ಜಗತ್ತಿಗೆ ಪ್ರಜಾಪ್ರಭುತ್ವದ ಪರಿಕಲ್ಪನೆ ಕೊಟ್ಟದ್ದು ವಿಶ್ವಗುರು ಬಸವಣ್ಣನವರು ಎಂಬುದು ಮತ್ತೊಮ್ಮೆ ದೃಢ.

ನವೆಂಬರ್ 25, 2025 ರಂದು ಪ್ರಧಾನಿ ನರೇಂದ್ರ ಮೋದಿಜಿ ಅವರು ಅಯೋಧ್ಯೆಯ ರಾಮಮಂದಿರದ ಮೇಲೆ ಧರ್ಮ ಧ್ವಜವನ್ನು ಹಾರಿಸಿ ನಮ್ಮನ್ನು ಉದ್ದೇಶಿಸಿ ಭಾಷಣ ಮಾಡಿದರು ನಾವೆಲ್ಲ ಕೇಳಿದೆವು ಅವರು ಒಂದು ಮಾತನ್ನು ಒತ್ತುಕೊಟ್ಟು ಹೇಳಿದರು, ಭಾರತದಲ್ಲಿ ಪ್ರಜಾಪ್ರಭುತ್ವ ಪ್ರಜಾಪ್ರಭುತ್ವದ ಮಾದರಿಯ ಅನುಭವ ಮಂಟಪ ಇಂಗ್ಲೆಂಡಿನ ಮ್ಯಾಗ್ನಾಕಾರ್ಟ ಕ್ಕಿಂತಲೂ ಮೊದಲೇ ಇತ್ತು . ಅದರ ರಚನಾಕಾರರು ಜಾರಿಗೆ ತಂದವರು ಭಗವಾನ್ ಬಸವಣ್ಣನವರು ಹಾಗಾದರೆ ಏನಿದು ಮ್ಯಾಗ್ನಾಕಾಟ ಅನುಭವ ಮಂಟಪ ಜಾರಿಗೆ ಬಂದದ್ದು ಯಾವಾಗ ಎಂದು ಎಲ್ಲರಿಗೂ ಕುತೂಹಲ ಉಂಟಾಯಿತು.ಬಸವಣ್ಣನವರು II ಬಿಜ್ಜಳರ ಆಳ್ವಿಕೆಯಲ್ಲಿ ಪ್ರಧಾನಮಂತ್ರಿಯಾಗಿದ್ದರು ಅವರ ಆಳ್ವಿಕೆ ಅವಧಿ (1130  -1167) ಇದೇ ಒಂದು ಅವಧಿಯಲ್ಲಿ ಅನುಭವ ಮಂಟಪ ರಚನೆಯಾಯಿತು ಜಾತಿ ವರ್ಣ ವರ್ಗ ರಹಿತ ಲಿಂಗಭೇದವಿಲ್ಲದ ಚರ್ಚಾ ಸ್ಥಳ

 ಮ್ಯಾಗ್ನ ಕಾರ್ಟ  1215 ರಲ್ಲಿ ರಚನೆಯಾಯಿತು ಇದನ್ನು ಸ್ವಲ್ಪ ವಿವರವಾಗಿ ನೋಡುವುದಾದರೆ ಇಂಗ್ಲೆಂಡಿನ ರಾಜ ಜಾನ್ ಇಂಗ್ಲಿಷ್ ಇತಿಹಾಸದಲ್ಲೇ ಇವನನ್ನು ಸಾಮಾನ್ಯವಾಗಿ ಅನ್ಯಾಯ ಕಠಿಣತೆ ಹಾಗೂ ವಿಫಲ ಆಡಳಿತದ ಸಂಕೇತವಾಗಿ ನೋಡಲಾಗುತ್ತದೆ ರಾಜ ಜಾನ್ ತನ್ನ ಆಡಳಿತದ ಸಮಯದಲ್ಲಿ ನಿರಂತರ ಯುದ್ಧಗಳಲ್ಲಿ ಸೋಲುತ್ತಿದ್ದ, ಸೋಲನ್ನು ಮರೆಮಾಚಲು ಮತ್ತು ಸೇನೆ ಕಟ್ಟಲು ಜನರ ಮೇಲೆ ಅಧಿಕೃತ ತೆರಿಗೆ ಹೇರುತ್ತಿದ್ದ ಪರಿಣಾಮ ಸಮಾಂತರ ಜಮೀನ್ದಾರರ(Barons) ಮತ್ತು ಜನಸಾಮಾನ್ಯರಲ್ಲಿ  ಅಸಮಾಧಾನ ಭುಗಿಲೆದ್ದಿತ್ತು ಜಾನ್ ಹಲವರ ಜಮೀನನ್ನು ಬಲವಂತವಾಗಿ ಕಸಿದುಕೊಂಡು ವಿರೋಧಿಸಿದರೆ, ಬಂಧಿಸುವುದು ಸಾಮಾನ್ಯವಾಗಿತ್ತು ನ್ಯಾಯಾಲಯದಲ್ಲಿ ಲಂಚದ ಭಯಭೀತಿಯಿಂದ ತೀರ್ಪುಗಳ ತಿದ್ದುಪಡಿ ಮಾಡುವುದು, ಅವನ ಅಸಹನೆ ಧಾರ್ಮಿಕ ಕ್ಷೇತ್ರದಲ್ಲಿಯೂ ಆವರಿಸಿತು . ಚರ್ಚಿನಲ್ಲಿ  ಜಾನ್ ಪೋಪ್ ಜೊತೆ ದೊಡ್ಡ ಗಲಭೆ ಮಾಡಿಕೊಂಡು ಚರ್ಚ್ ನಿಂದ ಬಹಿಷ್ಕೃತಗೊಂಡ ಇದು ಇಂಗ್ಲೆಂಡಿನ ರಾಜಕೀಯ ಮತ್ತು ಧಾರ್ಮಿಕ ಜೀವನವನ್ನು ದೊಡ್ಡಮಟ್ಟದಲ್ಲಿ ಪ್ರಭಾವಿಸಿತು ಜನರ ಮನಸ್ಸಿನಲ್ಲಿ ಅಸಮಾಧಾನ ಭುಗಿಲೆದ್ದಿತು ಜಮೀನ್ದಾರರ ಕೋಪ ಬಂಡಾಯದ ರೂಪ ತಾಳಿತು ಅಂತಿಮವಾಗಿ ಜಾನ್ನನ್ನು 1215 ರಲ್ಲಿ  ರನ್ನಿಮಿಡ್ ಎನ್ನುವ ಸ್ಥಳದಲ್ಲಿ ಮ್ಯಾಗ್ನಾಕಾರ್ಟಗೆ ಸಹಿ ಹಾಕಲು ಬಲವಂತ ಪಡಿಸಿದರು. ಮ್ಯಾಗ್ನಾಕಾರ್ಟ ರಾಜನ ಅಧಿಕಾರಕ್ಕೆ ಮಿತಿ ಹಾಕಿದ ಮೊದಲ ಅಧಿಸೂಚನೆ ಮ್ಯಾಗ್ನಾಕಾರ್ಟ ಕಾನೂನಿನ ಆಳ್ವಿಕೆ ತೆರಿಗೆ ನಿಯಂತ್ರಣ ನ್ಯಾಯದ ಹಕ್ಕು ಜಮೀನ್ದಾರರ ರಕ್ಷಣೆ ಹಾಗೂ ಅಧಿಕಾರಕ್ಕೆ ಮಿತಿ ವಿಧಿಸುವ 63 ವಿಧಿಗಳ ಘೋಷಣಾ ಪತ್ರ ಪ್ರಮುಖ ಅಂಶಗಳನ್ನು ನೋಡುವುದಾದರೆ 1.ರಾಜನು ಕಾನೂನಿಗೆ ಒಳಪಟ್ಟವನು ರಾಜನಾಧಿಕಾರಕ್ಕೆ ಮಿತಿ ರಾಜನು ಕಾನೂನನ್ನು ಮೀರಿಸಬಾರದು 2. ನ್ಯಾಯ ಸಮ್ಮತ ವಿಚಾರಣೆಯ ಹಕ್ಕು ಯಾರನ್ನಾದರೂ ಕಾನೂನು ಇಲ್ಲದೆ ಕಾರಣವಿಲ್ಲದೆ ಬಂಧಿಸಬಾರದು ಪ್ರತಿಯೊಬ್ಬರಿಗೂ ನ್ಯಾಯಾಲಯದಲ್ಲಿ ನ್ಯಾಯಪಡೆಯುವ ಹಕ್ಕು 3. ತೆರಿಗೆ ನಿಯಂತ್ರಣ ರಾಜನು ಜನರ ಅನುಮತಿ ಇಲ್ಲದೆ ತೆರಿಗೆ ಹೆಚ್ಚಿಸಲು ಸಾಧ್ಯವಿಲ್ಲ ಜಮೀನ್ದಾರರು (Barons)ಒಪ್ಪಿಗೆ ಅಗತ್ಯ 4. ಜಮೀನ್ದಾರರ ಹಕ್ಕುಗಳ ರಕ್ಷಣೆ ರಾಜನು ಜಮೀನ್ದಾರರ ಜಮೀನು ಮತ್ತು ಅವರ ಹಕ್ಕುಗಳನ್ನು ಅನ್ಯಾಯವಾಗಿ ಕಸಿದುಕೊಳ್ಳಬಾರದು 5. ವ್ಯಾಪಾರ ಮತ್ತು ಆರ್ಥಿಕ ಹಕ್ಕುಗಳು ಸ್ವತಂತ್ರ ವ್ಯಾಪಾರಕ್ಕೆ ರಕ್ಷಣೆ ಮಾರುಕಟ್ಟೆ ಬಂದರುಗಳಲ್ಲಿ ಅನ್ಯಾಯದ ಶುಲ್ಕ ನಿಷೇಧ 6. ಚರ್ಚ್ ನ ಸ್ವಾತಂತ್ರ್ಯ ರಾಜನು ಚರ್ಚ್ನ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಬಾರದು 7. ಕಾನೂನು ಬದ್ಧ ಜಪ್ತಿ ಮತ್ತು ದಂಡಗಳ ನಿಯಮ ದಂಡಗಳು ನ್ಯಾಯ ಸಮ್ಮತವಾಗಿರಬೇಕು ಮತ್ತು ಅತಿಯಾದ ಹಾಗೂ ದುರುಪಯೋಗದ ದಂಡ ವಿಧಿಸಬಾರದು. ಈಗ ನಮ್ಮ ಅನುಭವ ಮಂಟಪವನ್ನು ನೋಡುವುದಾದರೆ ಎರಡನೇ ಬಿಜ್ಜಳರ ರಾಜ್ಯದಲ್ಲಿ (1130-1167) ಬಸವಣ್ಣನವರು  ಪ್ರಧಾನ ಮಂತ್ರಿಯಾಗಿದ್ದ ಅವಧಿ ಈ ಅವಧಿಯಲ್ಲಿ ರಚನೆಗೊಂಡ ಅದ್ಭುತ ಪರಿಕಲ್ಪನೆ. ಬಸವಣ್ಣನವರು 1131 ರಲ್ಲಿ ಬಾಗಲಕೋಟೆಯ ಬಾಗೇವಾಡಿ ಎಂಬಲ್ಲಿ ಜನಿಸಿದರು ತಂದೆ ಮಾದರಸ ತಾಯಿ ಮಾದಲಾಂಬಿಕೆ ಅಪ್ಪಟ ಬ್ರಾಹ್ಮಣ ಕುಟುಂಬದಲ್ಲಿ ಜನನ, ಸಮಾಜದಲ್ಲಿ ಅವ್ಯವಸ್ಥೆಯ ಅಂಧಕಾರ ಘೀಳಿಡುತಿರುವಾಗ ಆಕಾಶ ದೀಪವಾಗಿ ಬೆಳಕನ್ನು ಚೆಲ್ಲಿದರು ಸ್ತ್ರೀಯರ ಆಕ್ರಂದನದ ಧ್ವನಿಯಾದರು  ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಮುಂಚಿ ಮಾಡುತ್ತಿದ್ದಾಗ ಅಕ್ಕನಿಗಲ್ಲದ ಮುಂಜಿ ನನಗೇಕೆ ಎಂದು ಮನೆ ಬಿಟ್ಟು ಹೊರ ನಡೆದು ಕೂಡಲಸಂಗಮದಲ್ಲಿ ಅಭ್ಯಾಸವನ್ನು ಕೈಗೊಂಡು ಕಲ್ಯಾಣದ ಬಿಜ್ಜಳರ ಮಂತ್ರಿಯ ಕಣ್ಣಿಗೆ ಬಿದ್ದು,ಇವರ ಅಸಾಮಾನ್ಯ ಪ್ರತಿಭೆಯನ್ನು ಕಂಡು ಕಲ್ಯಾಣದಲ್ಲಿ ಕರಣಿಕ ವೃತ್ತಿಯನ್ನು ಕೊಟ್ಟರು ಯಾರಿಗೂ ತಿಳಿಯದ ಲಿಪಿಯನ್ನು ಓದಿ ಬಿಜ್ಜಳರ ಸಿಂಹಾಸನದ ಕೆಳಗಿದ್ದ ಸಂಪತ್ತನ್ನು ಬಿಜ್ಜಳರ  ಕೈಗಿಟ್ಟರು ಇವರ ಉಹಿಸಲಾಗದ ಪಾಂಡಿತ್ಯ ಜ್ಞಾನದ ಶಿಖರ ವನ್ನು ಸಾಕ್ಷಾತ್ ಆಗಿ ಕಂಡು ಪ್ರದಾನ ಮಂತ್ರಿಗಳಾಗಿ ನಿಯೋಜಿಸಿದರು ಕಾಯಕದಲ್ಲಿ ಕೈಲಾಸವನ್ನು ಕಂಡರು ಪ್ರಜೆಗಳಿಗೂ ಅದನ್ನೇ ಬೋಧಿಸಿದರು ಅರ್ಥ ವ್ಯವಸ್ಥೆಯಲ್ಲಿ ಭಾರಿ ದೊಡ್ಡ ಮೊತ್ತದ ಬದಲಾವಣೆ ಆಯ್ತು ಕಾಯಕದಲ್ಲಿ ನಿರತರಾಗುವುದು ಬಂದದ್ದರಲ್ಲಿ ತನಗಾಗಿ ಉಪಯೋಗಿಸಿಕೊಂಡು ಉಳಿದುದ್ದನ್ನು ಸಮಾಜದ ಒಳಿತಿಗಾಗಿ  ವಿನಿಯೋಗಿಸುವುದು , ದೇವರನಾಮಸ್ಮರಣೆ,ಭಕ್ತಿ ಚಳುವಳಿ,ಕಾಯಕ ಚಳುವಳಿ ದಾಸೋಹ ಕ್ರಾಂತಿ ಇವುಗಳಿಂದ ರಾಜ್ಯದ ಜನ ಪ್ರಭಾವಿತರಾಗಿ ಕಲ್ಯಾಣ ರಾಜ್ಯ ನಿರ್ಮಾಣದಲ್ಲಿ ಕಂಕಣಭದ್ಧರಾದರು ಅನುಭವ ಮಂಟಪ ರಚಿಸಿದರು ವ್ಯೋಮ ಕಾಯ ಸಿದ್ದ ಅಲ್ಲಮಪ್ರಭುದೇವರು ಅದರ ಅಧ್ಯಕ್ಷತೆ ವಹಿಸಿದ್ದರು ಅಲ್ಲಿ ಸಕಲರಿಗೆ ಅವಕಾಶವಿತ್ತು ವಚನಗಳ ಮೂಲಕ ತಮ್ಮ ಅನುಭವವನ್ನು ಅಭಿವ್ಯಕ್ತಗೊಳಿಸಿದರು 33 ಶರಣೆಯರು ಅವಚನಗಳನ್ನು ರಚಿಸಿದರು 12ನೇ ಶತಮಾನದಲ್ಲಿ ಇಷ್ಟೊಂದು ಶರಣೀಯರ ವಚನ ರಚನೆ ಇತಿಹಾಸ ಮೊದಲ ಬಾರಿಗೆ  ಕಂಡಿತು. ಸಾಮಾಜಿಕ ಸದೃಢತೆ ಆರ್ಥಿಕ ಸ್ವಾವಲಂಬನೆ ಆಧ್ಯಾತ್ಮಿಕ ಅನುಭವ, ಜಾತಿ, ವರ್ಣ, ವರ್ಗ ಲಿಂಗ ಭೇದ ರಹಿತ ಸದೃಢ ಸಮಾಜ ನಿರ್ಮಾಣದ ಹರಿಕಾರ ನಮ್ಮ ವಿಶ್ವಗುರು,ಸಾಂಸ್ಕೃತಿಕ ನಾಯಕ ಬಸವಣ್ಣನವರು, ಇಂಗ್ಲೆಂಡಿಗಿಂತಲೂ ಮೊದಲು ನಮ್ಮ ದೇಶ ಪ್ರಜಾಪ್ರಭುತ್ವವನ್ನು ಕಂಡಿತು