ಗುರು ನೀನು

ಗುರು ನೀನು
ಆ ದೇವರು ಈ ದೇವರು ಎಂದು ಸುತ್ತಾಡಿ ದವರಿಗೆ
ಹೋಮ-ಹವನಗಳನ್ನು ಮಾಡಿ ಡಾಂಬಿಕತೆ
ತೋರಿದ ಶರಣರಿಗೆ ಅವರ ಮೌಢತೆಯನ್ನು ಹೋಗಲಾಡಿಸಿ
ಶರಣರ ವಚನದ ಮೂಲಕ ನೈಜತೆಯನ್ನು ತಿಳಿಸಿದ ಗುರು ನೀನು….

ತಿಪ್ಪೆಯಲ್ಲಿ ಬಿಸಾಡಿದ ಮಗುವಿಗೆ ಪ್ರಾಣ ರಕ್ಷಣೆ ಕೊಟ್ಟ
ಚರಂಡಿಗೆ ಪಾಲಾದ ಮಗುವಿನ ಜೀವವುಳಿಸಿದ ತಂದೆ ನೀನು
ಅನಾಥ ಮಕ್ಕಳಿಗೆ ನಾನು ಅನಾಥ ಎಂಬುದನ್ನು ಮರೆತು
ನೀನೆಅವರ ತಂದೆ ಎಂದು ನಿನ್ನ ಜನ್ಮದಿನವೇ ಸುದೈವಿ ಶಿಶುಗಳ
ಜನ್ಮದಿನ ಆಚರಿಸಿದ ಗುರು ನೀನು….

ರಜಾಕಾರರ ಹಾವಳಿಗೆ ಎದೆ ತಟ್ಟಿ ನಿಂತು
ಮಠದ ಹೊರಗಡೆ ಉರ್ದು ಬೋರ್ಡ್ ಹಾಕಿ
ಒಳಗಡೆ ಕನ್ನಡದ ಪಾಠ ವನ್ನು ಉಣಬಡಿಸಿದ ತಂದೆ ನೀನು
ಕನ್ನಡದಅಕ್ಷರವನ್ನು ಕಲಿಸಿದ ಗುರು ನೀನು….

ಪುರುಷ ಪ್ರಧಾನ ಸಮಾಜದಲ್ಲಿ
ಹೆಣ್ಣಿಗೆ ಆದ್ಯತೆ ನೀಡಿ ಗೌರವ ನೀಡಿ
ಮುಕ್ತಾಯಕ್ಕ ನಿಗೆ ಗುರುದೀಕ್ಷೆ ನೀಡಿದ ಗುರು ನೀನು…

ಅನಾಥರಿಗೆ ತಂದೆಯಾಗಿ ದೀನರಿಗೆ ದಿನನಾಥನಾಗಿ
ಭಕ್ತರಿಗೆ ಗುರುವಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿ
ನಮ್ಮೆಲ್ಲರ ಭಾಗ್ಯಕಾಗಿ ಧರೆಗೆ ಬಂದ ಶರಣರ
ರೂಪದಲ್ಲಿ ಗುರುವಾಗಿ ಬಂದಿದೆ….