ಮಹಿಳಾ ದಿನಾಚರಣೆ ಒಂದೇ ದಿನ ಆಚರಿಸಿದರೆ ಸಾಕೆ?

ಮಹಿಳಾ ದಿನಾಚರಣೆ ಒಂದೇ ದಿನ ಆಚರಿಸಿದರೆ ಸಾಕೆ? 

ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದರೆ ನನಗೆ ದೊರಕಿದ್ದುಅಸ್ಪಷ್ಟ ಉತ್ತರ ಮತ್ತೆ ಕೆಲವೊಂದು ಸಾರಿ ಪ್ರಶ್ನೆಗಳಿಗೆ ಉತ್ತರ ಸಿಗದಂತಾಗಿದೆ. ಮಾರ್ಚ್ 8ರಂದು ವಿಶ್ವ ಅಂತಾರಾಷ್ಟ್ರೀಯ ಮಹಿಳಾ ದಿನ ಎಂದು ಆಚರಿಸುತ್ತಾರೆ. ಮಾರ್ಚ್ ೮ ದಿವಸವೇ ಮಹಿಳೆಯರ ದಿನ ಆಚರಣೆ ಮಾಡಲು ಕಾರಣವೇನೆಂದರೆ. ನ್ಯೂಯಾರ್ಕ್ ನಲ್ಲಿ ನಡೆದ ಒಂದು ಘಟನೆಗೆ ಕಾರಣಅದು ಏನೆಂದರೆ ಕ್ಲಾರಾ ಜಟ್ಲಿನ್ ಎಂಬುವಳುಒಂದು ಹತ್ತಿಯ ಗಿರಣಿಯ ಒಂದರಲ್ಲಿ ಕೆಲಸ ಮಾಡುತ್ತಿದ್ದಾಗ ಅವಳು ಪುರುಷನಿಗೆ ಸರಿಸಮಾನವಾಗಿ ಕೆಲಸ ಮಾಡಿದರು ಅವಳಿಗೆ ಸರಿಯಾದ ವೇತನ ಸಿಗಲಿಲ್ಲ. ಅದಕ್ಕಾಗಿ ಅಂದು ಅವಳುಮನ ನೋಂದು ತನ್ನಂತಹ ಅನೇಕ ಮಹಿಳೆಯರಇಂತಹ ದುಸ್ಥಿತಿಯನ್ನು ಕಂಡುಏನಾದರು ಇದಕ್ಕೆ ಪರಿಹಾರ ಹುಡುಕುಬೇಕುಎಂದು ಧೋರಣೆಗಳನ್ನು ಅಲ್ಲಿನ ಬೀದಿಬೀದಿಯಲ್ಲಿ ಸುತ್ತಾಡಿ ತನಗೆ ನ್ಯಾಯ ದೊರಕಬೇಕೆಂದು ಅನೇಕ ರೀತಿಯ ಧೋರಣೆಗಳನ್ನು ಮಾಡಲು ಮುಂದಾದರು. ಹೀಗೆ ಕೊನೆಗೆ ಅವಳ ಕೂಗಿಗೆ ಪ್ರತಿಫಲ ,ಅವಳ ಪಟ್ಟಿರುವ ಪರಿಶ್ರಮಕ್ಕೆ ಅನುಗುಣವಾಗಿ ಅವಳಿಗೆ ನ್ಯಾಯ ದೊರಕಿತು. ಮುಂದೆ ಇದನ್ನು ಅರಿತ ವಿಶ್ವದ ಇತರ ರಾಷ್ಟ್ರಗಳ ಎಲ್ಲವೂ ಮಾರ್ಚ್ 8 ಎಂಟರಂದು ವಿಶ್ವ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಎಂದು ಆಚರಿಸಲು ಪ್ರಾರಂಭಿಸುತ್ತಾರೆ ನನ್ನ ಪ್ರಕಾರಈ ದಿನಚರಣೆ ಶೋಷಣೆಗೆ ಒಳಗಾದವರು, ಹೋರಾಟ ಮಾಡಿದವರ ಮಹಿಳೆಯರಿಗೆ ಮಾತ್ರ ದಿನಾಚರಣೆ ಯಾಗದೆ ದೇಶದ ವಿವಿಧ ಮೂಲೆಗಳಲ್ಲಿ ವಿವಿಧ ರೀತಿಯ ನೋವು ಯಾತನೆ ಪಡೆಯುತ್ತಿರುವಂತಹ ಅನೇಕ ಹೆಣ್ಣು ಮಕ್ಕಳ ಸಮಸ್ಯೆಗಳನ್ನು ಅರಿತುಕೊಂಡು ಅವರ ಸಮಸ್ಯೆಗೆ ಪರಿಹಾರ ಹುಡುಕುವಂತೆ ಮಾಡಬೇಕು ಅವರ ನೋವಿಗೆಕಾರಣಹುಡಕಿ ಅವರೇ ಸಮಸ್ಯೆಗೆ ಪರಿಹಾರವನ್ನು ಹುಡುಕುವಂತಹ ಔಷಧವನ್ನು ಹುಡುಕುವ ಕೆಲಸ ಮಾಡಬೇಕು ಅಂದಾಗ ಮಾತ್ರ ಈ ದಿನದ ಆಚರಣೆಯ ಸಂಭ್ರಮ ಸಾರ್ಥಕವೆನಿಸುತ್ತದೆ. ಇವರಿಗೆ ಎದರಿಸುವ ಎಂಥಹ ಸಮಸ್ಯೆಗಳೆಂದರೆ, ಉದಾರಣೆ ನೋಡಬೇಕಾದರೆ ಇಂದೂ ಅನೇಕ ಕಡೆ , ಕಛೇರಿ ಸಂಸ್ಥೆ ಶಾಲೆ ಸಂಘ-ಸಂಸ್ಥೆಗಳಿಗೆ ಅನೇಕ ಗ್ರಾಮಗಳ ಕಡೆಗೆ ಸ್ತ್ರೀಯರಿಗೆ ಶಿಕ್ಷಣ ನಿರಾಕರಣೆ, ಮಾನ ಮರ್ಯಾದೆಗಳ ಹತ್ಯೆ. ಶಿಶು ಭ್ರೂಣ ಹತ್ಯೆ, ಲೈಂಗಿಕ ದೌರ್ಜನ್ಯ, ವರದಕ್ಷಿಣೆಯ ಕಿರುಕುಳ, ಬಾಲ್ಯವಿವಾಹ ಪದ್ಧತಿ ಹೀಗೆ ಹಲವಾರು ರೀತಿಯ ಸಮಸ್ಯೆಗಳು ನಮ್ಮಲ್ಲಿ ತಾಂಡವಾಡುತ್ತಿದೆ ಇಂತಹ ಸಮಸ್ಯೆಗಳನ್ನೆಲ್ಲ ಅರಿತುಕೊಂಡು ನಾವು ಅವರ ನೋವಿಗೆ ನಾವು ಸ್ಪಂದನ ಹುಡುಕಬೇಕು.
ಅಂದಾಗ ಮಾತ್ರ ಈ ಒಂದು ದಿನಾಚರಣೆಗೆ ಮಹತ್ವ ಸಿಕ್ಕಿದಂತಾಗಬಹುದು.
#ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ಆಳುತ್ತದೆ#
ಇಡೀ ವಿಶ್ವಕ್ಕೆ ಸಂಸತ್ತಿನ ಪರಿಕಲ್ಪನೆಯನ್ನು ತಂದುಕೊಟ್ಟಿದ್ದು ನಮ್ಮ ಅನುಭವ ಮಂಟಪ. ಅಂದು ಅಂದರೆ 12ನೇ ಶತಮಾನದಲ್ಲಿಯೇ ಬಸವಣ್ಣನವರ ಸಾರಥ್ಯದಲ್ಲಿ ಸ್ತ್ರೀ ಪುರುಷರಿಗೆ ಸರಿಸಮಾನವಾದ ಅಂತ‌ ಅವಕಾಶವನ್ನು ಕಲ್ಪಿಸಿಕೊಡಲಾಗಿತ್ತು. ಅಂದೇ ನಾವು ಸುಮಾರು 33 ಮಹಿಳೆಯರ ಕ್ಕಿಂತಲೂ ಹೆಚ್ಚಿನ ಹೆಸರುಗಳು ನಮಗೆ ದೊರಕುತ್ತದೆ ಗಂಗಾಂಬಿಕಾ, ನೀಲಾಂಬಿಕ, ಮುಕ್ತಾಯಕ್ಕ ,ಸುಂಕವ್ವ, ಬೊಂತಾದೇವಿ, ದುಗ್ಗಳೆ, ಹೀಗೆ ಹಲವಾರು ಶರಣೆಯರ ವಚನಗಳನ್ನು ನೋಡುವುದಾದರೆ ಅಂದು ಅವರು ಯಾವುದೇ ರೀತಿಯ ಅಕ್ಷರ ಜ್ಞಾನವಿಲ್ಲದಿದ್ದರೂ ಎಂತಹ ವಚನಗಳು ಸೃಷ್ಟಿ ಮಾಡಿದಾರೆಎಂದರೆ ಎಂಥಹ.ಅಕ್ಷರಜ್ಞಾನ ಕಲಿತವರನ್ನು ಎಷ್ಟು ವಿದ್ಯಾವಂತರು ಕೂಡ ಮೂಕಸ್ಮಿತ ರನ್ನಾಗಿ ಸಿದೆ ಅವರ ಒಂದೊಂದು ವಚನಗಳು ನಮ್ಮ ಜೀವನಕ್ಕೆ ಗೆ ಅಳವಡಿಸಿದರೆ ನಮ್ಮ ಜೀವನ ಸಾರ್ಥಕವೆನಿಸುವುದು.ಅಲ್ಲದೆ ಅವರ ವಚನಗಳು ನಮ್ಮ ಮಕ್ಕಳಿಗೆ ಪ್ರೇರಣಾದಾಯಕವಾಗಿದೆ. ಅದೇ ರೀತಿ ದಾನಚಿಂತಾಮಣಿ ಕೂಡ ಅಂದು ಶಾಂತಿನಾಥನ ಪುರಾಣವನ್ನು ತನ್ನ ಸ್ವಹಸ್ತದಿಂದ ಸಾವಿರ ಸಾವಿರ ಪ್ರತಿಗಳನ್ನು ಮಾಡಿಸಿ ದಾನಮಾಡಿದಳು ಇದಕ್ಕನುಗುಣವಾಗಿ ಅವಳಿಗೆ ದಾನಚಿಂತಾಮಣಿ ಎಂಬ ಹೆಸರಿನಿಂದಲೇ ಪ್ರಸಿದ್ದಿಯಾದಳು
#ಪೊರಕೆ ಎತ್ತುವ ಕೈ ಪಾರ್ಲಿಮೆಂಟ್ ಆಳುತ್ತದೆ#
ಇಂದು ಆಧುನಿಕ ಯುಗದಲ್ಲಿ ನಮ್ಮ ಸ್ತ್ರೀಯು ಪ್ರತಿಯೊಂದು ರಂಗದಲ್ಲಿ ಪುರುಷನಿಗೆ ಸರಿಸಮಾನವಾಗಿ ದುಡಿಯುವ ಸಾಮರ್ಥ್ಯವನ್ನು. ಹೊಂದಿದ್ದಾಳೆ ಆದರೂ ಕೂಡ ನಮ್ಮ ಸಮಾಜ ಪುರುಷ ಪ್ರಧಾನವಾಗಿರುವದರಿಂದ ಸಮಾಜವಾದಲ್ಲಿಎಲ್ಲೋ ಒಂದು ಕಡೆ ಸ್ತ್ರೀಯರು ಅಂತ ಬಂದಾಗ ಅಸಡ್ಡೆ, ದೃಷ್ಟಿಯಿಂದ ನೋಡುವಂತ ಸಮಾಜ ನಮ್ಮದಾಗಿದೆ. ಇವತ್ತು ನಾವು ಯಾವುದೇ ರಂಗ ನೋಡಿದರು ಸ್ತ್ರೀಯರ ಕೈ ಮುಂದಾಗಿದೆ ಆದರೆ ನಮ್ಮ ಸಮಾಜದಲ್ಲಿ ಸ್ತ್ರೀಯನ್ನು ಕುರಿತು ಜನರ ಮನಸ್ಸಿನಲ್ಲಿ ಇರುವಂತಹ ಮೂಢನಂಬಿಕೆಗಳ ಆಗಲಿ ಅಥವಾ ಅವರ ಬಗ್ಗೆ ಇರುವಂತಹ ಕನಿಕರ ಕಾಳಜಿದ ನೋಡುವಂತಹ ದೃಷ್ಟಿ ಬೇರೆಯಾಗಿದೆ.
ಇಲ್ಲಿಒಂದು ಮಾತು ಹೇಳಬೇಕೆಂದರೆ
ಪುರುಷರಿಗೆ ಸ್ತ್ರೀಯನ್ನು ಹೋಲಿಸಿದಾಗಅವಳು ಮಾನಸಿಕವಾಗಿ ಆಗಲಿ ಅಥವಾ ದೈಹಿಕವಾಗಿ ಆಗಲಿ ಪುರುಷರಿಗಿಂತಲೂ ಹೆಚ್ಚು ಬಲಿಷ್ಠ ಆಗಿರುತ್ತಾಳೆ. ಮನುಷ್

ಒಟ್ಟಿನಲ್ಲಿ ಹೇಳಬೇಕೆಂದರೆ ಮಹಿಳಾ ದಿನಾಚರಣೆ ಆಚರಿಸುವುದರ ಜೊತೆಗೆ ನಾವೆಲ್ಲರೂ ಒಂದು ಪ್ರಮಾಣ ಮಾಡೋಣ ಅದೇನೆಂದರೆ ನಮ್ಮ ಸುತ್ತಮುತ್ತಲೂ ಅಥವಾ ಕಣ್ಣೆದುರಿಗೆ ಆಗುತ್ತಿರುವ ಅರಮನೆಯಾಗಲಿ ಅಥವಾ ಅವರ ಯಾವುದೇ ರೀತಿಯ ಸಮಸ್ಯೆಗಳಾಗಲಿ ಅವುಗಳನ್ನು ಬಗೆಹರಿಸುವಂತೆ ಪ್ರಯತ್ನವನ್ನಾದರೂ ನಾವು ಮಾಡಲು ಮುಂದಾಗಬೇಕು ಅಂದಾಗ ಮಾತ್ರ ದಿನಾಚರಣೆ ಆಚರಿಸಿದ್ದಕು ಸಾರ್ಥಕ

ಸ್ವರೂಪ.ಎಸ್. ನಾಗೂರೆ