ ನಮ್ಮದು.
ಆಯುರ್ವೇದದ ಪಿತಾಮಹ ಎಂದು ಕರೆಯಲಾದ ಚರಕ ಮಹರ್ಷಿಗಳು ಚರಕ ಸಂಹಿತೆ ಎಂಬ ಗ್ರಂಥವನ್ನು ಬರೆದಿದ್ದಾರೆ ಇವರು ಹಸುವಿನ ಹಾಲನ್ನು ಓಜೋ ವೃದ್ಧಿ ಕಾರಕವು , ರಸ ದಾತುಗಳನ್ನು ಹೆಚ್ಚಿಸುವುದು , ಧಾರಣಶಕ್ತಿಯನ್ನು ಅಧಿಕಗೊಳಿಸುತ್ತದೆ , ಕ್ಷೀಣರಾದವರಿಗೆ ಹಿತಕರ ಉಂಟುಮಾಡುತ್ತದೆ, ಬ್ರಮೆ , ದಾರಿದ್ರಯ, ಸ್ವಾಸ, ಕೆಮ್ಮು , ನೀರಡಿಕೆ ಮತ್ತು ಹಸಿವು ಸಮಸ್ಯೆಗಳನ್ನು ನಿವಾರಿಸುತ್ತದೆ ಎಂದು ತಿಳಿಸಿದ್ದಾರೆ. ಹೀಗೆ ಸುಶ್ರುತ ವರಹವೀರ ಇಂತಹ ಅನೇಕ ಶ್ರೇಷ್ಠ ಋಷಿಮುನಿಗಳು ಗೋವನ್ನು ಹಾಡಿ ಹೊಗಳಿದ್ದಾರೆ. ಈಗ ನಾವು ಗೋಪಾಲನೆ ಯನ್ನು ಭೌತಿಕ ದೃಷ್ಟಿಯಿಂದ ನೋಡಲಾರಂಭಿಸಿದ್ದೆ. ಈಗಿನ ನಮ್ಮ ಬೌತ ಮತ್ತು ರಾಸಾಯನಿಕ ವಿಜ್ಞಾನಕ್ಕೆ ಸೂಕ್ಷ್ಮಾತಿಸೂಕ್ಷ್ಮ ಪರಮೋತ್ಕೃಷ್ಟ ಉಪಯೋಗದ ಅರಿವೇ ನಮಗಿಲ್ಲ.
ಈ ರೀತಿ ಗುಣಗಾನ ಮಾಡುತ್ತಾ ಪಂಚಗವ್ಯದಿಂದ ಇವತ್ತಿನ ಮಾರಣಾಂತಿಕ ರೋಗಗಳು ಆದ ಕ್ಯಾನ್ಸರ್ ಹೃದಯ ಸಂಬಂಧಿ ರೋಗ ,ಸಿಹಿ ಮೂತ್ರ ,ಬಿಪಿ ಸೋರಿಯಾಸಿಸ್, ಸಂಧಿವಾತ , ಗ್ಯಾಂಗ್ರೀನ್ ಮತ್ತು ತ್ವಚೆಯ ಸಮಸ್ಯೆಗಳನ್ನು ಬಹಳ ಕಡಿಮೆ ಕಡಿಮೆ ವೆಚ್ಚದಲ್ಲಿ ಯಾವ ರೀತಿಯಾಗಿ ಆರೋಗ್ಯ ಸುಧಾರಿಸಿಕೊಳ್ಳಬಹುದು ಎಂದು ಕಾಲೇಜಿನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಕುಲಂಕುಶವಾಗಿ ವಿವರಿಸಿ ಹೇಳಿದರು .