ಅಳ್ಳಿoದು ಚೂಡಾ
ಅಳ್ಳಿoದು ಚೂಡಾ ಅಂದರೆ ಎಲ್ಲರಿಗೂ ಅಚ್ಚುಮೆಚ್ಚು.
ಚೂಡಾ, ಮಂಡಕ್ಕಿ, ಮಂಡಾಳು, ಚುರುಮುರಿ, ಅಳ್ಳು ಹೀಗೆ ಹಲವಾರು ರೀತಿ ಹೆಸರುಗಳುಂಟು.
ಅಳ್ಳಿದು ಚೂಡಾ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು . ಬೇಸಿಗೆಕಾಲದಲ್ಲಿಯಂತು ಗರಗರ ಎನ್ನುವ ಆಳ್ಳಿನ್ನು ತಂದು ಅದಕ್ಕೆ ಸ್ವಲ್ಪ ಖಾರ, ಉಪ್ಪು, ಗರಂ ಮಸಾಲ, ಹಸಿ ಎಣ್ಣೆ, ಹಸಿ ಶೇಂಗಾ ಪೂಟಾಣಿ ಚೆನ್ನಾಗಿ ಕಲಸಿ . ಅದಕ್ಕೆ ಮೇಲೆ ಸ್ವಲ್ಪ ಬಾರಿಕ ಉಳ್ಳಾಗಡ್ಡಿ, ಬಾರಿಕಾಯಿ ಟೊಮೆಟೊ, ಸ್ವಲ್ಪ ಕೊತ್ತಂಬರಿ, ಸ್ವಲ್ಪ ಸಣ್ಣಗೆ ಕೂಟ್ಟಿದ ಜೀರಿಗೆ ಹಾಕಿ , ನಂತರ ಸ್ವಲ್ಪ ಮೇಲೆ ಬಾರಿಕ್ ಸೇವ್ ಹಾಕಿದರೆ ಕಚ್ಚಾ ಚೂಡಾ ರಡಿ. ಅದು ತಿನ್ನಲಿಕ್ಕೆ ಕುಳಿತರೆ ತಿನ್ನುತ್ತಲೇ ಇರಬೇಕು ಅನ್ಸುತ್ತೆ ಮನಸು. ಅಷ್ಟು ಚೆನ್ನಾಗಿರುತ್ತೆ.ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯಜೀವದವರೆಗಿನಎಲ್ಲರಿಗೂ ತುಂಬಾನೇ ಇಷ್ಟ.
ಮಳೆಗಾಲದಲ್ಲಿ ಆಳ್ಳು ಸ್ವಲ್ಪ ಮೆತ್ತಗಾಗುತ್ತದೆ ಅದನ್ನು ಸ್ವಲ್ಪವೇ ಉರಿಯಲ್ಲಿ ಸಣ್ಣಗೆ ಹೂರಿದರೆ ಮತ್ತೆ ಅರಳುಡುತ್ತವೆ. ಅದರಲ್ಲಿ ಸ್ವಲ್ಪ
ಬಿಸಿಲುಗಾಲದಲ್ಲಿ ಒಣಹಾಕಿದ ಈರುಳ್ಳಿ ,ಸ್ವಲ್ಪ ಬೆಳ್ಳುಳ್ಳಿ, ಕರಿಬೇವು, ಕೊತ್ತಂಬರಿ, ಹಾಕಿ ಮೇಲೆ ಸ್ವಲ್ಪ ಅಜೀವ ಹಾಕಿದರೆ ವಾಗ್ರಣಿ ಮಾಡಿದರೆ ಘಮ ಘಮ ಚೂಡಾ ರೆಡಿ
ಇದರ ಬಗ್ಗೆರಣಿ ಹಾಕುತ್ತಿದ್ದರೆ. ಓಣೆ ತುಂಬಾ ಎಲ್ಲ ಘಮಘಮ ಎಂಬ ವಾಸನೆಗೆ ಎಲ್ಲರೂ ಯಾರೂ ಚೂಡಾ ಮಾಡ್ತಾ ಇದ್ದಾರೆ ಅಂತ ಅನ್ನುತ್ತಲೇ ಬಾಯಲ್ಲಿ ನೀರು ಬರುವುದು ಅಷ್ಟು ಚೆನ್ನಾಗಿರುತ್ತೆ.
ಸ್ವಲ್ಪ ನೆಗಡಿ ಬಂದ್ರೆ ಜ್ವರ ಬಂದು ಊಟ ಸೇರ್ತಾ ಇಲ್ಲ ಅಂದಾಗ ನಮ್ಮಮ್ಮ ನಮಗೆ ಬಾಯಿ ರುಚಿ ಬರಲಿ ಎಂದು ಜಾಸ್ತಿ ಬೆಳ್ಳುಳ್ಳಿ ಮತ್ತು ಅರಿಷಿಣ ಹಾಕಿ ಸ್ವಲ್ಪ ಎಣ್ಣೆ ಹಾಕಿ
ಮಾಡಿಕೊಡುವವರು. ಜ್ವರ ಬಂದಾಗ ಯಾವುದುಊಟ ಸೇರ್ತಾ ಇಲ್ಲ ಅಂದಾಗ ಇದು ನಮಗೆ. ಇದೆಇಷ್ಟ
ಅದೇ ರೀತಿ ಮತ್ತೊಂದು ರೀತಿಯಲ್ಲಿ ಮಾಡುವುರು ಹಸಿಮೆಣಸಿನಕಾಯಿ ಬದಲು ಕೆಂಪು ಖಾರದ ಪುಡಿ ಹಾಕಿ ಕೆಂಪಗಿರುವ ಮಾಡಿದರೆ ಮನಸ್ಸು ತಡಿಕೆ ಆಗದು ಬಾಯಿಯಲ್ಲಿ ಖಾರ ಮೈಯೆಲ್ಲಾ ಜುಂ ಎನ್ನುವಷ್ಟು ಇದರ ಮಜಾದ ಮುಂದೆ ಯಾವೂದೆರೀತಿಯ fast food ಗಳಿಲ್ಲ ಇಲ್ಲ ಅನ್ಸುತ್ತೆ ನನಗೆ.
ನಮ್ಮ ಬೀದರ್ ಕಡೆ ಅನೇಕ ಕಡೆಗಳಲ್ಲಿ ಆಳ್ಳಿನ ಭಟ್ಟಿಗಳಿವೆ . ಅದರಲ್ಲಿ ನಮ್ಮೂರು ಕಡೆ ಮತ್ತೊಂದು ರೀತಿಯ ಆಳ್ಳು ಸಿಗುತ್ತೆ
ಬಿಚ್ಕುಂದಿ ಅಳ್ಳು ಅಂತ ಅದು ಗರಗರ ಇದ್ದಾಗಲೇ ಚುಡಾ ಮಾಡಿ ತಿನ್ನಬೇಕು . ಆಳಿನ ಮೇಲೆ ಪಾಲಿಸಿ ಮಾಡಿರುವ ತರಹದ ಆಳ್ಳು ಇದಾಗಿರುತ್ತದೆ.
ಅದೇ ರೀತಿ ಅಳ್ಳಿನಿಂದ ನಮ್ ಕಡೆ
ಅಳ್ಳಿನ ಚೂಡೂ
ಅಳ್ಳಿನ ಸೂಶೀಲಾ
ಅಳ್ಳಿನ ಉಂಡಿ
ಹೀಗೆ ಹಲವಾರು ರೀತಿಯ ಪದಾರ್ಥಗಳನ್ನು ಮಾಡುತ್ತಾರೆ
ಅದಲ್ಲದೆ ನಮ್ ಕಡೆ ದೀಪಾವಳಿ ಸಮಯದಲ್ಲಿ ಲಕ್ಷ್ಮಿ ಪೂಜೆಗೆ ಮತ್ತೊಂದು ತರದ ಅಳ್ಳು ಬಳಸುತ್ತಾರೆ. ಅದನ್ನು ಲಕ್ಷ್ಮಿ ಪೂಜೆಯಾಗಿ ವಿಶೇಷವಾಗಿ ಅದರಲ್ಲಿ ಬೆಂಡು ಬತ್ತಾಸು ಹಾಕಿ ಪ್ರಸಾದದ ರೂಪದಲ್ಲಿ ದೇವರಿಗೆ ಸಮರ್ಪಿಸುತ್ತಾರೆ.
ಅಳ್ಳಿನ ಸುಶೀಲ ಮಾಡುತ್ತಿದ್ದಾಗ ಅದನ್ನು ನೆನೆಯಲು ಹಾಕಿದಾಗ ಆದ್ದರಿಂದ ಬರುವಂತಹ ರಾಡಿ ನೋಡಿದರೆ ಚೂಡಾತಿನ್ನುವುದು ಬೇಡ ಅನ್ಸುತ್ತೆ. ಆದ್ರೆ ಬಿಡಬೇಕು ಅಂದರೆ ಮನಸೇ ಬರುದಿಲ್ಲ.
ಶ್ರಾವಣ ಮಾಸದ ಭಜನೆ ಮಾಡುವಾಗ, ಗಣೇಶ ಹಬ್ಬದ ಲ್ಲಿ ಗಣೇಶ ನೋಡುತ್ತಿದ್ದಾಗ ಅಲ್ಲಿ ಪ್ರಸಾದದ ರೂಪದಲ್ಲಿಅಳ್ಳು ಕೂಡ ಕೊಡುತ್ತಾರೆ.
ಚಿಕ್ಕ ಚಿಕ್ಕ ಮಕ್ಕಳು ಇರುವ ಮನೆಯಲ್ಲಿ ತಾಯಂದಿರು, ತಮ್ಮ ಕೆಲಸ ಮಾಡುವವರಿಗೂ ಮಗುವನ್ನು ನಡುಮನೆಯಲ್ಲಿ ಕೂಡಿಸಿ ಅದಕ್ಕೆ ಒಂದು ಬಟ್ಟಲಲ್ಲಿ ಸ್ವಲ್ಪ ಅಳ್ಳುಹಾಕಿ ಕೂಡಿಸುತ್ತಾರೆ. ಮಗು ಸ್ವಲ್ಪ ಹೊತ್ತು ಅದನ್ನೇ ತಿನ್ನುತ್ತಾ ಮನೇಲೆಲ್ಲ ಚೆಲ್ಲುತ್ತಾ ಹೋಗುತ್ತದೆ.
ಮತ್ತೆ ನಮ್ಮ ಹಳ್ಳಿ ಕಡೆಯಲ್ಲಿ ಹೊಲದಲ್ಲಿ ಬೆಳೆದ ಬೆಳೆಯನ್ನು ಕೊಟ್ಟಿ ಅದರ ಬದಲಾಗಿ ಮಾರುತ ಬರುವ ಹತ್ತಿರ ಅಳ್ಳಿನ ಚೀಲ ತೊಕೊತ್ತಾರೆ.
ಹೀಗೆ ನಮ್ಮ ಬೀದರ್ ಕಡೆಜನರೀಗೆ ಅಳ್ಳು ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ನಮ್ಮ ಬೀದರ್ ಜನ ಬೇರೆ ಎಲ್ಲಾದರೂ ಇರಲ್ಲಿ.ಅಂದ್ರೆ ಹೈದರಾಬಾದ್, ಬೆಂಗಳೂರು, ಪುಣೆ, ಕೆಲಸ ಮಾಡಲು ಹೋಗಿದ್ದರೆ ಅವರು ಅಲ್ಲಿನ ಅಳ್ಳು ಇಷ್ಟಪಡುವುದಿಲ್ಲ. ಅದರ ಬದಲಾಗಿ ಅವರು ಬೀದರ್ ಕಡೆ ಬಂದಾಗ ಒಂದೊಂದು ಬ್ಯಾಗನ್ನು ತೆಗೆದುಕೊಂಡು ಹೋಗುತ್ತಾರೆ . ಇದು ನಮ್ಮೂರು ಕಡೆಅಳ್ಳು ಅಂದರೆ ಒಂದು ರೀತಿ ಸ್ಪೆಷಲ್.
ಒಂದೊಂದು ಕಡೆಯಲ್ಲಿ ಒಂದೊಂದು ರೀತಿಯ ಹೆಸರಿನಿಂದ ಕರೆಯುವಂತಹ ಅಳ್ಳು ಎಂದರೆ ಎಲ್ಲರಿಗೂ ಅಚ್ಚುಮೆಚ್ಚು . ಇದರಿಂದ ಚುಡಾ ಸ್ವಲ್ಪ ಮೆತ್ತಗಾದಾಗ ಅದರಲ್ಲಿ ಟೊಮೆಟೊ ತುರಿದ ಗಜ್ಜರಿ , ಈರುಳ್ಳಿ ಸ್ವಲ್ಪ ಪುಟಾಣಿ ಪುಡಿ ಹಾಕಿ ಮಾಡಿದರೆ
ಮೇಲೆ ಸ್ವಲ್ಪ ಟೊಮೆಟೊ ಚಿಲ್ಲಿ ಸಾಸ್ ಹಾಕಿದರೆ ಭೇಲ್ ಪುರಿ ರೆಡಿ
ಹೀಗೆ ಮತ್ತೆ ಅಳ್ಳಿನಲ್ಲಿ ಸ್ವಲ್ಪ ಬೆಲ್ಲದ ಪಾಕವನ್ನು ಹಾಕಿ ಮತ್ತೆ ಮೇಲೆ ಸ್ವಲ್ಪ ಏಲಕ್ಕಿ ಪುಡಿ ಹಾಕಿ ಮೇಲೆ ಚಿಕ್ಕ-ಚಿಕ್ಕ ಉಂಡೆ ಮಾಡಿದರೆ ಅಳ್ಳಿನ ಉಂಡಿ ರೆಡಿ.
ಹೀಗೆ ಆಳ್ಳು ತುಂಬಾನೆ ಇಷ್ಟವಾದಂತಹದು ಮತ್ತು ಎಲ್ಲರಿಗೂ ಅಚ್ಚುಮೆಚ್ಚು ಅಂತಲೇ ಹೇಳಬಹುದು.
ಸ್ವರೂಪ, ಎಸ್ ನಾಗೂರ್